ಸಪ್ತಪದಿ ತುಳಿಯಲು ಸಜ್ಜಾದ ಹರ್ಷಿಕಾ ಪೂಣಚ್ಚ- ಭುವನ್‌ ಜೋಡಿ : ಕಿವಿಯೋಲೆ ಗಿಫ್ಟ್‌ ಕೊಟ್ಟ ಜಯಮಾಲ

ಸ್ಯಾಂಡಲ್ ವುಡ್ ನಟ-ನಟಿಯರು ಅಕ್ಷರಷಃ ಕುಟುಂಬದಂತೆ ಬದುಕ್ತಾರೆ ಅನ್ನೋದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಈಗ ಮತ್ತೊಮ್ಮೆ ನವವಧುವಿಗೆ ಹಿರಿಯ ನಟಿಯೊಬ್ಬರು ಚಿನ್ನದ ಉಡುಗೊರೆ ನೀಡೋ ಮೂಲಕ ಆಶಿರ್ವಾದ ಹಾಗೂ ಪ್ರೀತಿ ತೋರಿದ್ದಾರೆ. ಕೊಡಗಿನ ವೀರ ಹಾಗೂ ಕೊಡಗಿನ ಕುವರಿ ಪರಸ್ಪರ ಜೋಡಿಯಾಗ್ತಿದ್ದಾರೆ. ಅದು ಮತ್ಯಾರೂ ಅಲ್ಲ ನಟ ಭುವನ್ (Bhuvann Ponnannaa) ಹಾಗೂ ನಟಿ ಹರ್ಷಿಕಾ ಪೂಣಚ್ಚ (Harshika poonacha) . ಇನ್ನೇನು ಕೆಲ ದಿನಗಳಲ್ಲೇ ಸಪ್ತಪದಿ ತುಳಿಯಲಿರೋ ಈ ಜೋಡಿ ಈಗಾಗಲೇ ಮದುವೆಗೆ ಎಲ್ಲರನ್ನೂ ಆಹ್ವಾನಿಸೋ ಸಂಭ್ರಮದಲ್ಲಿದೆ.

Kannada Senior Actress jayamala gifted earrings to Harshika Poonacha

ಹೀಗೆ ಜೋಡಿಯಾಗಿ ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ರಾಜಕೀಯ ನಾಯಕರು ಸೆಲೆಬ್ರೆಟಿಗಳನ್ನು ಆಹ್ವಾನಿಸ್ತಿರೋ ಹರ್ಷಿಕಾ ಹಾಗೂ ಭುವನ್ ಜೋಡಿಗೆ ಸಪ್ರೈಸ್ ಚಿನ್ನದ ಒಡವೆ ಕೊಡುಗೆಯಾಗಿ ಸಿಕ್ಕಿದೆ. ಮದುವೆಗೆ ಆಹ್ವಾನಿಸಲು ಬಂದ ಹರ್ಷಿಕಾಗೆ ಹಿರಿಯ ನಟಿ ಜಯಮಾಲಾ ಚಿನ್ನದ ಕಿವಿ ಒಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೇವಲ ಉಡುಗೊರೆ ಯಾಗಿ ನೀಡಿದ್ದು ಮಾತ್ರವಲ್ಲ, ತಮ್ಮ ಕೈಯ್ಯಾರೆ ತಾವೇ ಹರ್ಷಿಕಾಗೆ ಕಿವಿಯೋಲೆ ಹಾಕಿ ಸಂಭ್ರಮಿಸಿದ್ದಾರೆ. ಜಯಮಾಲಾ ಪ್ರೀತಿಯಿಂದ ನೀಡಿದ ಚಿನ್ನದ ಉಡುಗೊರೆಯ ವಿಡಿಯೋವನ್ನು ಹರ್ಷಿಕಾ ಖುಷಿಯಿಂದ ಶೇರ್ ಮಾಡಿದ್ದಾರೆ. ಇದೇ ಬರುವ ಅಗಸ್ಟ್ 24 ರಂದು ಭುವನ್ ಮತ್ತು ಹರ್ಷಿಕಾ ಅಪ್ಪಟ ಕೊಡಗು ಸಂಪ್ರದಾಯದಂತೆ ಕೊಡಗಿನಲ್ಲೇ ಮದುವೆಯಾಗಲಿದ್ದಾರೆ.

Kannada Senior Actress jayamala gifted earrings to Harshika Poonacha

ಕಳೆದ ಹಲವು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಇತ್ತೀಚಿಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಭುವನ್ ಮತ್ತು ಹರ್ಷಿಕಾ ತಾವು ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿರೋದಾಗಿ ಘೋಷಿಸಿದ್ದರು. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ನಟ-ನಟಿಯರು ಹಸೆಮಣೆ ಏರಿ ಕೇವಲ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್ ನಲ್ಲೂ ಜೊತೆಯಾಗ್ತಿದ್ದಾರೆ‌. ಯಶ್ ರಾಧಿಕಾರಿಂದ ಆರಂಭಿಸಿ, ಇತ್ತೀಚಿಗೆ ಹರಿಪ್ರಿಯಾ- ವಶಿಷ್ಠಸಿಂಹವರೆಗೆ ಸಾಕಷ್ಟು ಯುವ ಮನಸ್ಸುಗಳು ಜೊತೆಯಾಗಿವೆ.

ಈಗ ಈ ಸಾಲಿಗೆ ಹರ್ಷಿಕಾ-ಭುವನ್ ಕೂಡ ಸೇರ್ಪಡೆಗೊಂಡಿದ್ದಾರೆ. ಮಾಡೆಲಿಂಗ್ ನಿಂದ ಪರಿಚಯವಾದ ಈ ಜೋಡಿ, ಬಿಗ್ ಬಾಸ್ ಮನೆಯಲ್ಲೇ ಲವ್ವಿ ಡವ್ವಿ ಮುನ್ಸೂಚನೆ ಕೊಟ್ಟಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಈ ಸ್ನೇಹ- ಪ್ರೇಮ ಮುಂದುವರೆದಿದ್ದು, ಈಗ ಈ ಪ್ರೇಮ ಸಪ್ತಪದಿಯ ಅಂಗಳದಲ್ಲಿ ನಿಂತಿದೆ.

ಇದನ್ನೂ ಓದಿ : Supplier Shankara movie : ಸಪ್ಲೈಯರ್ ಶಂಕರ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಇದನ್ನೂ ಓದಿ : Tatsama Tadbhava Movie : ತತ್ಸಮ ತದ್ಬವದಲ್ಲಿ ಚಿರು ಪ್ರೆಂಡ್ಸ್: ಮೇಘನಾ ಶೇರ್ ಮಾಡಿದ್ರು ಸ್ಪೆಶಲ್ ವಿಡಿಯೋ

Comments are closed.