Yashasvi Jaiswal: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಜೈಸ್ವಾಲ್, ಪ್ರಥಮ ಟೆಸ್ಟ್‌ನಲ್ಲಿ ರೋಹಿತ್ ಜೊತೆ ಪಾನಿಪೂರಿ ಹುಡುಗನೇ ಓಪನರ್?

ಬಾರ್ಬೆಡೋಸ್ : ವೆಸ್ಟ್ ಇಂಡೀಸ್ ವಿರುದ್ಧ ಜುಲೈ 12ರಂದು ಆರಂಭವಾಗಲಿರುವ ಪ್ರಥಮ ಟೆಸ್ಟ್ (India vs West Indies test series) ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ದು, ಇಬ್ಬರೂ ಅರ್ಧಶತಕಗಳೊಂದಿಗೆ ಮಿಂಚಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿರುವ ಯಶಸ್ವಿ ಜೈಸ್ವಾಲ್ ಇದೇ ಮೊದಲ ಬಾರಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅಬ್ಬರಿಸಿರುವ ಯಶಸ್ವಿ ಜೈಸ್ವಾಲ್ 2022ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ದ್ವಿಶತಕ (265 ರನ್) ಬಾರಿಸಿ ಪಶ್ಚಿಮ ವಲಯ ತಂಡಕ್ಕೆ ಚಾಂಪಿಯನ್‌ಶಿಪ್ ಗೆಲ್ಲಿಸಿಕೊಟ್ಟಿದ್ದರು.

ಈ ವರ್ಷದ ಮಾರ್ಚ್‌ನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲೂ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಪ್ರಥಮ ಇನ್ನಿಂಗ್ಸ್‌ನಲ್ಲಿ 213 ರನ್ ಬಾರಿಸಿದ್ರೆ, 2ನೇ ಇನ್ನಿಂಗ್ಸ್‌ನಲ್ಲಿ ಸ್ಫೋಟಕ 144 ರನ್ ಸಿಡಿಸಿದ್ದರು. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 15 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್ 80.21ರ ಅಮೋಘ ಸರಾಸರಿಯಲ್ಲಿ 9 ಶತಕ ಹಾಗೂ 2 ಅರ್ಧಶತಕಗಳ ಸಹಿತ 1845 ರನ್ ಗಳಿಸಿದ್ದಾರೆ.

ಐಪಿಎಲ್-2023 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಅಮೋಘ ಪ್ರದರ್ಶನ ತೋರಿದ್ದ 21 ವರ್ಷದ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಿಂದ ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 163.61ರ ಸ್ಟ್ರೈಕ್‌ರೇಟ್‌ನಲ್ಲಿ 625 ರನ್ ಕಲೆ ಹಾಕಿದ್ದರು.

ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಅನುಭವಿ ಚೇತೇಶ್ವರ್ ಪೂಜಾರ ಅವರನ್ನು ಕೆಬಿರಿಯನ್ ಪ್ರವಾಸಕ್ಕೆ (India tour of West Indies) ಕೈ ಬಿಡಲಾಗಿದ್ದು, ಮುಂದಿನ ದಿನಗಳಲ್ಲಿ ಪೂಜಾರ ಸ್ಥಾನವನ್ನು ಶುಭಮನ್ ಗಿಲ್ ತುಂಬುವ ಸಾಧ್ಯತೆಯಿದೆ.

ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

ಭಾರತ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ನವದೀಪ್ ಸೈನಿ.

ಇದನ್ನೂ ಓದಿ : Ajit Agarkar : ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸಂಬಳ ಮೂರು ಪಟ್ಟು ಹೆಚ್ಚು!

ಇದನ್ನೂ ಓದಿ : Virat Kohli meets Gary Sobers : ವೆಸ್ಟ್ ಇಂಡೀಸ್ ದಿಗ್ಗಜನನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ಕೋಚ್ ದ್ರಾವಿಡ್, ಕಿಂಗ್ ಕೊಹ್ಲಿ

ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ (India tour of West Indies 2023 Fixtures)

ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜುಲೈ12-16 (ವಿಂಡ್ಸರ್ ಪಾರ್ಕ್, ಡೊಮಿನಿಕಾ)
ದ್ವಿತೀಯ ಟೆಸ್ಟ್: ಜುಲೈ 20-24 (ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್)

Yashasvi Jaiswal: Jaiswal, who shined in the practice match, is the Panipuri boy to open with Rohit in the first Test?

Comments are closed.