Omicron Covid-19 :‘ರುಚಿ-ವಾಸನೆ ಗ್ರಹಿಕೆ ಕಳೆದುಕೊಳ್ಳುವುದು ಓಮಿಕ್ರಾನ್​ ಲಕ್ಷಣವಲ್ಲ’-ತಜ್ಞರು

Omicron Covid-19 :ಕೋವಿಡ್​ 19 ಮೊದಲ ಹಾಗೂ ಎರಡನೆ ಅಲೆಗಳ ಸಂದರ್ಭದಲ್ಲಿ ಸೋಂಕಿಗೆ ಒಳಗಾದವರು ಸಾಮಾನ್ಯವಾಗಿ ವಾಸನೆ ಹಾಗೂ ರುಚಿ ಕಳೆದುಕೊಳ್ಳುವಂತಹ ಲಕ್ಷಣವನ್ನು ಹೊಂದಿದ್ದರು. ಈ ರೀತಿಯ ಲಕ್ಷಣ ಕಂಡು ಬಂತು ಅಂದರೆ ಸಾಕು ಕೊರೊನಾ ಸೋಂಕು ಅಂತಲೇ ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ ಇರುವ ಓಮಿಕ್ರಾನ್​ ರೂಪಾಂತರಿಯ ಸೋಂಕನ್ನು ಹೊಂದಿರುವವರಿಗೆ ರುಚಿ ಹಾಗೂ ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣ ಪತ್ತೆಯಾಗಿಲ್ಲ ಎಂದು ವೈದ್ಯಕೀಯ ತಜ್ಞರು ಮಾಹಿತಿ ನೀಡಿದ್ದಾರೆ.


ಓಮಿಕ್ರಾನ್​ ರೂಪಾಂತರಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಮಹಾರಾಷ್ಟ್ರದ ಇಂಡಿಯನ್​​ ಮೆಡಿಕಲ್​ ಅಸೋಸಿಯೇಷನ್​​ ಎಚ್ಚರಿಕೆ ನೀಡಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ವೈರಸ್​ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಾ ಹೋಗುತ್ತದೆ. ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಗೋಚರವಾದರೂ ಸಹ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಿ. ಅದನ್ನು ಹೊರತುಪಡಿಸಿ ನೀವೇ ಚಿಕಿತ್ಸೆಯನ್ನು ಮಾಡಿಕೊಳ್ಳಲು ಮುಂದಾಗುವುದು ಸುರಕ್ಷಿತವಲ್ಲ. ಮಾಸ್ಕ್​​ ಧರಿಸುವುದು , ಸಾಮಾಜಿಕ ಅಂತರ ಕಾಪಾಡುವುದು ಇವೆಲ್ಲವೂ ಅತ್ಯಂತ ಅವಶ್ಯಕವಾಗಿದೆ. ಇನ್ನೂ ಲಸಿಕೆಗೆ ಹಾಕಿಸಿಕೊಳ್ಳದವರು ಕೂಡಲೇ ನಿಮ್ಮ ಲಸಿಕೆ ಸ್ವೀಕರಿಸಿ ಎಂದು ಐಎಂಎ -ಎಂಎಸ್​ ಅಧ್ಯಕ್ಷ ಡಾ. ಸುಹಾಸ್​ ಪಿಂಗಳೆ ಹೇಳಿದ್ದಾರೆ.


ಮೊದಲ ಹಾಗೂ ಎರಡನೇ ಅಲೆಗಳಿಗೆ ಹೋಲಿಕೆ ಮಾಡಿದರೆ ಮೊದಲ ಅಲೆಯು ವಿಭಿನ್ನವಾಗಿ ಇರಲಿದೆ. ಡೆಲ್ಟಾ ರೂಪಾಂತರಿಯು ಎರಡನೇ ಅಲೆಯನ್ನು ಅತ್ಯಂತ ಭೀಕರಗೊಳಿಸಿತ್ತು. ಆದರೆ ಅದೃಷ್ಟವಶಾತ್​ ಓಮಿಕ್ರಾನ್​ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿದ್ದರೂ ಸಹ ಡೆಲ್ಟಾ ರೂಪಾಂತರಿಯಷ್ಟು ಭೀಕರತೆಯನ್ನು ತೋರುತ್ತಿಲ್ಲ. ಜ್ವರ, ಗಂಟಲು ನೋವು, ನೆಗಡಿ, ಸುಸ್ತು, ಆಯಾಸ, ಬೆನ್ನು ನೋವು, ತಲೆನೋವು ಓಮಿಕ್ರಾನ್​ ರೂಪಾಂತರಿಯ ಲಕ್ಷಣವಾಗಿದೆ ಎಂದು ಐಎಂಎ-ಎಂಎಸ್​ ಹೇಳಿದೆ.


ರುಚಿ ಹಾಗೂ ವಾಸನೆಯ ಗ್ರಹಿಕೆ ಕಳೆದುಕೊಳ್ಳುವುದು ಮೊದಲ ಹಾಗೂ ಎರಡನೆ ಅಲೆಯ ಸಂದರ್ಭದಲ್ಲಿ ಸಾಮಾನ್ಯ ಲಕ್ಷಣವೆಂದು ಪರಿಗಣಿಸಲಾಗಿತ್ತು. ಆದರೆ ಓಮಿಕ್ರಾನ್​ ರೂಪಾಂತರಿಯಲ್ಲಿ ಇದು ಕಂಡುಬರುತ್ತಿಲ್ಲ. ಇದೊಂದು ಸೌಮ್ಯ ಸ್ವಭಾವದ ರೂಪಾಂತರಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸಹ ನಾವಿದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ವೈರಸ್​ಗಳು ತಮ್ಮ ಗುಣಲಕ್ಷಣಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗಾಗಿ ನಾವು ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಎ ಎಂಎಸ್​ ಮಾಹಿತಿ ನೀಡಿದೆ.

Loss of taste and smell not noted in Omicron Covid-19 cases: IMA

ಇದನ್ನು ಓದಿ : Vaishno Devi Stampede : ವೈಷ್ಣೋದೇವಿ ಭವನದ ಕಾಲ್ತುಳಿತದಲ್ಲಿ 12 ಮಂದಿ ಸಾವು

ಇದನ್ನೂ ಓದಿ : new Order : ಕೊರೊನಾ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ: ಸುಲಿಗೆ ತಡೆಯಲು ಆರೋಗ್ಯ ಇಲಾಖೆ ಆದೇಶ

Comments are closed.