ಕೋಟದ ಬಾರಿಕೆರೆ, ವಂಡಾರಿನ ಮಾರ್ವೆ ಸೀಲ್ ಡೌನ್ : ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಮಹಿಳೆಗೆ ಪಾಸಿಟಿವ್

0

ಕೋಟ : ಒಂದು ವಾರಗಳ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಮಹಿಳೆಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ವಂಡಾರು ಗ್ರಾಮದ ಮಗುವಿಗೂ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೋಟದ ಬಾರಿಕೆರೆ ಹಾಗೂ ವಂಡಾರಿನ ಮಾರ್ವೆ ಪ್ರದೇಶವನ್ನು ಸಿಲ್ ಡೌನ್ ಮಾಡಲಾಗುತ್ತಿದೆ.

ಕಳೆದೊಂದು ವಾರದ ಹಿಂದೆ ಮಹಿಳೆ ಮುಂಬೈನಿಂದ ವಾಪಾಸಾಗಿದ್ದರು. ಹೀಗೆ ಬಂದಿದ್ದ ಮಹಿಳೆಯನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಸರಕಾರದ ಹೊಸ ಆದೇಶದಂತೆ ಮಹಿಳೆಯನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಕಳೆದೆರಡು ದಿನಗಳ ಹಿಂದೆ ಮಹಿಳೆ ಕೋಟತಟ್ಟು ಬಾರಿಕೆರೆಯಲ್ಲಿರುವ ತನ್ನ ಮನೆಗೆ ಬಂದಿದ್ದರು. ಆದ್ರೆ ಮಹಿಳೆಯ ಗಂಟಲು ದ್ರವದ ಪರೀಕ್ಷೆಯಲ್ಲಿ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲೀಗ ಆತಂಕ ಶುರುವಾಗಿದೆ.

ಕೊರೊನಾ ವರದಿ ಬರುವ ಮುನ್ನವೇ ಮಹಿಳೆಯನ್ನು ಮನೆಗೆ ಕಳುಹಿಸಿರುವ ಆರೋಗ್ಯಾಧಿಕಾರಿಗಳ ಕ್ರಮಕ್ಕೆ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಮಹಿಳೆಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮನೆಯಲ್ಲಿರುವವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮಾತ್ರವಲ್ಲ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಕೋಟತಟ್ಟು ಗ್ರಾಮದ ಬಾರಿಕೆರೆಯಲ್ಲಿ ಮಹಿಳೆಯ ಮನೆಯಿರುವ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ ಕಂಟೈನ್ಮೆಂಟ್ ಝೋನ್ ಅಂತಾ ಘೋಷಿಸಲಾಗುತ್ತದೆ. ಅಲ್ಲದೇ ಬಾರಿಕೆರೆಯನ್ನು ಸಂಪೂರ್ಣವಾಗಿ ಬಪರ್ ಝೋನ್ ಆಗಿ ಮಾಡಲಾಗುತ್ತದೆ. ಇನ್ನು ವಂಡಾರು ಗ್ರಾಮದಲ್ಲಿಯೂ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮುಂಬೈನಿಂ ವಾಪಾಸಾಗಿದ್ದ ದಂಪತಿಗಳನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು, ದಂಪತಿ ವಂಡಾರು ಗ್ರಾಮದ ಮಾರ್ವೆಗೆ ಬಂದಿದ್ದಾರೆ. ಇದೀಗ ದಂಪತಿಯ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅವರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಟೇನ್ಮೆಂಟ್ ಝೋನ್ ಅನ್ನಾಗಿ ಪರಿವರ್ತಿಸಿ ಸೀಲ್ ಡೌನ್ ಮಾಡಲಾಗುತ್ತಿದ್ದು, ವಂಡಾರು ಪ್ರದೇಶವನ್ನು ಬಪರ್ ಝೋನ್ ಆಗಿ ಘೋಷಿಸಲಾಗುತ್ತದೆ.

Leave A Reply

Your email address will not be published.