ತುಪ್ಪಾ …ಬೇಕಾ ತುಪ್ಪಾ ಎಂದು ಕನ್ನಡಿಗರಿಗೆ ಮತ್ತೇರಿಸಿದ್ದ ಪಂಜಾಬಿ ಹುಡುಗಿ ರಾಗಿಣಿ ದ್ವಿವೇದಿ ( Ragini Dwivedi) ಸದ್ಯ ಕನ್ನಡ ಸಿನಿಮಾಗಳ (Kannada Cinema) ಜೊತೆ ಸೋಷಿಯಲ್ ಮೀಡಿಯಾದಲ್ಲೂ (Social Media) ಸಖತ್ ಬ್ಯುಸಿಯಾಗಿದ್ದಾರೆ. ಸದಾಕಾಲ ಅಭಿಮಾನಿಗಳು ಹುಬ್ಬೇರಿಸುವಂತ ಪೋಟೋಶೂಟ್ ಗಳನ್ನು ಶೇರ್ ಮಾಡೋ ರಾಗಿಣಿ ವೀಕೆಂಡ್ ಮೂಡ್ ನಲ್ಲಿರೋ ಪಡ್ಡೆಗಳಿಗೆ ಮಾತ್ರ ರಾತ್ರಿ ನಿದ್ದೆ ಕಸಿಯೋ ರಾಗಿಣಿ ಕಲರ್ ಫುಲ್ ಪೋಟೋ (Ragini Dwivedi Photoshoot) ಕೊಟ್ಟು ಕಣ್ತುಂಬಿಕೊಳ್ಳಿ ಎಂದಿದ್ದಾರೆ.

ಮಾಡೆಲಿಂಗ್ ಮೂಲಕ ಕೆರಿಯರ್ ಆರಂಭಿಸಿ ಕನ್ನಡದಲ್ಲಿ ವಿಭಿನ್ನ ಪಾತ್ರಗಳ ಮೂಲಕ ನೆಲೆನಿಂತ ನಟಿ ರಾಗಿಣಿ ದ್ವಿವೇದಿ ಸದ್ಯ ಸಿನಿಮಾಗಿಂತ ಸೋಷಿಯಲ್ ಮೀಡಿಯಾದಲ್ಲೇ ಹೆಚ್ಚು ಸದ್ದು ಮಾಡ್ತಿದ್ದಾರೆ. ಮೊನ್ನೆ ಮೊನ್ನೇ ಗಣೇಶ ಚತುರ್ಥಿಗೆ ಮದುವೆ ಹೆಣ್ಣಿನಂತೆ ಅಲಂಕಾರ ಮಾಡಿಕೊಂಡು ನಾಚಿ ನೀರಾಗುವ ಹೆಣ್ಣಿನಂತೆ ಕಂಬಗಳ ಹಿಂದೆ ಅಡಗಿ ನಿಂತು ಪೋಸ್ ನೀಡಿದ್ದ ರಾಗಿಣಿ ಒಂದೇ ವಾರದಲ್ಲಿ ಸಖತ್ ಹಾಟ್ ಹಾಟ್ ಪೋಸ್ ನೀಡಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

ಲೈಟ್ ಪಿಂಕ್ ಶಾರ್ಟ್ ಗೌನ್ ನಲ್ಲಿ ರಾಗಿಣಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ ಗೌನ್ ಓಫನ್ ,ಡೀಪ್ ನೆಕ್ ವಿನ್ಯಾಸ ಹೊಂದಿದ್ದು ರಾಗಿಣಿ ಸೌಂದರ್ಯವನ್ನು ಧಾರಾಳವಾಗಿ ಪ್ರದರ್ಶಿಸುವಂತಿದೆ. ಬಾಲಿವುಡ್ ನಂತ ಬೋಲ್ಡ್ ಪೋಟೋಸ್ ನೋಡಿದ ಅಭಿಮಾನಿಗಳು ಅಬ್ಬಬ್ಬಾ ರಾಗಿಣಿ ಎಂದು ಮೂಗಿನ ಬೆರಳಿಡುತ್ತಿದ್ದಾರೆ.
ಇದನ್ನೂ ಓದಿ : ಸ್ವಿಮ್ಮಿಂಗ್ ಪೂಲ್‌ನಲ್ಲಿ ರಾಗಿಣಿ ದ್ವಿವೇದಿ : ತುಪ್ಪದ ಬೆಡಗಿಯ ಅವತಾರಕ್ಕೆ ಫ್ಯಾನ್ಸ್ ಫಿದಾ

ಒಂದಲ್ಲ ಎರಡಲ್ಲ ಏಳೆಂಟು ಬೋಲ್ಡ್ ಪೋಸ್ ಗಳಲ್ಲಿ ರಾಗಿಣಿ ಪೋಟೋ ತೆಗೆಸಿಕೊಂಡಿದ್ದು, ಪೋಟೋ,ಮೇಕಪ್,ಕಾಸ್ಟ್ಯೂಮ್ ಕರ್ಟಸಿ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನೈಟ್ ಮೋಡ್ ನಲ್ಲಿ ಮಾದಕ ರಾಗಿಣಿ ಪೋಸ್ ನೋಡಿದ ಪಡ್ಡೆ ಹೈಕಳು ವಾವ್ ಎನ್ನುತ್ತ ಪೋಟೋಸ್ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಸಪ್ತಮಿಯ ಲೀಲಾವತಾರ ! ಹಬ್ಬದ ರಂಗೇರಿಸಿದ ಕಾಂತಾರ ಚೆಲುವೆ

