Kangana Ranaut : ಚಂದ್ರಮುಖಿ’2 ನಲ್ಲಿ ಕಂಗನಾ, ಹೇಗಿದೆ ಫಸ್ಟ್ ಲುಕ್

ರಾಘವ್ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ (Kangana Ranaut) ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2 ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಯ ಹೊತ್ತಲ್ಲೇ ಬೆಳ್ಳಿತೆರೆಗೆ ಬರಲಿದೆ. ಇಂದು ಕಂಗನಾ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಂಪ್ರಾದಾಯಿಕ ಉಡುಗೆ ತೊಟ್ಟು, ಬಂಗಾರದ ಆಭರಣೆಗಳಲ್ಲಿ ಕಂಗನಾ ಕಂಗೊಳಿಸಿದ್ದಾಳೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಘವ್ ಲಾರೆನ್ಸ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು.

ಸ್ಯಾಂಡಲ್‌ವುಡ್‌ ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದ ಚಂದ್ರಮುಖಿ-2 ಸಿನಿಮಾದಲ್ಲಿ ನಟ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಹಳೆಯ ದಾಖಲೆಗಳನ್ನು ಅಳಿಸಿ ಹಾಕಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಮತ್ತೆ ತೆರೆಗೆ ಬರುತ್ತಿದ್ದು, ಸಿನಿಮಾ ಸೂಪರ್‌ ಸಕ್ಸಸ್‌ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ : Actor Mohan Died : ನಿಗೂಢವಾಗಿ ಸಾವನ್ನಪ್ಪಿದ ತಮಿಳು ನಟ ಮೋಹನ್ : ಮಧುರೈನಲ್ಲಿ ಶವವಾಗಿ ಪತ್ತೆ

ಲೈಕಾ ಸಂಸ್ಥೆಯ ಸುಭಾಷ್‌ ಕರಣ್‌ ಅವರು ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಆಸ್ಕರ್‌ ಪ್ರಶಸ್ತಿ ವಿಜೇತ ಕೀರವಾಣಿ ಸುಮಧುರ ಸಂಗೀತ ಸಿನಿಮಾಕ್ಕಿದೆ. ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲದ ಹೊಣೆ ಹೊತ್ತಿದ್ದಾರೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಸೇರಿದಂತೆ ಹಲವು ಖ್ಯಾಥ ನಟ, ನಟಿಯರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಗಣೇಶ್ ಹಬ್ಬಕ್ಕೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಂದ್ರಮುಖಿ-2 ಸಿನಿಮಾ ಬಿಡುಗಡೆಯಾಗಲಿದೆ.

Kangana Ranaut : Kangana in Chandramukhi 2, how is the first look?

Comments are closed.