Baking Soda : ಬೇಕಿಂಗ್‌ ಸೋಡಾ ಬಗ್ಗೆ ನಿಮಗೆ ಗೊತ್ತೇ? ಅಡುಗೆಗಷ್ಟೇ ಅಲ್ಲ, ಆರೋಗ್ಯದ ಸಮಸ್ಯೆಗೂ ಉಂಟು ಭಾರಿ ಪ್ರಯೋಜನ!!

ಫ್ರಿಜ್‌ನಲ್ಲಿಯ ಕೆಟ್ಟ ವಾಸನೆಯನ್ನು ಹೊರಹಾಕಲು ಹಿಂಭಾಗದಲ್ಲಿ ಇಡುವ ಪುಟ್ಟ ಬಾಕ್ಸ್‌ ಅಥವಾ ಅಡುಗೆಯಲ್ಲಿ ತರಕಾರಿಗಳನ್ನು ಬೇಗನೆ ಬೇಯಿಸಲು ಸಹಾಯ ಮಾಡುವ ವಸ್ತು ನಿಮಗೆ ಗೊತ್ತಿರಬೇಕಲ್ಲವೇ. ಬೇಕಿಂಗ್‌ ಸೋಡಾ ಅಥವಾ ಸೋಡಿಯಂ ಬೈಕಾರ್ಬೋನೇಟ್‌ (Baking Soda) ಔಷಧೀಯ ಗುಣಗಳನ್ನೂ ಹೊಂದಿದೆ. ಇದು ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿಡಲು ಹೇಗೆ ಸಹಾಯ ಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ಇಲ್ಲಿದೆ ಅದರ ಮಾಹಿತಿ.

ನಿಮ್ಮ ಹಲ್ಲುಗಳ ಸಹಾಯ ಮಾಡುತ್ತದೆ:
ಹಲ್ಲುಗಳ ಮೇಲಿರುವ ಅಂಟುವಿನ ವಸ್ತು ತೆಗೆಯಲು ಬೇಕಿಂಗ್‌ ಸೋಡಾ ಬಹಳ ಪ್ರಯೋಜನವಾಗಿದೆ. ಹಲ್ಲಿನ ಮೇಲಿನ ಕೊಳೆತು ಗಮ್‌ ಡಿಸೀಸಸ್‌ (ವಸಡಿನ ಸಮಸ್ಯೆ) ಗೆ ಉತ್ತಮ ಔಷಧವಾಗಿದೆ. ಬ್ರೆಷ್‌ ಅನ್ನು ಬೇಕಿಂಗ್‌ ಸೋಡಾದ ಪುಡಿಯಲ್ಲಿ ಮುಳುಗಿಸಿ ದಿನಾ ಬ್ರಷ್‌ ಮಾಡುವಂತೆ ಬ್ರೆಷ್‌ ಮಾಡಿ. ಇದು ಹಲ್ಲಿನ ಸಮಸ್ಯೆ, ಫ್ಲೋರೈಡ್‌ ಗಳಿಂದ ರಕ್ಷಣೆ ಪಡೆಯಲು ಸಹಕಾರಿ.

ಬಾಡಿ ಡಿಯೋಡ್ರಂಟ್‌ :
ದುರ್ವಾಸನೆ ಬೀರುವ ಹೆಚ್ಚಿನ ವಸ್ತುಗಳು ಆಮ್ಲೀಯವಾಗಿರುತ್ತದೆ. ಮೂಲ ವಾಸನೆಯ ಅಣುಗಳನ್ನೂ ಹೊಂದಿರುತ್ತವೆ. ಬೇಕಿಂಗ್‌ ಸೋಡಾ ತಟಸ್ಥ, ವಾಸನೆ –ಮುಕ್ತ ಸ್ಥಿತಿಗೆ ತರುತ್ತದೆ. ನಿಮ್ಮ ಅಂಡರ್‌ ಆರ್ಮ್‌ಗಳಿಗೆ, ನಿಮ್ಮ ನಾಜೂಕಿನ ಬಟ್ಟೆಗಳ ಮೇಲೂ ಬಳಸಬಹುದು.

ಇದನ್ನೂ ಓದಿ : Cucumber For Skin: ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸೌತೆಕಾಯಿ ಪಾತ್ರ ಎಂತದ್ದು ಗೊತ್ತಾ..?

