ಕ್ರೆಜಿಸ್ಟಾರ್, ಕನಸುಗಾರ.. ಹೀಗೆ ಕನ್ನಡ ಚಿತ್ರದಲ್ಲಿ ಹೊಸ ಇತಿಹಾಸವನ್ನೇ ಬರೆದವರು. ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ, ಸಂಗೀತಗಾರ ವಿ. ರವಿಚಂದ್ರನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಕ್ರೇಜಿಸ್ಟಾರ್ ರವಿಚಂದ್ರನ್ ಇಂದು 59ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಖ್ಯಾತ ನಿರ್ಮಾಪಕರಾಗಿರುವ ಎನ್. ವೀರಾಸ್ವಾಮಿ ಅವರ ಮಗನಾಗಿರೋ ವಿ.ರವಿಚಂದ್ರನ್ ಸ್ಯಾಂಡಲ್ ವುಡ್ ನ ಹಿರಿಯ ನಟ. ತನ್ನ ಕನಸುಗಳಿಂದಲೇ ವಿಭಿನ್ನ ಸಿನಿಮಾಗಳನ್ನು ಸೃಷ್ಟಿಸೋ ಕಲೆಗಾರ. ಹೆಣ್ಣು ಮಕ್ಕಳ ಕನಸು ಕದ್ದ ಕನಸುಗಾರ. ಒಟ್ಟಿನಲ್ಲಿ ಅಭಿಮಾನಿಗಳ ಪಾಲಿಗೆ ಇವರು ಕ್ರೇಜಿಸ್ಟಾರ್.

1961ರ ಮೇ 30ರಂದು ಜನಿಸಿದ ವಿ.ರವಿಚಂದ್ರನ್ ತನ್ನ ತಂದೆ ಹಾಕಿಕೊಟ್ಟ ಹಾದಿಯಲ್ಲೇ ಬದುಕನ್ನು ಸಾಗಿಸಿದ್ದಾರೆ. ಖ್ಯಾತ ನಿರ್ಮಾಪಕರಾಗಿರುವ ತಂದೆ ಎನ್. ವೀರಾಸ್ವಾಮಿ ಅವರು ಹುಟ್ಟುಹಾಕಿರುವ ಈಶ್ವರಿ ಸಂಸ್ಥೆಯ ಮೂಲಕ ನೂರಾರು ಸಿನಿಮಾಗಳನ್ನು ಸೃಷ್ಟಿಸಿದವರು ವಿ.ರವಿಚಂದ್ರನ್.


ಸಿಪಾಯಿ, ಪುಟ್ನಂಜ, ಕನಸುಗಾರ, ಯಾರೇ ನೀನು ಚೆಲುವೆ, ಕ್ರೇಜಿಸ್ಟಾರ್, ಸಿಪಾಯಿ, ರಣಧೀರ, ರಾಮಾಚಾರಿ, ಮನೆದೇವ್ರು, ಮಲ್ಲ, ರಸಿಕ, ಹಠವಾದಿ, ಅಣ್ಣಯ್ಯ, ಶ್ರೀರಾಮಚಂದ್ರ, ಏಕಾಂಗಿ, ಪ್ರೀತ್ಸೋದು ತಪ್ಪಾ, ಕಲಾವಿದ, ಯುದ್ದಕಾಂಡ, ಮಾಂಗಲ್ಯಂ ತಂತುನಾನೇನಾ, ಕಿಂದರಜೋಗಿ, ಪಾಂಡುರಂಗವಿಠಲ, ಚೆಲುವ, ಹುಬ್ಬಳ್ಳಿ, ಯುಗಪುರುಷ, ಅಪೂರ್ವ, ಮಾಣಿಕ್ಯ, ದೃಶ್ಯ, ಚಿಕ್ಕೆಜಮಾನ್ರು, ಒಂದಾಗೋಣಾ ಬಾ, ಮುಂಗಾರು ಮಳೆ-2, ಮಂಜಿನಹನಿ, ಸ್ನೇಹಲೋಕ, ಸಾಹುಕಾರ, ಮೊಮ್ಮಗ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ಮಿಂಚು ಹರಿಸಿದ್ದಾರೆ.

ಕೇವಲ ನಟನಾಗಿ ಮಾತ್ರವಲ್ಲದೇ ತಾನೊಬ್ಬ ಅತ್ಯುತ್ತಮ ನಿರ್ದೇಶಕ ಅನ್ನುವುದನ್ನೂ ರವಿಚಂದ್ರನ್ ಸಾಭೀತು ಪಡಿಸಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದವರೂ ಕೂಡ ಕ್ರೇಜಿಸ್ಟಾರ್. ಕನ್ನಡ ಸಿನಿಮಾಗಳ ಪಾಲಿಗೆ ಅತ್ಯಂತ ಶ್ರೀಮಂತ ಸಿನಿಮಾಗಳನ್ನು ಕೊಟ್ಟ ನಿರ್ಮಾಪಕರ ಸಾಲಿನಲ್ಲಿ ವಿ.ರವಿಚಂದ್ರನ್ ಅವರಿಗೆ ಮುಂಚೂಣಿಯ ಸ್ಥಾನ. ಸಿನಿಮಾಗಳು ಸೋತಾಗಲೂ ದೃತಿಗೆಡದೆ, ಕನ್ನಡ ಸಿನಿಮಾಗಳಿಗೆ ಕೋಟಿ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದವರು ನಮ್ಮ ಕ್ರೆಜಿಸ್ಟಾರ್.

ಇಷ್ಟೇ ಅಲ್ಲಾ ಸಂಗೀತ ಕ್ಷೇತ್ರದಲ್ಲಿಯೂ ತಾನೊಬ್ಬ ಸಮರ್ಥ ಸಂಗೀತ ನಿರ್ದೇಶಕ ಅನ್ನವುದನ್ನೂ ಕೂಡ ರವಿಚಂದ್ರನ್ ನಿರೂಪಿಸಿದ್ದಾರೆ. ಪ್ರೇಮಲೋಕ, ರಾಮಚಾರಿಯ ಹಾಡುಗಳನ್ನು ಕೇಳಿದ್ರೆ ಸಾಕು ರವಿಚಂದ್ರ ಅವರ ಸಂಗೀತ ಪ್ರೇಮ ಎಂತವರಿಗೂ ಅರ್ಥವಾಗುತ್ತೆ.

ಪತ್ನಿ, ಪುತ್ರರು, ಪುತ್ರಿಯ ಜೊತೆಗೆ ಸುಂದರ ಸಂಸಾರ ನಡೆಸುತ್ತಿರೋ ವಿ.ರವಿಚಂದ್ರನ್ ಅವರ ಪುತ್ರ ಮನೋರಂಜನ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೆಜಿಸ್ಟಾರ್ ಇನ್ನಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಲಿ ಅನ್ನೋದೇ ನಮ್ಮ ಆಶಯ. ಹ್ಯಾಪಿ ಬರ್ತಡೇ ಕ್ರೇಜಿಸ್ಟಾರ್, ಕನಸುಗಾರ ವಿ.ರವಿಚಂದ್ರನ್ ….