Couple of cardiac arrests: ವಿಮಾನದಲ್ಲಿ ಎರಡೆರಡು ಬಾರಿ ಹೃದಯ ಸ್ತಂಭನವಾದ ವ್ಯಕ್ತಿಯನ್ನು ಕಾಪಾಡಿದ ಭಾರತೀಯ ಮೂಲದ ವೈದ್ಯ

ದೆಹಲಿ: (Couple of cardiac arrests) ಭಾರತೀಯ ಮೂಲದ ವೈದ್ಯರೊಬ್ಬರು ಭಾರತಕ್ಕೆ ಪ್ರಯಾಣಿಸುತ್ತಿದ್ದ ದೀರ್ಘಾವಧಿ ವಿಮಾನದಲ್ಲಿ ಐದು ಗಂಟೆಗಳ ಕಾಲ ಸತತ ಪ್ರಯತ್ನದಿಂದ ಹೋರಾಡಿ ಎರಡೆರಡು ಬಾರಿ ಹೃದಯ ಸ್ತಂಭನಕ್ಕೊಳಗಾದ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.

ವಿಮಾನ ಪ್ರಯಾಣದಲ್ಲಿದ್ದಾಗ ನಲವತ್ತಮೂರು ವರ್ಷದ ವ್ಯಕ್ತಿಯೊಬ್ಬರು ಹೃದಯಸ್ತಂಭನ(Couple of cardiac arrests)ಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅದೇ ವಿಮಾನದಲ್ಲಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ಬರ್ಮಿಂಗ್‌ ಹ್ಯಾಮ್‌ ನಲ್ಲಿ ಕನ್ಸಲ್ಟೆಂಟ್‌ ಹೆಪಟಾಲಜಿಸ್ಟ್‌ ಆಗಿರುವ ಭಾರತೀಯ ವೈದ್ಯ ಡಾ. ವಿಶ್ವರಾಜ್‌ ವೇಮಲಾ ಅವರು ವಿಮಾನದಲ್ಲಿದ್ದ ವೀದ್ಯಕೀಯ ಸಾಮಾಗ್ರಿಗಳು ಹಾಗೂ ಪ್ರಯಾಣಿಕರ ವಸ್ತುಗಳ ನೆರವಿನಿಂದ ತನ್ನ ಸಹಪ್ರಯಾಣಿಕರನ್ನು ಎರೆಡೆರಡು ಬಾರಿ ಹೃದಯಸ್ತಂಭನದಿಂದ ಕಾಪಾಡಿದ್ದಾರೆ.

ಮೊದಲನೇ ಬಾರಿ ವ್ಯಕ್ತಿ ಹೃದಯಸ್ತಂಭನ(Couple of cardiac arrests)ಕ್ಕೊಳಗಾದಾಗ ಸತತ ಪ್ರಯತ್ನದಿಂದ ಅವರನ್ನು ಕಾಪಾಡಿದ್ದಾರೆ. ಚೇತರಿಸಿಕೊಂಡ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುತ್ತಿರುವಾಗಲೇ ಇನ್ನೊಂದು ಬಾರಿ ಹೃದಯ ಸ್ತಂಭನವಾಗಿ ಮತ್ತೆ ಕುಸಿದು ಬಿದ್ದಿದ್ದಾರೆ. ಸತತ ಪ್ರಯತ್ನದಿಂದ ವೈದ್ಯರು ತನ್ನ ಸಹ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

” ನಮ್ಮ ಕನ್ಸಲ್ಟೆಂಟ್‌ ಹೆಪಟಾಲಜಿಸ್ಟ್‌ ಗಳಲ್ಲಿ ಒಬ್ಬರಾದ ಡಾ.ವಿಶ್ವರಾಜ್‌ ವೇಮಲಾ ಅವರು ವಿಮಾನ ಪ್ರಯಾಣದ ಮಧ್ಯದಲ್ಲಿ ಎರಡು ಬಾರಿ ಹೃದಯಸ್ತಂಭನಕ್ಕೊಳಗಾದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದರು. ಸೀಮಿತ ಪರಿಕರಗಳೊಂದಿಗೆ ರೋಗಿಯನ್ನು ತುರ್ತು ಸಿಬ್ಬಂದಿಗೆ ಹಸ್ತಾಂತರಿಸುವ ಮೊದಲು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಿ ಅವರನ್ನು ಪುರುಜ್ಜೀವನಗೊಳಿಸಲು ಸಾಧ್ಯವಾಯಿತು ” ಎಂದು ಯೂನಿವರ್ಸಿಟಿ ಆಸ್ಪತ್ರೆ ಬರ್ಮಿಂಗ್ಯಾಮ್‌ ಟ್ವಿಟರ್‌ ನಲ್ಲಿ ತಿಳಿಸಿದೆ.

ಪ್ರಯಾಣಿಕರ ಆರೋಗ್ಯ ಸ್ಥಿತಿಯ ಬಗ್ಗೆ ಕಾಳಜಿ ವಹಿಸಿದ ವಿಮಾನದ ಪೈಲಟ್‌ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವ್ಯವಸ್ಥೆ ಮಾಡಿದರು. ಅಲ್ಲಿ ತುರ್ತು ಸಿಬ್ಬಂದಿಗೆ ರೋಗಿಯನ್ನು ವಹಿಸಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತನ್ನ ಪ್ರಾಣ ಉಳಿಸಿದ ವೈದ್ಯರಿಗೆ ರೋಗಿ ಕಣ್ಣೀರಿನ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ : West bengal crime: ಚಕ್ರದಡಿ‌‌ ಸ್ಕೂಟರ್ ಸಮೇತ ಸಿಲುಕಿದ್ದ ವ್ಯಕ್ತಿಯನ್ನು 1 ಕಿ.ಮೀ ಎಳೆದೊಯ್ದ ಟ್ರಕ್: ವ್ಯಕ್ತಿ ಸಾವು, ಆರೋಪಿ ಅರೆಸ್ಟ್

Couple of cardiac arrests: An Indian-origin doctor saved a man who suffered cardiac arrest twice on a plane

Comments are closed.