ಮಂಗಳವಾರ, ಏಪ್ರಿಲ್ 29, 2025
HomeCinemaಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

ಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

- Advertisement -

Kantara Saptami Gowda Photoshoot: ಸಿನಿಮಾ‌ ಅಂದ್ರೇ ಅದೊಂದು ಗ್ಲಾಮರಸ್ ಲೋಕ. ಇಲ್ಲಿ ಪ್ರತಿಭೆಯಷ್ಟೇ ಮಹತ್ವದ್ದು ಗ್ಲಾಮರ್. ಹೀರೋಯಿನ್ ಅಂದ್ರೇ ಸಾಕು ಮೈಚಳಿ ಬಿಟ್ಟು ಪೋಸ್ ಕೊಡೋ ನಾಯಕಿಯರೇ ನೆನಪಾಗೋದು. ಆದರೆ ಈ ಸಿನಿಮಾದಲ್ಲಿ ಡಿ ಗ್ಲ್ಯಾಮರ್‌ಲುಕ್ ನಿಂದಲೇ ಮಿಂಚಿದ್ಲು ನಾಯಕಿ. ಹಾಗಂತ ನಾಯಕಿ ಪಕ್ಕಾ ಹಳ್ಳಿ ಹುಡುಗಿ ಅಂದ್ಕೋಬೇಡಿ. ಸಿನಿಮಾದಲ್ಲಿ ಪಕ್ಕಾ ಲೋಕಲ್ ಗರ್ಲ್ ತರ ಕಾಣಿಸಿಕೊಂಡ ನಟಿಮಣಿ ಅಸಲಿ ಲೈಫ್ ನಲ್ಲಿ ಸಖತ್ ಮಾಡರ್ನ್. ನಾವ್ಯಾರ ಬಗ್ಗೆ ಮಾತಾಡ್ತಿದ್ದೀವಿ ಗೊತ್ತಾಯ್ತಾ ಅದು ಮತ್ಯಾರು ಅಲ್ಲಾ ಲೀಲಾ ಅಲಿಯಾಸ್ ಸಪ್ತಮಿ ಗೌಡ.

ಸಪ್ತಮಿ ಗೌಡ ಇದು ಸ್ಯಾಂಡಲ್ ವುಡ್ ಗೆ ಖಂಡಿತಾ ಹೊಸ ಹೆಸರಲ್ಲ. ಆದರೆ ಈ ಹೆಸರಿಗೊಂದು ಖ್ಯಾತಿ ಬಂದಿದ್ದು ಈಗ. ಹೌದು ಕಾಂತಾರ ಸಿನಿಮಾದಲ್ಲಿ ಸರ್ಕಾರಿ ಸಮವಸ್ತ್ರದಲ್ಲೇ ಗಮನ ಸೆಳೆದ ಸುಂದರಿ ಸಪ್ತಮಿ ಗೌಡ. ಎಣ್ಣೆ ಹಚ್ಚಿದ ಕೂದಲು, ಮಾಮೂಲು ಸೀರೆ, ಐರನ್ ಮಾಡಿದ ಗಾರ್ಡ್ ಯೂನಿಫಾರ್ಂ ನಲ್ಲೇ ಪ್ರೇಕ್ಷಕರ ಮನಗೆದ್ದ ಸಪ್ತಮಿ ಗೌಡ ಅಸಲಿ ಬದುಕಿನಲ್ಲಿ ಸಖತ್ ಸ್ಟೈಲಿಶ್. ಖಡಕ್ ಪೊಲೀಸ್ ಆಫೀಸರ್ ಉಮೇಶ್ ರವರ ಪುತ್ರಿಯಾಗಿರೋ ಸಪ್ತಮಿ ಸಖತ್ ಬೋಲ್ಡ್. ಸಿವಿಲ್‌ ಇಂಜಿನೀಯರಿಂಗ್ ಪದವೀಧರೆಯಾಗಿರೋ ಸಪ್ತಮಿ ಗೌಡ ಎಲ್ಲ ಅಂದುಕೊಂಡಂತೆ ಆಗಿದ್ದರೇ ಎಂಎಸ್ ಗಾಗಿ ವಿದೇಶಕ್ಕೆ ಹಾರ ಬೇಕಿತ್ತು.

ಆದರೆ ಲಾಕ್ ಡೌನ್ ಅವರ ಆಸೆಗೆ ತಣ್ಣೀರೆರಚಿತ್ತು‌. ಈಗ ಸಪ್ತಮಿ ಅದೃಷ್ಟ ಬದಲಾಗಿದೆ. ಆದರೆ ಸಿನಿಮಾದಲ್ಲಿ ಸಪ್ತಮಿ ನೋಡಿದವರೆಲ್ಲ ಇವರು ಡಿ ಗ್ಲ್ಯಾಮರ್ ಪಾತ್ರಕ್ಕಷ್ಟೇ ಮೀಸಲು ಅಂದುಕೊಂಡಿದ್ದಾರಂತೆ. ಆದರೆ ಸಪ್ತಮಿ ಮಾಡರ್ನ್ ಲುಕ್ ಸಖತ್ ಕಿಲ್ಲಿಂಗ್ ಆಗಿದೆ. ಶಾರ್ಟ್ಸ್, ಸ್ಕರ್ಟ್ಸ್ ಹೀಗೆ ಎಲ್ಲ ಗ್ಲ್ಯಾಮರಸ್ ಓಟ್ ಫಿಟ್ ಗೂ ಸಪ್ತಮಿ ಸಖತ್ ಮ್ಯಾಚ್ ಆಗ್ತಿದ್ದು ಬೋಲ್ಡ್ ಪೋಟೋ ಶೂಟ್ ಗಳಲ್ಲಿ ಸಪ್ತಮಿ ತಮ್ಮ ಸೌಂದರ್ಯ ಅನಾವರಣಗೊಳಿಸಿದ್ದಾರೆ.

ಸೀರೆ ತಮ್ಮ ಫೆವರಿಟ್ ಬಟ್ಟೆ ಅನ್ನೋ ಸಪ್ತಮಿ ಮಿಡಿ,ಮಿನಿ ಎಲ್ಲದಕ್ಕೂ ಸೈ. ಮಾತ್ರವಲ್ಲ ಒಂದೊಳ್ಳೆ ಕತೆ, ಚಿತ್ರಕತೆ ಸಿಕ್ಕರೇ ತೆರೆ ಮೇಲೆ ಕೂಡ ಮಾಡರ್ನ್ ಪಾತ್ರಗಳಲ್ಲಿ ನಟಿಸಲು ಸಪ್ತಮಿ ಸಿದ್ಧವಿದ್ದಾರಂತೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಪ್ತಮಿ ಟ್ರೆಂಡ್ ಜೋರಾಗಿದ್ದು, ಸಪ್ತಮಿ ಮಾಡರ್ನ್‌ ಲುಕ್ ಪೋಟೋಗಳು ಸಖತ್ ವೈರಲ್ ಆಗಿ ಅಭಿಮಾನಿಗಳ ಮನಗೆಲ್ಲುತ್ತಿದೆ.

ಇದನ್ನೂ ಓದಿ : Alia Bhatt-Ranbir Kapoor : ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್ : ತಂದೆಯಾದ ರಣಬೀರ್ ಕಪೂರ್

ಇದನ್ನೂ ಓದಿ : Rocking star Yash‌ : ಕಾಂತಾರ ನನ್ನದೇ ಸಿನಿಮಾ : ಯಶ್ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ

Kannada Actress Saptami Gowda Photoshoot Kantara

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular