monkeypox outbreak : ಏನಿದು ಮಂಕಿಪಾಕ್ಸ್​ ಕಾಯಿಲೆ: ಲಕ್ಷಣಗಳು, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ

monkeypox outbreak : ಜಾಗತಿಕವಾಗಿ 100ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಪ್ರಪಂಚದಾದ್ಯಂತ ಇದೀಗ ಮಂಕಿಪಾಕ್ಸ್​ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಕಾಯಿಲೆಯು ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಿಗೆ ಸಿಮೀತವಾಗಿದೆ. ಕಳೆದೊಂದು ವಾರದಿಂದ ಮಂಕಿಪಾಕ್ಸ್​ ಎಂಬ ವೈರಸ್​ನಿಂದ ಹರಡುವ ಈ ಅಪರೂಪದ ಕಾಯಿಲೆಯು ವಿಶ್ವದಲ್ಲಿ ಮತ್ತೊಂದು ಸಾಂಕ್ರಾಮಿಕದ ಭಯವನ್ನು ಹುಟ್ಟು ಹಾಕಿದೆ.
ಇಲ್ಲಿಯವರೆಗೆ, ಸುಮಾರು 100 ಪ್ರಕರಣಗಳು ವರದಿಯಾಗಿದ್ದು, 28 ಶಂಕಿತ ಪ್ರಕರಣಗಳನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವೈರಸ್‌ಗೆ ಸ್ಥಳೀಯವಲ್ಲದ 12 ದೇಶಗಳಲ್ಲಿ ಈ ಪ್ರಕರಣಗಳು ಕಂಡುಬಂದಿವೆ. ಫ್ರಾನ್ಸ್, ಜರ್ಮನಿ, ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾ ಶುಕ್ರವಾರ ತಮ್ಮ ಮೊದಲ ಪ್ರಕರಣಗಳನ್ನು ವರದಿ ಮಾಡಿದೆ. ಇಲ್ಲಿಯವರೆಗೆ, ಈ ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ.


ಏನಿದು ಮಂಕಿಪಾಕ್ಸ್​ ಪ್ರಕರಣ ?


ಮಂಕಿಪಾಕ್ಸ್​ ಪೊಕ್ಸ್​​ವಿರಿಡೆ ಕುಟುಂಬದ ಆರ್ಥೋಪಾಕ್ಸ್​ ವೈರಸ್​ ಎಂಬ ಜೀನ್ಸ್​ಗೆ ಸೇರಿದೆ. ಇದರಲ್ಲಿ ವೆರಿಯೋಲಾ ವೈರಸ್​ (ಸಿಡುಬಿಗೆ ಕಾರಣವಾಗುತ್ತದೆ), ವ್ಯಾಕ್ಸಿನಿಯಾ ವೈರಸ್​ ಹಾಗೂ ಕೌಪಾಕ್ಸ್​ ವೈರಸ್​ ಕೂಡ ಸೇರಿದೆ. ಮಂಕಿಪಾಕ್ಸ್​ ಸಾಮಾನ್ಯವಾಗಿ ಜ್ವರ, ಶೀತ , ದದ್ದು ಹಾಗೂ ಮುಖ ಅಥವಾ ಜನನಾಂಗಗಳ ಮೇಲೆ ಗಾಯವನ್ನುಂಟು ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ ಇದು 10 ಜನರಲ್ಲಿ ಒಬ್ಬರ ಮೇಲೆ ಮಾರಕ ಪರಿಣಾಮ ಬೀರುತ್ತದೆ.


ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ನೀಡಿರುವ ಮಾಹಿತಿಯ ಪ್ರಕಾರ, ಮಂಕಿಪಾಕ್ಸ್​ನ ಮೂಲದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದೇ ಇದ್ದರೂ ಸಹ ಇದು ಆಫ್ರಿಕನ್​​ನ ಮಂಗಗಳಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಮಂಕಿಪಾಕ್ಸ್​ ಪ್ರಕರಣಗಳು ಹೆಚ್ಚಾಗಿ ಮಧ್ಯ ಹಾಗೂ ಪಶ್ಚಿಮ ಆಫ್ರಿಕಾ ಪ್ರದೇಶದಲ್ಲಿ ಕಂಡು ಬಂದಿದೆ, ಅಲ್ಲಿನ ಜನರಿಗೆ ಇದು ಸ್ಥಳೀಯ ಕಾಯಿಲೆಯಾಗಿದೆ.

