ದಿನ ಭವಿಷ್ಯ : ಸೌಭಾಗ್ಯ ಯೋಗದಿಂದ ಈ ರಾಶಿಯವರಿಗೆ ಶುಭಫಲ

ದಿನಭವಿಷ್ಯ ಇಂದು ಸೆಪ್ಟೆಂಬರ್‌ 23 2023 ಶನಿವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಧನಸ್ಸು ರಾಶಿಗೆ ಸಾಗುತ್ತಾನೆ. ಮೂಲ ನಕ್ಷತ್ರ ಮತ್ತು ಪೂರ್ವಾಷಾಢ ನಕ್ಷತ್ರಗಳು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ದಿನಭವಿಷ್ಯ ಇಂದು ಸೆಪ್ಟೆಂಬರ್‌ 23 2023 ಶನಿವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಧನಸ್ಸು ರಾಶಿಗೆ ಸಾಗುತ್ತಾನೆ. ಮೂಲ ನಕ್ಷತ್ರ ಮತ್ತು ಪೂರ್ವಾಷಾಢ ನಕ್ಷತ್ರಗಳು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಮೇಷ ರಾಶಿ
ವ್ಯಾಪಾರಸ್ಥರಿಗೆ ಅಧಿಕ ಲಾಭ, ಮನೆಯಲ್ಲಿ ಆಹ್ಲಾದಕರ ವಾತಾವರಣ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಕ್ಕಳ ವಿಚಾರದಲ್ಲಿ ನೆಮ್ಮದಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಪುಣ್ಯ ಕ್ಷೇತ್ರಗಳ ದರ್ಶನದಿಂದ ಮಾನಸಿಕ ನೆಮ್ಮದಿ. ಸಂಗಾತಿಯ ಬೆಂಬಲ ದೊರೆಯಲಿದೆ.

ವೃಷಭ ರಾಶಿ
ಉದ್ಯೋಗ, ವ್ಯವಹಾರದಲ್ಲಿ ಏರಿಳಿತಗಳನ್ನು ಎದುರಿಸಲಿದ್ದೀರಿ. ಆರೋಗ್ಯ ಮತ್ತು ಆಹಾರ ಸೇವೆಯ ಬಗ್ಗೆ ತೀರಾ ಎಚ್ಚರಿಕೆಯನ್ನು ವಹಿಸಿ. ದುರಾಸೆಯಿಂದ ಮಾನಸಿಕವಾಗಿ ಅಶಾಂತಿ. ಇತರರು ನಿಮ್ಮ ದಾರಿ ತಪ್ಪಿಸುವ ಸಾಧ್ಯತೆಯಿದೆ ಎಚ್ಚರಿಕೆವಹಿಸಿ. ವಿವಾದಗಳಿಂದ ದೂರವಿರಿ.

ಮಿಥುನ ರಾಶಿ
ಸಂಬಂಧಿಕರಿಂದ ಆರ್ಥಿಕ ಸಹಕಾರ. ಭೂಮಿ ಖರೀದಿಸಲು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ. ಪ್ರಮುಖ ವಿಚಾರಗಳ ಕುರಿತು ಪೋಷಕರ ಜೊತೆಗೆ ಚರ್ಚೆ ನಡೆಸಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಪ್ರಗತಿ. ಪ್ರಮುಖ ಯೋಜನೆಗಳು ಇಂದು ಲಾಭವನ್ನು ತರಲಿದೆ.

ಕರ್ಕಾಟಕ ರಾಶಿ
ಬ್ಯಾಂಕಿನಿಂದ ಸಾಲ ಪಡೆಯುವ ಯೋಚನೆ ಇದ್ದರೆ ಇಂದೇ ಅರ್ಜಿ ಸಲ್ಲಿಸಿ, ಸುಲಭವಾಗಿ ಸಾಲ ದೊರೆಯಲಿದೆ. ಈ ರಾಶಿಯವರಿಗೆ ಇಂದು ಹೆಚ್ಚಿನ ಪ್ರಗತಿಗೆ ಅವಕಾಶವಿದೆ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ.‌

ಇದನ್ನೂ ಓದಿ : ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಸಿಂಹ ರಾಶಿ
ಸಹೋದರರ ನಡುವಿನ ಮನಸ್ಥಾಪ ಇಂದು ಕೊನೆಯಾಗುತ್ತದೆ. ಪಾಲುದಾರರ ಜೊತೆಗೆ ವ್ಯಾಪಾರಕ್ಕೆ ಅನುಕೂಲಕರ ದಿನ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪೋಷಕರ ಸಹಕಾರದಿಂದ ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ವಿಯಾಗುವಿರಿ.