ಚರ್ಮದ ಮೇಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಸೊಳ್ಳೆ ಕಚ್ಚಿದೆಯೇ? ವಿಷಯುಕ್ತ ಹಸಿರು ಸಸ್ಯಗಳು ತಗುಲಿವೆಯೇ? ನೋವು, ತುರಿಕೆ, ಸಣ್ಣ ಕಿರಿಕಿರಿ ಮತ್ತು ಚರ್ಮದ ಮೇಲಿನ ಕೆಂಪು ಗುಳ್ಳೆಗಳನ್ನು ನಿವಾರಿಸುತ್ತದೆ. ಮೂರು ಭಾಗ ಅಡುಗೆ ಸೋಡಕ್ಕೆ ಒಂದು ಭಾಗ ನೀರು ಮಿಶ್ರಣ ಮಾಡಿ. ನಿಮ್ಮ ಚರ್ಮದ ಮೇಲೆ ಸಿಂಪಡಿಸಿ ಮತ್ತು 20 ನಿಮಿಷಗಳ ಕಾಲ ಒಣಗಲು ಬಿಡಿ. ಇಲ್ಲವೇ ಅರ್ಧ ಕಪ್‌ ಬೇಕಿಂಗ್‌ ಸೋಡಾವನ್ನು ಸ್ನಾನ ಮಾಡುವ ನೀರಿಗೆ ಸೇರಿಸಿ.

ಫೇಶಿಯಲ್‌ ಸ್ಕ್ರಬ್‌ :
ಬೇಕಿಂಗ್‌ ಸೋಡಾ ಮೈಲ್ಡ್‌ ಏಜಂಟ್‌ ಆಗಿದೆ. ಇದನ್ನು ಸೌಮ್ಯ ತ್ವಚೆಯವರು ಮುಖಕ್ಕೆ ಉತ್ತಮ ಕ್ಲೆನ್ಸರ್‌ ಆಗಿ ಬಳಸಬಹುದು. ಮೊದಲು ಮುಖವನ್ನು ನೀರಿನಿಂದ ತೊಳೆಯಿರಿ. ನಂತರ, 3 ಭಾಗ ಬೇಕಿಂಗ್‌ ಸೋಡಾ ಮತ್ತು ಒಂದು ಭಾಗ ನೀರು ಸೇರಿಸಿ ಪೇಸ್ಟ್‌ ತಯಾರಿಸಿ. ನಯವಾಗಿ ಮುಖದ ಮೇಲೆ ಉಜ್ಜಿಕೊಳ್ಳಿ ಮತ್ತು ನೀರಿನಿಂದ ತೊಳೆಯಿರಿ.

ತ್ವಚೆಯನ್ನು ಮೃದುವಾಗಿಸುತ್ತದೆ :
ಅರ್ಧ ಕಪ್‌ ಬೇಕಿಂಗ್‌ ಸೋಡಾವನ್ನು ನಿಮ್ಮ ಸ್ನಾನದ ನೀರಿಗೆ ಸೇರಿಸಿ. ಇದು ಆಸಿಡ್‌ಗಳನ್ನು ನ್ಯೂಟ್ರಲೈಜ್‌ ಮಾಡುತ್ತದೆ. ಇದು ಬೆವರು ಮತ್ತು ಎಣ್ಣೆಯನ್ನು ಸ್ವಚ್ಛವಾಗಿಸಿ ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ.

ಮಕ್ಕಳ ಆಟಿಕೆಗಳನ್ನು ಸ್ವಚ್ಛಗೊಳಿಸಲು :
ಮಕ್ಕಳ ಆಟಿಕೆಗಳನ್ನು ಸ್ವಚ್ಚಗೊಳಿಸಲು ಹಾನಿಕಾರಕ ಕೆಮಿಕಲ್‌ಗಳನ್ನು ಉಪಯೋಗಿಸುವ ಬದಲಿಗೆ ಬೇಕಿಂಗ್‌ ಸೋಡಾ ಬಳಸಬಹುದು. ನಿನಪಿಡಿ ಬೇಕಿಂಗ್‌ ಸೋಡಾ ಒಂದೇ ಕೀಟಾಣುಗಳನ್ನು ಹೋಗಲಾಡಿಸುವುದಿಲ್ಲ ಅದರ ಜೊತೆಗೆ ವಿನೇಗಾರ್‌ ಅನ್ನು ಸೇರಿಸಿದಾಗ ಅದು ಉತ್ತಮ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಮೊದಲು ಬೇಕಿಂಗ್‌ ಸೋಡಾ ಮತ್ತು ವಿನೇಗಾರ್‌ನಿಂದ ಸ್ವಚ್ಛಗೊಳಿಸಿ, ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ : Save Water at Home : ಮನೆಯಲ್ಲಿ ನೀರಿನ ಸದ್ಬಳಕೆ ಮಾಡುವುದಾದರೂ ಹೇಗೆ? ಇಲ್ಲಿದೆ ಸರಳ ಟಿಪ್ಸ್‌

(Baking Soda helps body and skin)

Comments are closed.