Megha Shetty latest Photo Shoot : ಕನ್ನಡ ಕಿರುತೆರೆಯಲ್ಲಿ ಹೆಸರು ಗಳಿಸಿ ಬೆಳ್ಳಿ ತೆರೆಗೆ ಕಾಲಿಟ್ಟ ಈ ಬೆಡಗಿ, ಸಿನಿಮಾದಲ್ಲಿ ಮಿಂಚುತ್ತಿದ್ದಂತೆ ಗ್ಲ್ಯಾಮರ್ ಬೊಂಬೆಯಾಗಿ ಮಿಂಚಿದ್ದರು. ಈಗ ರೆಟ್ರೋ ಸ್ಟೈಲ್ ನಲ್ಲಿ ಪೋಸ್ ಕೊಡೋ ಮೂಲಕ ಮತ್ತೊಮ್ಮೆ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಯುಗಾದಿ ಹಬ್ಬದ ಹೆಸರಲ್ಲಿ ಗ್ರಾಮೀಣ ಸೊಗಡಿನಲ್ಲಿ ಪೋಸ್ ನೀಡಿದ ಸುಂದರಿ ಮತ್ಯಾರೂ ಅಲ್ಲ ನಟಿ ಮೇಘಾ ಶೆಟ್ಟಿ (Megha Shetty).

ಕಿರುತೆರೆಗೆ ಬಂದವರೆಲ್ಲ ಹಿರಿ ತೆರೆಗೆ ಬರಲೇಬೇಕೆಂಬ ನಿಯಮವೇನೂ ಇಲ್ಲ. ಆದರೂ ಕೆಲವೊಮ್ಮೆ ಕಿರಿ ತೆರೆಯಲ್ಲಿ ಹೆಸರು ಗಳಿಸುತ್ತಿದ್ದಂತೆ ಬೆಳ್ಳಿತೆರೆಯಿಂದ ಆಫರ್ ಬರೋದು ಸಹಜ. ಹಾಗೇ ನಟಿಸಿದ ಮೊದಲ ಸೀರಿಯಲ್ ಗಳಿಸಿದ ಪ್ರತ್ಯಾತಿಯಿಂದಲೇ ಸಿನಿಮಾದಲ್ಲಿ ಅವಕಾಶ ಗಳಿಸಿದ ನಟಿ ಮೇಘಾ ಶೆಟ್ಟಿ.

ಕಿರುತೆರೆಯಲ್ಲಿ ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರದ ಮೂಲಕ ನೋಡುಗರ ಮನಗೆದ್ದಿದ್ದರು. ಅಷ್ಟೇ ಅಲ್ಲ ಅನುಸಿರಿಮನೆ ಪಾತ್ರದಲ್ಲಿ ಅವರು ನೀಡಿದ್ದ ಮುಗ್ಧ ಅಭಿನಯ ಕನ್ನಡ ಕಿರುತೆರೆ ಲೋಕ ದಲ್ಲೇ ಜೊತೆ ಜೊತೆಯಲಿ ಧಾರಾವಾಹಿಗೆ ಅತ್ಯಂತ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

ಮೊದಲ ಸೀರಿಯಲ್ ಬಳಿಕ ಮತ್ತೆ ಕಿರುತೆರೆಯತ್ತ ಹಿಂತಿರುಗಿಯೂ ನೋಡದ ಮೇಘಾ ಶೆಟ್ಟಿ ಸದ್ಯ ಹಿರಿತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ಸಿನಿಮಾ ಹಾಗೂ ಮಾಡೆಲಿಂಗ್ ಜೊತೆ ಜಾಹೀರಾತಿನಲ್ಲೂ ಕಾಣಿಸಿಕೊಳ್ತಿದ್ದಾರೆ. ಇದೆಲ್ಲದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿರೋ ಮೇಘಾ ಶೆಟ್ಟಿ ಆಗಾಗ ಸಖತ್ ಹಾಟ್ ಹಾಟ್ ಪೋಟೋಶೂಟ್ ನಡೆಸಿ ಪೋಟೋಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್