ಕನ್ಯಾ ರಾಶಿ
ಸಾಲ ಮರುಪಾವತಿಯಿಂದ ಯಶಸ್ಸು. ಜೊತೆಗೆ ನೀವು ನೀಡಿದ ಸಾಲವೂ ಮರಳಿ ಬರಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯವು ಕೊನೆಗೊಳ್ಳುತ್ತದೆ. ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಆರ್ಥಿಕವಾಗಿ ದೊಡ್ಡಮಟ್ಟದ ಲಾಭವನ್ನು ಪಡೆಯುವ ಸಾಧ್ಯತೆಯಿದೆ.

ತುಲಾ ರಾಶಿ
ಮಾಡುವ ಯಾವುದೇ ಕೆಲಸಗಳಲ್ಲಿಯೂ ಯಶಸ್ವಿಯಾಗುತ್ತಾರೆ. ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುತ್ತದೆ. ಮಾತಿನಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ತಾಯಿಯ ಜೊತೆಗಿನ ಮನಸ್ಥಾಪ ಇಂದೇ ಕೊನೆಯಾಗುತ್ತದೆ. ಬಾಕಿ ಉಳಿದ ಕಾರ್ಯಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿ.

ಇದನ್ನೂ ಓದಿ : ಹೊಸ ಪಡಿತರ ಚೀಟಿ : ಸರಕಾರದಿಂದ ಗುಡ್‌ನ್ಯೂಸ್‌

ವೃಶ್ಚಿಕ ರಾಶಿ
ತಾಳ್ಮೆ ಹಾಗೂ ಧೈರ್ಯದಿಂದ ಕೆಲಸ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಪ್ರೇಮ ಜೀವನವು ಇಂದು ಸುಖಮಯವಾಗಿ ಇರುತ್ತ ವ್ಯಾಪಾರಿಗಳು ಇಂದು ವ್ಯವಹಾರ ಕ್ಷೇತ್ರದಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿ. ದೂರ ಪ್ರಯಾಣದಿಂದ ಯಶಸ್ಸು ನಿಮಗೆ ದೊರೆಯಲಿದೆ.

ಧನಸ್ಸು ರಾಶಿ
ನಿಮಗೆ ಇಷ್ಟವಾಗುವ ಕೆಲಸಗಳನ್ನು ಮಾತ್ರವೇ ಮಾಡಿ, ಉಳಿದ ಕೆಲಸಗಳನ್ನು ಮುಂದೂಡಿಕೆ ಮಾಡುವುದು ಉತ್ತಮ. ವಿದೇಶದಲ್ಲಿ ವಿದ್ಯಾಭ್ಯಾಸದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರ. ಮಕ್ಕಳ ಮದುವೆಗೆ ಇರುವ ಅಡೆತಡೆಗಳು ಪೋಷಕರ ಸಹಕಾರದಿಂದ ಬಗೆ ಹರಿಯಲಿದೆ.

ಮಕರ ರಾಶಿ
ಜೀವನದ ಪ್ರಮುಖ ಬದಲಾವಣೆಗಳು ಇಂದು ನಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ತಲೆನೋವು ಎದುರಾಗಲಿದೆ. ಕುಟುಂಬದಲ್ಲಿ ನೆಮ್ಮದಿ ದೊರೆಯಲಿದೆ. ಸಂಗಾತಿಯಿಂದ ಸಹಕಾರ ದೊರೆಯಲಿದೆ. ಬಾಕಿ ಉಳಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ಕುಂಭ ರಾಶಿ
ಕೆಲಸ ಕಾರ್ಯಗಳನ್ನು ಮಾಡುವಾಗ ಎಚ್ಚರಿಕೆ ವಹಿಸಿ. ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವವರಿಗೆ ಇಂದು ಸಕಾಲ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಡಕು ಉಂಟಾಗಲಿದೆ. ಪರಿಚಯಸ್ಥರ ಮನೆಗೆ ಭೇಟಿಯಿಂದ ಅನುಕೂಲಕರ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ, ಇಲ್ಲವಾದ್ರೆ ಭಾರೀ ನಷ್ಟ ಎದುರಿಸಬೇಕಾಗುತ್ತದೆ.

ಮೀನ ರಾಶಿ
ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಯಿದೆ. ಹಳೆಯ ಹೂಡಿಕೆಗಳು ಇಂದು ನಿಮಗೆ ಲಾಭವನ್ನು ತಂದುಕೊಡಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಹಕಾರ ದೊರೆಯಲಿದೆ. ಬಾಳ ಸಂಗಾತಿಯ ಜೊತೆಗೆ ಹೊಂದಾಣಿಕೆ ಅತೀ ಅಗತ್ಯ. ಕೋಪವನ್ನು ನಿಯಂತ್ರಿಸಿಕೊಂಡ್ರೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

Horoscope Today 23 September 2023 Zordic Sign

Comments are closed.