ಸದ್ಯ ರಾಗಿಣಿ ದ್ವಿವೇದಿ ಪ್ಯಾನ್ ಇಂಡಿಯಾ ಸಿನಿಮಾ ವೃಷಭದಲ್ಲಿ ನಟಿಸುತ್ತಿದ್ದು ಈ ಸಿನಿಮಾದ ಶೂಟಿಂಗ್ ಯುಕೆಯಲ್ಲೂ ನಡೆದಿದೆ. ಇದಲ್ಲದೇ ಹಲವು ಮಹಿಳಾ ಪ್ರಧಾನ ಚಿತ್ರಗಳ ಕಥೆ ರಾಗಿಣಿ ಕೈಯಲ್ಲಿದ್ದು ಸದ್ಯದಲ್ಲೇ ರಾಗಿಣಿ ಹೊಸ ಸಿನಿಮಾ ಅನೌನ್ಸ್ ಮಾಡೋ ಸಿದ್ಧತೆಯಲ್ಲಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಒಂದಾದ ಮೇಲೊಂದರಂತೆ ಒಂದಕ್ಕಿಂತ ಒಂದು ಹಾಟ್ ಹಾಟ್ ಪೋಟೋಶೂಟ್ ಮಾಡಿಸ್ತಿರೋ ರಾಗಿಣಿ ಇತ್ತೀಚಿಗೆ ಸ್ವಿಮ್ಮಿಂಗ್ ಫೂಲ್ ನ ನೀರೆಲ್ಲ ಬಿಸಿಯಾಗುವಷ್ಟು ಮಾದಕವಾಗಿ ಕಾಣಿಸಿಕೊಂಡಿದ್ದರು. ವೀರಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ರಾಗಿಣಿ ಇದುವರೆಗೂ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ.

ಅಂದಾಜು 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿಗೆ ಶಿವ ಸಿನಿಮಾದ ನಟನೆಗೆ ಸೈಮಾ ಅವಾರ್ಡ್ ಕೂಡ ಸಂದಿದೆ. ಕರ್ನಾಟಕದಲ್ಲಿ ವಾಸವಾಗಿ, ಇಲ್ಲಿಯವರೇ ಆಗಿ ಹೋಗಿರೋ ರಾಗಿಣಿ ತಮ್ಮ ಸೇವಾ ಸಂಸ್ಥೆಯ ಮೂಲಕ ಸಾಕಷ್ಟು ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಶ್ಮಾನವಾಸಿ ಕಾರ್ಮಿಕರಿಗೆ, ಬಡವರಿಗೆ ಊಟ ಉಪಚಾರ ನೀಡಿದ್ದರು.
ಇದನ್ನೂ ಓದಿ : ಚಿರು ಆಸೆಯಂತೆ ನಟನೆಯಲ್ಲಿ ಬ್ಯುಸಿಯಾದ ಮೇಘನಾ ರಾಜ್ ಸರ್ಜಾ : ತತ್ಸಮ ತದ್ಭವ ಬಳಿಕ ಅಮರ್ಥಕ್ಕೆಜೈ ಎಂದ ನಟಿ

ಅಲ್ಲದೇ ಬಡ ಕಾರ್ಮಿಕರಿಗೆ ದಿನಸಿ ವಿತರಣೆ ಕೂಡ ಮಾಡಿದ್ದರು. ಕರ್ನಾಟಕದಲ್ಲಿ ಅಭಿಮಾನಿ ಸಂಘವನ್ನು ಹೊಂದಿರೋ ನಟಿಮಣಿ ಎಂಬ ಖ್ಯಾತಿ ಪಡೆದಿರೋ ರಾಗಿಣಿ ಅಡುಗೆ ಮಾಡೋ ಹವ್ಯಾಸವನ್ನು ಹೊಂದಿದ್ದಾರೆ. ತಮ್ಮದೇ ಅಡುಗೆಯ ಯೂಟ್ಯೂಬ್ ಚಾನೆಲ್ ಹೊಂದಿರೋ ರಾಗಿಣಿ, ಫ್ರೀಟೈಂ ಸಿಕ್ಕಾಗಲೆಲ್ಲ ಹೊಸ ಹೊಸ ಅಡುಗೆ ಸಿದ್ಧಪಡಿಸಿ ಸವಿದು ಖುಷಿ ಪಡುತ್ತಾರೆ. ಮಾತ್ರವಲ್ಲ ಎಲ್ಲೇ ಶೂಟಿಂಗ್ ಹೋದರೂ ಅಲ್ಲಿನ ಲೋಕಲ್ ಫುಡ್ ಸವಿಯೋದನ್ನು ರಾಗಿಣಿ ಮರೆಯೋದಿಲ್ಲ. ಮಾತ್ರವಲ್ಲ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡೋ ರಾಗಿಣಿ ಯೋಗಾಭ್ಯಾಸದಲ್ಲೂ ತೊಡಗಿಕೊಂಡಿದ್ದಾರೆ.
Kannada Movie Actress Ragini Dwivedi Latest Photoshoots Goes Viral