ಮಂಕಿಪಾಕ್ಸ್​ ಲಕ್ಷಣಗಳು :


ಮಂಕಿಪಾಕ್ಸ್ ಸಿಡುಬಿನಲ್ಲಿ ಕಂಡುಬರುವ ರೋಗಲಕ್ಷಣಗಳಂತೆಯೇ ಇರುತ್ತದೆ ಮತ್ತು ಜ್ವರದಿಂದ ಪ್ರಾರಂಭವಾಗುತ್ತದೆ. ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯನ್ನು ಸಹ ಅನುಭವಿಸಬಹುದು. ಸಿಡುಬು ಮತ್ತು ಮಂಕಿಪಾಕ್ಸ್ ರೋಗಲಕ್ಷಣಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳನ್ನು ಊದಿಕೊಳ್ಳಲು ಕಾರಣವಾಗುತ್ತದೆ. ಆದರೆ ಸಿಡುಬು ಬಂದಾಗ ಈ ರೀತಿ ಆಗುವುದಿಲ್ಲ.
ರೋಗದ ಕಾಲಾವಧಿಯು ಸಾಮಾನ್ಯವಾಗಿ 714 ದಿನಗಳು ಆದರೆ 521 ದಿನಗಳವರೆಗೆ ಇರುತ್ತದೆ. ಜ್ವರ ಕಾಣಿಸಿಕೊಂಡ 1 ರಿಂದ 3 ದಿನಗಳ ನಂತರ ದದ್ದು ಕಾಣಿಸಿಕೊಳ್ಳುತ್ತದೆ, ಅದು ಮುಖದ ಮೇಲೆ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಅನಾರೋಗ್ಯವು ಸಾಮಾನ್ಯವಾಗಿ 24 ವಾರಗಳವರೆಗೆ ಇರುತ್ತದೆ. ಆಫ್ರಿಕಾದಲ್ಲಿ, ಮಂಕಿಪಾಕ್ಸ್ ರೋಗಕ್ಕೆ ತುತ್ತಾಗುವ 10 ಜನರಲ್ಲಿ 1 ವ್ಯಕ್ತಿಯಲ್ಲಿ ಸಾವಿಗೆ ಕಾರಣವಾಗುತ್ತದೆ ಎಂದು ತೋರಿಸಲಾಗಿದೆ ಎಂದು ಸಿಡಿಸಿ ಹೇಳಿದೆ.


ಮಂಕಿಪಾಕ್ಸ್​ಗೆ ಚಿಕಿತ್ಸೆ :


ಈ ಸೋಂಕಿಗೆ ಒಳಗಾದವರಿಗೆ ಸಾಮಾನ್ಯವಾಗಿ ಸಿಡುಬು ಲಸಿಕೆಯನ್ನೇ ನೀಡಲಾಗುತ್ತದೆ. ಇದು ಮಂಕಿಪಾಕ್ಸ್​​ ವಿರುದ್ಧ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಇದಕ್ಕೆ ಆಂಟಿ ವೈರಲ್​ ಔಷಧಿಗಳನ್ನೂ ತಯಾರಿಸಲಾಗುತ್ತಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್ ಎಲ್ಲಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕಿಸಲು ಮತ್ತು ಹೆಚ್ಚಿನ ಅಪಾಯದ ಸಂಪರ್ಕಗಳಿಗೆ ಸಿಡುಬು ಲಸಿಕೆಯನ್ನು ನೀಡುವಂತೆ ಶಿಫಾರಸು ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಸುಮಾರು ಒಂದು ಡಜನ್ ಆಫ್ರಿಕನ್ ದೇಶಗಳಲ್ಲಿ ಸಾವಿರಾರು ಮಂಕಿಪಾಕ್ಸ್ ಸೋಂಕುಗಳಿವೆ ಎಂದು ಅಂದಾಜಿಸಿದೆ. ಹೆಚ್ಚಿನವು ಕಾಂಗೋದಲ್ಲಿವೆ, ಇದು ವಾರ್ಷಿಕವಾಗಿ ಸುಮಾರು 6,000 ಪ್ರಕರಣಗಳನ್ನು ವರದಿ ಮಾಡುತ್ತದೆ. 2003 ರಲ್ಲಿ, ಆರು ಅಮೆರಿಕದ ರಾಜ್ಯಗಳಲ್ಲಿ 47 ಜನರು ದೃಢೀಕರಿಸಿದ ಅಥವಾ ಸಂಭವನೀಯ ಪ್ರಕರಣಗಳನ್ನು ಹೊಂದಿದ್ದರು. ಘಾನಾದಿಂದ ಆಮದು ಮಾಡಿಕೊಂಡ ಸಣ್ಣ ಸಸ್ತನಿಗಳ ಬಳಿ ಇರಿಸಲಾಗಿದ್ದ ಸಾಕುಪ್ರಾಣಿ ಪ್ರೈರೀ ನಾಯಿಗಳಿಂದ ವೈರಸ್​ ಹರಡಿತ್ತು ಎನ್ನಲಾಗಿದೆ.

ಇದನ್ನು ಓದಿ : BY Vijayendra : ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಗೆ ನೊರೆಂಟು ವಿಘ್ನ : ಬೇರೆಯದೇ ಲೆಕ್ಕಾಚಾರದಲ್ಲಿದೆ ಹೈಕಮಾಂಡ್

ಇದನ್ನೂ ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌

What is monkeypox outbreak that is raising concerns globally?

Comments are closed.