ಇತ್ತೀಚೆಗಷ್ಟೇ ಲೈಟ್ ಸಿಲ್ವರ್ ಬಣ್ಣದ ಮಿನುಗುವ ಸೀರೆಯಲ್ಲಿ ಸೊಂಟದ ಸೌಂದರ್ಯ ಅನಾವರಣಗೊಳಿಸುವಂತೆ ಮೇಘಾ ಪೋಸ್ ನೀಡಿದ್ದರು. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಲ್ಲದೇ ಸಖತ್ ಲೈಕ್ಸ್ ಮತ್ತು ಕಮೆಂಟ್ ಕೂಡ ಹರಿದುಬಂದಿತ್ತು. ಇದಾಗುತ್ತಿದ್ದಂತೆ ವೈಟ್ ಆಂಡ್ ವೈಟ್ ಕೋಟ್ ನಲ್ಲಿ ನಟಿ ಮೇಘಾ ಸಖತ್ ಹಾಟ್ ಹಾಟ್ ಪೋಸ್ ನೀಡಿ ಅಭಿಮಾನಿಗಳ ನಿದ್ದೆ ಗೆದ್ದಿದ್ದರು. ಆದರೆ ಈಗ ಯುಗಾದಿ ಹಬ್ಬದ ಹೊತ್ತಲ್ಲಿ ಮೇಘಾ ಶೆಟ್ಟಿ ಗೆಟಪ್ ಬದಲಾಗಿದೆ.
ಇದನ್ನೂ ಓದಿ : ಡಾಲಿ ಧನಂಜಯ ವಿದ್ಯಾಪತಿಗೆ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ನಾಯಕಿ

ಯುಗಾದಿಗಾಗಿ ಮೇಘಾ ಅಪ್ಪಟ ಮಲೆನಾಡಿನ ಹುಡುಗಿಯಾಗಿ ಬದಲಾಗಿದ್ದಾರೆ. ಕೆಂಪು ಹಾಗೂ ಕೆನೆ ಬಣ್ಣದ ಉದ್ದನೆಯ ಲಂಗಾ ಬ್ಲೌಸ್ ತೊಟ್ಟ ಮೇಘಾ ಶೆಟ್ಟಿ, ಕೆಂಪು ಬಣ್ಣದ ಮಣ್ಣಿನ ಬಳೆ ತೊಟ್ಟು, ಎರಡು ಜಡೆ ಹಾಕಿ ಜಡೆಗೆ ದಾಸವಾಳ ಹೂವು ಮುಡಿದು ತೋಟದಲ್ಲಿ ಹಸಿರಿನ ಬ್ಯಾಕ್ ಗ್ರೌಂಡ್ ನಲ್ಲಿ ಪೋಟೋ ಶೇರ್ ಮಾಡಿದ್ದಾರೆ.
ಇದನ್ನೂ ಓದಿ : ಒಂದು ಸರಳ ಪ್ರೇಮಕತೆ ಸಿನಿಮಾಕ್ಕೆ ಸಾಥ್ ಕೊಟ್ಟ ರಮ್ಯ, ಸೂಫಿ ಶೈಲಿಯ ಹಾಡು ರಿಲೀಸ್
ಮೇಘಾ ಯುಗಾದಿ ಶುಭಾಶಯದ ಜೊತೆಗೆ ಶೇರ್ ಮಾಡಿದ ಈ ಪೋಟೋಗಳು ಸಖತ್ ವೈರಲ್ ಆಗಿವೆ. 1.2 ಮಿಲಿಯನ್ ಫಾಲೋವರ್ಸ್ ಹೊಂದಿರೋ ಮೇಘನಾ ಹಾಕಿದ ಈ ಪೋಟೋಗಳಿಗೆ ಅಭಿಮಾನಿಗಳು ಮನಸೋತು ಕಮೆಂಟ್ ಮಾಡ್ತಿದ್ದಾರೆ. ಇದೇ ಮೊದಲ ಬಾರಿಗೆ ಮೇಘಾ ಇಷ್ಟು ಟ್ರೆಡಿಶನ್ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಪಕ್ಕದ ಮನೆ ಹುಡುಗಿಯಂತೆ ಪೋಸ್ ನೀಡಿದ್ದಾರೆ.

ಇನ್ನು ಕೆರಿಯರ್ ವಿಚಾರಕ್ಕೆ ಬರೋದಾದರೇ ನಟಿ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಸದ್ಯ ದಿಲ್ ಪಸಂದ್, ಕೈವ ಹಾಗೂ ಸದ್ಯ ದೊಡ್ಮನೆಯ ವಿನಯ್ ರಾಜ್ ಕುಮಾರ್ ಗೆ ನಾಯಕಿಯಾಗಿ ಗ್ರಾಮಾಯಣದಲ್ಲಿ ನಟಿಸುತ್ತಿದ್ದಾರೆ.
ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಎಲ್ಲರ ಜೊತೆ ಅತ್ಮೀಯ ಬಾಂಧವ್ಯ ಹೊಂದಿರೋ ಮೇಘಾ ಶೆಟ್ಟಿ ಸದ್ಯ ಕನ್ನಡದ ಮೋಸ್ಟ್ ಎಲಿಜಿಬಲ್ ಹಿರೋಯಿನ್ ಅಂದ್ರೂ ತಪ್ಪಾಗಲ್ಲ.
Kannada Actress Megha Shetty latest Photo Shoot in Ugadi Festivals