kannada kirik girl samyukta hegde : ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ್ದ ನಟಿ ಸಂಯುಕ್ತಾ ಹೆಗ್ಡೆ ಇದಾದ ಬಳಿಕ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಕಿರಿಕ್ಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಚಂದನವನದಲ್ಲಿ ಗೆಲುವು ಕಾಣದೇ ಪರಭಾಷೆಯತ್ತ ಮುಖ ಮಾಡಿದ್ದರೂ ಸಹ ಅದ್ಯಾಕೋ ಗೊತ್ತಿಲ್ಲ ಯಾವುದೇ ಸಿನಿಮಾಗಳು ಸಂಯುಕ್ತಾಗೆ ದೊಡ್ಡ ಮಟ್ಟದ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಿಲ್ಲ. ಆದರೂ ತಮಿಳು ಚಿತ್ರರಂಗದಲ್ಲಿ ಯಶಸ್ಸನ್ನು ಸಾಧಿಸಲು ಸಂಯುಕ್ತಾ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ನಟಿ ಸಂಯುಕ್ತಾ ಬಿಕನಿ ಧರಿಸಿ ಫೋಟೋಗೆ ಪೋಸ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ.
ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣದ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ನೃತ್ಯದ ವಿಡಿಯೋಗಳು ವಿವಿಧ ಫೋಟೋಶೂಟ್ಗಳನ್ನು ಶೇರ್ ಮಾಡಿಕೊಳ್ಳುವ ಈ ಬಾರಿ ದುಬೈ ಪ್ರವಾಸದ ವೇಳೆ ಮಾಡಿಕೊಂಡ ಹಾಟ್ ಫೋಟೋಶೂಟ್ಗಳ ಸರಣಿಯನ್ನು ಶೇರ್ ಮಾಡಿ ಅಭಿಮಾನಿಗಳ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ.
ನೀಲಿ ಬಣ್ಣದ ಬಿಕನಿ ಧರಿಸಿರುವ ನಟಿ ಸಂಯುಕ್ತಾ ಹೆಗ್ಡೆ ನಾನು ತಾಪಮಾನವನ್ನು ತಂಪು ಮಾಡುತ್ತಿದ್ದೇನಾ ಅಥವಾ ಬಿಸಿ ಹೆಚ್ಚಿಸುತ್ತಿದ್ದೇನಾ ಎಂದು ಅಭಿಮಾನಿಗಳ ಮುಂದೆ ಪ್ರಶ್ನೆಯನ್ನಿಟ್ಟಿದ್ದಾರೆ .ಸಂಯುಕ್ತಾರ ಈ ಫೋಟೋಶೂಟ್ಗೆ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬರ್ತಿದೆ. ಅನೇಕರು ನೀವು ತಾಪಮಾನವನ್ನು ಹೆಚ್ಚಿಸಿದ್ದೀರಿ ಎಂದು ಕಮೆಂಟ್ನಲ್ಲಿ ಬರೆದಿದ್ದಾರೆ.
ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸಿನ ಬಳಿಕ ಕಾಲೇಜು ಕುಮಾರ್, ಒಮ್ಮೆ ನಿಶ್ಶಬ್ದ ಒಮ್ಮೆ ಯುದ್ಧದಂತಹ ಸಿನಿಮಾಗಳನ್ನು ಮಾಡಿದ್ದಾರೆ. ಇದಾದ ಬಳಿಕ ತಮಿಳು ಚಿತ್ರರಂಗದತ್ತ ಮುಖ ಮಾಡಿರುವ ಸಂಯುಕ್ತಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಮನ್ಮಥ ಲೀಲೆ ಸಿನಿಮಾದಲ್ಲಿ ಸಖತ್ ಹಾಟ್ ಅಭಿನಯ ಮಾಡಿದ್ದಾರೆ.
ಇದನ್ನು ಓದಿ : Womens T20 Challenge 2022 : ಮಹಿಳಾ T20 ಚಾಲೆಂಜ್ 2022 ತಂಡಗಳನ್ನು ಪ್ರಕಟಿಸಿದ BCCI
ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ
kannada kirik girl samyukta hegde in micro bikini