ಸೋಮವಾರ, ಏಪ್ರಿಲ್ 28, 2025
HomeCinemaKannada Sahitya Sammelana : ಅಗಲಿ ವರ್ಷ ಸಂದರೂ ಬಡಜನರ ಪಾಲಿಗೆ ವರದಾನವಾದ ಅಪ್ಪು; ಹೇಗೆ...

Kannada Sahitya Sammelana : ಅಗಲಿ ವರ್ಷ ಸಂದರೂ ಬಡಜನರ ಪಾಲಿಗೆ ವರದಾನವಾದ ಅಪ್ಪು; ಹೇಗೆ ಗೊತ್ತಾ..?

- Advertisement -

ನಟ ಪುನೀತ್‌ ರಾಜ್‌ಕುಮಾರ್‌ ಒಂದು ವರ್ಷ ಕಳೆದರೂ ಇಂದಿಗೂ ಅವರ ಅಗಲಿಕೆ ನೋವು ಇನ್ನೂ ಮಾಸಿಲ್ಲ. ನಟ ಪುನೀತ್‌ ಬದುಕಿದ್ದಾಗಲೂ ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿದ್ದರು. ಇದೀಗ ಅಪ್ಪು ಅಗಲಿದ ನಂತರವೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಅದಕ್ಕೆ ನಿದರ್ಶನವೆಂದರೆ ಇಂದು (ಜನವರಿ 6) ರಂದು ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ವ್ಯಕ್ತಿಯೊಬ್ಬರು ಕೇವಲ ಒಂದು ಗಂಟೆಯಲ್ಲಿ ನೂರು ಅಪ್ಪು ಭಾವಚಿತ್ರಗಳನ್ನು ಮಾರಾಟ ಮಾಡಿದ್ದಾರೆ.

ಹಾಗಾಗಿ ವ್ಯಕ್ತಿಯೊಬ್ಬರು ತಮ್ಮ ಈ ಕಾಯಕದಿಂದ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗಿದ್ದು, ಬೆಳಿಗ್ಗೆಯಿಂದ ಮಾರಾಟ ಮಳಿಗೆಗಳು ಶುರುವಾಗಿದೆ. ಮಳಿಗೆಗಳಲ್ಲಿ ವ್ಯಾಪಾರ ಪ್ರಾರಂಭಗೊಂಡ ಒಂದು ಗಂಟೆಯಲ್ಲಿ ವ್ಯಾಪಾರಿಯೊಬ್ಬರು ಅಪ್ಪುವಿನ ಫ್ರೇಂ ಹೊಂದಿದ್ದ ನೂರು ಫೋಟೋಗಳನ್ನು ಮಾರಾಟ ಮಾಡಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ವ್ಯಾಪಾರಿಯು ತಮ್ಮ ಮಳಿಗೆಯಲ್ಲಿ ಅಪ್ಪುವಿನ ಪೋಟೋವನ್ನು ಮಾರಾಟ ಮಾಡುವುದನ್ನು ಕೂಡ ತಿಳಿಸಿದ್ದಾರೆ.

ಕೇವಲ ಒಂದು ಗಂಟೆಯಲ್ಲಿ ಅಪ್ಪುವಿನ ನೂರು ಪೋಟೋ ಮಾರಾಟವಾಗಿರುವುದು ಪುನೀತ್‌ ಅವರ ಬಗ್ಗೆ ಜನರಿಗಿರುವ ಪ್ರೀತಿ ಗೌರವಕ್ಕೆ ಉದಾಹರಣೆ ಆಗಿದೆ. ಪುನೀತ್‌ ಅವರ ಹಿರಿಮೆಗೆ ಇದೊಂದೆ ಉದಾಹರಣೆ ಆಗಿರದೇ, ಅಪ್ಪುವಿನ ಸಾವಿನ ನಂತರ ಅವರ ಸಮಾಧಿ ಸ್ಥಳವಾದ ಕಂಠೀರವ ಬಳಿ ಕೂಡ ಹಲವರು ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲಿ ಸಹ ಪುನೀತ್‌ ಅವರ ಭಾವಚಿತ್ರ, ಟೀ-ಶರ್ಟ್‌ಗಳು, ಚಹಾ, ಕಾಫಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಸಮಾಧಿಯನ್ನು ನೋಡಲು ಹೋಗುವವರು ಹೂ ಕೊಂಡೊಯ್ಯಲು ಹೂವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಕೈ ತುಂಬಾ ವ್ಯಾಪಾರವಾಗುತ್ತಿದೆ. ಇನ್ನೂ ಹೂ ಕಟ್ಟಿ ಮಾರುವ ಮಹಿಳೆಯರು, ಅಜ್ಜಿಯಂದಿರು ತಮ್ಮ ಜೀವನ ನಿರ್ವಹಣೆಗೆ ನೆರವಾದ ಅಪ್ಪುವನ್ನು ನೆನೆಯದ ದಿನ ಇಲ್ಲವಾಗಿದೆ.

ಇದನ್ನೂ ಓದಿ : Sidharth Malhotra-Kiara Advani : ಮತ್ತೊಂದು ‌ಮದುವೆಗೆ ಸಜ್ಜಾದ ಬಾಲಿವುಡ್: ಸದ್ಯದಲ್ಲೇ ಹಸೆಮಣೆ ಏರಲಿದ್ದಾರಂತೆ ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ..!

ಇದನ್ನೂ ಓದಿ : Sunil Babu passed away : ಸೀತಾ ರಾಮಂ ಕಲಾ ನಿರ್ದೇಶಕ ಸುನೀಲ್ ಬಾಬು ವಿಧಿವಶ : ಸಂತಾಪ ಸೂಚಿಸಿದ ನಟ ದುಲ್ಕರ್ ಸಲ್ಮಾನ್

ಇದನ್ನೂ ಓದಿ : ಕವಿಯಾದ ‘ನಟ ರಾಕ್ಷಸ’ ಡಾಲಿ ಧನಂಜಯ್ : ಹತ್ತು ಸಾಲುಗಳ ಕವಿತೆಯ ಹಿಂದಿನ ಮರ್ಮವೇನು?

ಇನ್ನೂ ಅಪ್ಪು ಅವರ ಸಮಾಧಿ ನೋಡಲು ಬರುವ ಜನರನ್ನು ಗುರಿಯಾಗಿಟ್ಟುಕೊಂಡೆ ಕಂಠೀರವ ಸ್ಟುಡಿಯೋದ ಸುತ್ತ ವ್ಯಾಪಾರ ವಲಯ ಆರಂಭವಾಗಿ ಬಿಟ್ಟಿದೆ. ಹಾಗಾಗಿ ಆನೆ ಇದ್ದರೂ ಸಾವಿರ, ಹೋದರು ಸಾವಿರ ಎಂಬಂತೆ, ಅಪ್ಪು ಇದ್ದಾಗಲೂ ಸಾವಿರ ಜನರಿಗೆ ಸಹಾಯ ಮಾಡಿದ್ದಾರೆ. ಇದೀಗ ಅಪ್ಪು ಅಗಲಿಕೆಯ ನಂತರವೂ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಿದ್ದಾರೆ.

Kannada Sahitya Sammelana : Appu is a boon to the poor on the occasion of one Year ; How do you know..?

RELATED ARTICLES

Most Popular