ಸೋಮವಾರ, ಏಪ್ರಿಲ್ 28, 2025
HomeCinemaChaitra Hallikeri : ಗುನ್ನ ನಟಿಯ ಬಾಳಲ್ಲಿ ಬಿರುಗಾಳಿ : ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ...

Chaitra Hallikeri : ಗುನ್ನ ನಟಿಯ ಬಾಳಲ್ಲಿ ಬಿರುಗಾಳಿ : ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ನಟಿ ಚೈತ್ರಾ ಹಳ್ಳಿಕೇರಿ

- Advertisement -

ಸ್ಯಾಂಡಲ್‌ವುಡ್‌ ನಟ -ನಟಿಯರು ಪೊಲೀಸ್ ಸ್ಟೇಶನ್ ಮೆಟ್ಟಿಲೇರೋದು ಕುಟುಂಬಸ್ಥರು,ಸಂಬಂಧಿಗಳ ವಿರುದ್ಧ ದೂರು ನೀಡೋದು ಕಾಮನ್. ಈಗ ಅಂತಹುದೇ ಪ್ರಕರಣ ವೊಂದರಲ್ಲಿ ಸ್ಯಾಂಡಲ್ ವುಡ್ ನಟಿ ಹಾಗೂ ಕಿರಿತೆರೆಯ ಆಂಕ್ಯರ್ ಚೈತ್ರಾ ಹಳ್ಳಿಕೇರಿ (Chaitra Hallikeri) ಪತಿಯ ವಿರುದ್ಧವೇ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪತಿಯಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಾಗಿರೋ ಚೈತ್ರಾ ಮೈಸೂರಿನಲ್ಲಿರೋ ಪತಿ ಹಾಗೂ ಮಾವನ ವಿರುದ್ದ ವಂಚನೆ ಆರೋಪ‌ ಮಾಡಿದ್ದು, ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ.

ನನ್ನ ಬ್ಯಾಂಕ್ ಅಕೌಂಟ್ ನ್ನು ಪತಿ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್ ಎಂ.ಕೆ.ಪೋರ್ಜರಿ ಸಹಿ‌ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಅಕೌಂಟ್ ನ್ನು ದುರ್ಬಳಕೆ ಮಾಡಿಕೊಂಡಿದ್ದು ಮಾತ್ರವಲ್ಲದೇ ನನ್ನ ನಕಲಿ ಸಹಿ‌ಬಳಸಿ ನನ್ನ ಚಿನ್ನಾಭರಣಗಳನ್ನು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದಾರೆ ಎಂದು ಚೈತ್ರಾ ಹಳ್ಳಿಕೇರಿ (Chaitra Hallikeri) ಆರೋಪಿಸಿದ್ದು ದೂರಿನಲ್ಲಿ‌ವಂಚನೆಯ ವಿವರ ನೀಡಿದ್ದಾರೆ.

2006 ರಲ್ಲಿ ಮೈಸೂರಿನ‌ ಜಯಲಕ್ಷ್ಮಿಪುರಂ ನಿವಾಸಿ ಬಾಲಾಜಿ ಪೋತರಾಜ್ ರನ್ನು ಚೈತ್ರಾ ವಿವಾಹವಾಗಿದ್ದರು. ಆದರೆ ಈಗ ಪತಿ ತಮ್ಮ ಬ್ಯಾಂಕ್ ಅಕೌಂಟ್ ದುರ್ಬಳಕೆ ಮಾಡಿಕೊಂಡಿ ದ್ದಾರೆ. ಅಲ್ಲದೇ ಇದನ್ನು‌ ಪ್ರಶ್ನೇ ಮಾಡಿದ್ದಕ್ಕೆ ನನಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ. ಅಂದಾಜು 14 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣವನ್ನು ಪತಿ ಹಾಗೂ ಮಾವ ಅಡವಿಟ್ಟು ಸಾಲ ಪಡೆದಿದ್ದಾರೆ ಎಂದು ಚೈತ್ರಾ (Chaitra Hallikeri) ಆರೋಪಿಸಿದ್ದು, ಮಾವ ಹಾಗೂ ಪತಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡೋದಾಗಿ ಹೇಳಿದ್ದಾರೆ.

ಗುನ್ನ ಸಿನಿಮಾದ ಮೂಲಕ ಕನ್ನಡ ಸಿನಿಮಾ‌ಇಂಡಸ್ಟ್ರಿಗೆ ಬಂದ ಚೈತ್ರಾ ತಮ್ಮ ಮೊದಲ ಸಿನಿಮಾದಲ್ಲೇ ಲಿಪ್ ಲಾಕ್ ಮಾಡಿದ್ರು ಎಂಬ ವಿವಾದಕ್ಕೂ ಗುರಿಯಾಗಿದ್ದರು. ಇದಲ್ಲದೇ ಶಿಷ್ಯ ಸೇರಿದಂತೆ ಹಲವು ಸಿನಿಮಾದಲ್ಲಿ ಚೈತ್ರಾ ಹಳ್ಳಿಕೇರಿ ನಟಿಸಿದ್ದಾರೆ. ಗುನ್ನ ಸಿನಿಮಾದಲ್ಲಿ ಚೈತ್ರಾ ಬೋಲ್ಡ್ ನಟನೆಯಿಂದ ಹೆಸರುಗಳಿಸಿದ್ದರು. ಇದಲ್ಲದೇ ಖುಷಿ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದಾರೆ. ಕಿರುತೆರೆಯ ಕುಕ್ಕರಿ ಶೋದಲ್ಲೂ ನಟಿ ಚೈತ್ರಾ ಕಾಣಿಸಿಕೊಂಡಿದ್ದು, ಕೆಲ ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದರು. ಈಗ ಚೈತ್ರಾ ವೈವಾಹಿಕ ಬದುಕಿನಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು ಕೆಲ‌ ವರ್ಷದಿಂದ ಚೈತ್ರಾ ಪತಿಯಿಂದ ದೂರವಾಗಿ ನೆಲೆಸಿದ್ದಾರೆ ಎನ್ನಲಾಗ್ತಿದೆ. ಈಗ ಇವರ ಮನೆಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಇದನ್ನೂ ಓದಿ : ‘ಮದುವೆಯಾಗದೆಯೂ ಖುಷಿಯಾಗಿರಬಹುದು’ : ವಿವಾಹದ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಕಿಯಾರಾ ಖಡಕ್​ ಉತ್ತರ

ಇದನ್ನೂ ಓದಿ : ಸ್ಯಾಂಡಲ್​ವುಡ್​ ನಿರ್ದೇಶಕ ಕೆ.ಎನ್​ ಮೋಹನ್​ಕುಮಾರ್​ ಇನ್ನಿಲ್ಲ

Kannada actress Chaitra Hallikeri Lodge Complaint Against Her Husband

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular