ಸೋಮವಾರ, ಜೂನ್ 16, 2025
HomeCinemaಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

ಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

- Advertisement -

Ranjani Photoshoot : ಅಮೃತ ವರ್ಷಿಣಿ ಸೀರಿಯಲ್ ಮೂಲಕ ಕರುನಾಡಿನಾದ್ಯಂತ ಮನೆಮಾತಾದ ಕಿರುತೆರೆ ನಟಿ ರಜಿನಿ ಈಗ ಮತ್ತೆ ಸೀರಿಯಲ್ ಲೋಕಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ. ಸಖತ್ ಪೋಟೋಶೂಟ್ ಮೂಲಕ ಮಿಂಚ್ತಿರೋ ರಜಿನಿ ಮತ್ತೊಮ್ಮೆ ಗ್ರ್ಯಾಂಡ್ ಎಂಟ್ರಿಕೊಡೋ ಮುನ್ಸೂಚನೆ ನೀಡಿದ್ದಾರೆ. ತುಮಕೂರು ಮೂಲದ ನಟಿ ರಜಿನಿ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಪರದಾಡಿದ್ದರು. ಆದರೆ ಅಮೃತ ವರ್ಷಿಣಿ ಸೀರಿಯಲ್ ರಜಿನಿಯ ಅದೃಷ್ಟವನ್ನೇ ಬದಲಾಯಿಸಿತು.

ಮೂರು ವರ್ಷಗಳ ಕಾಲ ಈ ಸೀರಿಯಲ್ ನಲ್ಲಿ ಮಿಂಚಿದ್ದ ರಜಿನಿ, ಬಳಿಕ ಬಿಗ್ ಬಾಸ್ ಮನೆಗೂ ಎಂಟ್ರಿಕೊಟ್ಟು ಮಿಂಚಿದ್ದರು. ಕೇವಲ ಬಿಗ್ ಬಾಸ್ ಮಾತ್ರವಲ್ಲದೇ ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ ಸೇರಿದಂತೆ ಹಲವು ರಿಯಾಲಿಟಿ ಶೋದಲ್ಲೂ ರಜಿನಿ ಭಾಗವಹಿಸಿದ್ದರು. ಮಾತ್ರವಲ್ಲ ಕುಕರಿ ಶೋವೊಂದನ್ನು ಹೋಸ್ಟ್ ಮಾಡುವ ಮೂಲಕ ರಜಿನಿ ಆಂಕ್ಯರಿಂಗ್ ಗೂ ಕಾಲಿಟ್ಟಿದ್ದರು. ಭರತನಾಟ್ಯ ಹಾಗೂ ಪಾಶ್ಚಾತ್ಯ ಡ್ಯಾನ್ಸ್ ಕೂಡ ಅಭ್ಯಾಸ ಮಾಡಿಕೊಂಡಿರೋ ರಜಿನಿ ಕೆಲಕಾಲ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದರು.

ಆದರೆ ಕಿರುತೆರೆ ಯಿಂದ ಬ್ರೇಕ್ ಪಡೆದ ಮೇಲೂ ರಜಿನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ರೀಲ್ಸ್ ಹಾಗೂ ಪೋಟೋಶೂಟ್ ಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಲೇ ಬಂದಿದ್ದರು. ಈಗ ಮತ್ತೊಮ್ಮೆ ರಜಿನಿ ಸೀರಿಯಲ್ ಗೆ ಮರಳಲು ಸಿದ್ಧವಾಗಿದ್ದಾರಂತೆ. ಅದಕ್ಕಾಗಿ ನಟಿ ರಜಿನಿ ಹೊಸ ಪೋಟೋಶೂಟ್ ಗೂ ಕೂಡ ಪೋಸ್ ನೀಡಿದ್ದಾರೆ. ಅಂಬುಜ, ಡವ್ ಮಂಜ ಸೇರಿದಂತೆ ಹಲವು ಚಿತ್ರದಲ್ಲೂ ನಟಿಸಿರೋ ರಜಿನಿ, ಇನ್ನೂ ಹಲವು ಸಿನಿಮಾಗಳಿಗೂ ಸಹಿ ಹಾಕಿದ್ದಾರಂತೆ.

ಮೆರೂನ್ ಕಟ್ ಗೌನ್ ನಲ್ಲಿ ತಮ್ಮ ಅಂದ ಬಿಚ್ಚಿಟ್ಟು ಪೋಟೋಗಳಿಗೆ ಪೋಸ್ ನೀಡಿರೋ ರಜಿನಿ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ದೇವರು ವರವನ್ನು ಕೊಡೋದಿಲ್ಲ. ಶಾಪವನ್ನು ಕೊಡೋದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ಅದನ್ನು ವರವಾಗಿ ಅಥವಾ ಶಾಪವಾಗಿ ಬಳಸಿಕೊಳ್ಳೋದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ. ಆಮೂಲಕ ರಜಿನಿ ಯಾವುದೋ ಒಂದು ಅವಕಾಶದ ಜೊತೆ ತೆರೆಗೆ ಬರಲು ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಅಮೃತವರ್ಷಿಣಿ ರಜಿನಿಯನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಸಿದ್ಧವಾಗಿದ್ದಾರೆ.

ಇದನ್ನೂ ಓದಿ : Bigg Boss Kannada OTT Season:”ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ 1″ರ ವಿನ್ನರ್ ರೂಪೇಶ್‌ ಶೆಟ್ಟಿ: ಅಭಿಮಾನಿಗಳ ಸಂಭ್ರಮಾಚರಣೆ

ಇದನ್ನೂ ಓದಿ : Massive Star Rajavardhan:‘ಗಜರಾಮ’ನಾದ ಮ್ಯಾಸಿವ್ ಸ್ಟಾರ್ ರಾಜವರ್ಧನ್…ಡಿಂಗ್ರಿ ನಾಗರಾಜ್ ಪುತ್ರನ ಹೊಸ ಕನಸು ಇದು

Kannada Serial Amruthavarshini Actor Ranjani Photoshoot

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular