ಸೋಮವಾರ, ಏಪ್ರಿಲ್ 28, 2025
HomeCinemaKalyan Ram : ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ : ಏಜೆಂಟ್ ಹೇಗಿರಬೇಕು...

Kalyan Ram : ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ : ಏಜೆಂಟ್ ಹೇಗಿರಬೇಕು ಗೊತ್ತಾ?

- Advertisement -

ಟಾಲಿವುಡ್ ನಟ ಕಲ್ಯಾಣ್ ರಾಮ್ (Kalyan Ram) ಅವರ ಹುಟ್ಟುಹಬ್ಬದ ಸಂಭ್ರಮ. ಅವರ ಜನ್ಮದಿನದ ಉಡುಗೊರೆಯಾಗಿ ಡೆವಿಲ್ ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್ ರಾಮ್ ಈ ಬಾರಿಯೂ ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ಅದರ ಮುಂದುವರೆದ ಭಾಗವೇ ಡೆವಿಲ್.

ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಡೆವಿಲ್ ಗ್ಲಿಂಪ್ಸ್ ಭಾರೀ ಸದ್ದು ಮಾಡುತ್ತಿದೆ. 1 ನಿಮಿಷ 2 ಸೆಕೆಂಡ್ ಇರುವ ಝಲಕ್ ನಲ್ಲಿ ಡೆವಿಲ್ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಏಜೆಂಟ್ ಕಥೆ ಅನ್ನೋ ಗೊತ್ತಾಗುತ್ತಿದೆ. ಗೂಢಚಾರಿ ಹೇಗೆ ಇರಬೇಕು ಅನ್ನೋದನ್ನು ವಿವರಿಸುತ್ತಾ ಎಂಟ್ರಿ ಕೊಡುವ ಕಲ್ಯಾಣ್ ರಾಮ್ ಲುಕ್ ಗೆಟಪ್ ಗಮನಸೆಳೆಯುತ್ತದೆ‌. ಕ್ಯಾಮೆರಾ ವರ್ಕ್ ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ಕಲ್ಯಾಣ್ ರಾಮ್ ಗೆ ಜೋಡಿಯಾಗಿ ಸಂಯುಕ್ತ ಮೆನನ್ ನಟಿಸಿದ್ದಾರೆ.

ಇದನ್ನೂ ಓದಿ : Kichcha Sudeepa : ಅಭಿನಯ ಚಕ್ರವರ್ತಿ ಸುದೀಪ್‌ ಹೃದಯವಂತಿಕೆ, ಸರಳತೆಗೆ ಈ ವಿಡಿಯೋ ಸಾಕ್ಷಿ

ಇದನ್ನೂ ಓದಿ : Actress Anugowda : ಸ್ಯಾಂಡಲ್‌ವುಡ್‌ ನಟಿ ಅನುಗೌಡ ಮೇಲೆ ಹಲ್ಲೆ : ಸಾಗರದ ಸ್ಥಳೀಯ ನಿವಾಸಿಗಳ ಮೇಲೆ ದೂರು ದಾಖಲು

ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಪ್ರೆಸೆಂಟ್ ಮಾಡುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಒದಗಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಚಿತ್ರಕ್ಕೆ ಸಂಗೀತ, ಸೌಂದರರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಡೆವಿಲ್ ಸಿನಿಮಾ ಮೂಡಿಬರಲಿದೆ.

Kalyan Ram : Devil Glimpse gift for Kalyan Ram’s birthday : Do you know how an agent should be?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular