ನಟಿ ಕಾಜಲ್ ಅಗರ್ವಾಲ್ (Kajal Aggarwal) ಹಾಗೂ ಅವರ ಪತಿ ಗೌತಮ್ ಕಿಚ್ಲು ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಹೊಸ ವರ್ಷದ ಪ್ರಯುಕ್ತ ಪತ್ನಿಯ ಫೋಟೋವನ್ನು ಶೇರ್ ಮಾಡಿದ್ದ ಗೌತಮ್ ಕಿಚ್ಲು ಈ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ.
2022 ನಿನ್ನನ್ನು ನೋಡುತ್ತಿದ್ದೇವೆ ಎಂದು ಫೋಟೋಗೆ ಶೀರ್ಷಿಕೆ ನೀಡಿರುವ ಗೌತಮ್ ಕಿಚ್ಲು ಶೀರ್ಷಿಕೆಯಲ್ಲಿ ಗರ್ಭಿಣಿಯ ಇಮೋಜಿಯನ್ನು ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ದಂಪತಿ ಶುಭಸುದ್ದಿಯನ್ನು ನೀಡಿದೆ. ನಟಿ ಕಾಜಲ್ ಅಗರ್ವಾಲ್ ಹಾಗೂ ಉದ್ಯಮಿ ಗೌತಮ್ ಕಿಚ್ಲು ದಂಪತಿ ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.
ಗೌತಮ್ ಕಿಚ್ಲು ಅವರ ಈ ಪೋಸ್ಟ್ ನೋಡುತ್ತಿದ್ದಂತೆಯೇ ಕಾಜಲ್ ಅಭಿಮಾನಿಗಳು ಕಮೆಂಟ್ ಬಾಕ್ಸಿನಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಫೋಟೋ ಪೋಸ್ಟ್ ಮಾಡುವ ಮುನ್ನ ಗೌತಮ್ ಪತ್ನಿ ಕಾಜಲ್ ಜೊತೆ ನಿಂತಿರುವ ಅದ್ಭುತ ಫೋಟೋವೊಂದನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಎಲ್ಲರಿಗೂ ಆರೋಗ್ಯ, ಶಾಂತಿ ಹಾಗೂ ಪ್ರೀತಿ ಸಿಗಲೆಂದು ಶುಭ ಕೋರಿದ್ದಾರೆ.
ಆದರೆ ಈ ಶುಭಸುದ್ದಿಯ ಬಗ್ಗೆ ನಟಿ ಕಾಜಲ್ ಅರ್ಗವಾಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ಕಾಜಲ್ ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಪತಿಯೊಂದಿಗಿನ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಗೌತಮ್ ಕಿಚ್ಲು ಅವರ ಪೋಸ್ಟ್ ಮಾತ್ರ ಅಭಿಮಾನಿಗಳಿಗೆ ಕಾಜಲ್ ಗರ್ಭಿಣಿ ಇರಬಹುದು ಎಂಬುದನ್ನು ಊಹಿಸುವಂತೆ ಮಾಡಿದೆ.
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಹಾಗೂ ಉದ್ಯಮಿ ಗೌತಮ್ ಕಿಚ್ಲು 2020ರ ಅಕ್ಟೋಬರ್ 30ರಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
Kajal Aggarwal and husband Gautam Kitchlu set to become parents: ‘Here’s looking at you 2022’
ಇದನ್ನು ಓದಿ : Liger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
ಇದನ್ನೂ ಓದಿ : Happy New Year 2022: ಶೇ. 90ರಷ್ಟು ಕನ್ನಡ ಚಿತ್ರಗಳಿಗೆ ಹಾಕಿದ ಹಣ ವಾಪಸ್; ಈವರ್ಷ ಕನ್ನಡ ಸಿನಿಮಾಗಳ ಭವಿಷ್ಯವೇನು?