Siddaramaiah :ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಧರ್ಮ ರಾಜಕಾರಣ ಹೆಚ್ಚಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ

ಮಂಡ್ಯ : Siddaramaiah :ಕಾಂಗ್ರೆಸ್​​ ನಾಯಕರು ಸದ್ಯ ಭಾರತ್​ ಜೋಡೋ ಯಾತ್ರೆಯಲ್ಲಿ ಸದ್ಯ ಫುಲ್​ ಬ್ಯುಸಿಯಾಗಿದ್ದಾರೆ . ಇಂದು ರಾಜ್ಯ ಕಾಂಗ್ರೆಸ್​ ನಾಯಕರು ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ ಸಹ ಪರಸ್ಪರ ಮಾತುಕತೆ ನಡೆಸಲು ಅರ್ಧ ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಮಂಡ್ಯದ ಖಾಸಗಿ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಟೀ ಶರ್ಟ್​ ಹಾಗೂ ಟೋಪಿಗಳ ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಕೆಲ ಕಾಲ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​​ ಪರಸ್ಪರ ಹಸ್ತಲಾಘವ ಮಾಡದೇ ದೂರದಲ್ಲಿದ್ದರು. ಕೆಲ ಸಮಯದ ಬಳಿಕ ಮೌನ ಮುರಿದು ಪರಸ್ಪರ ಮಾತುಕತೆ ನಡೆಸಿದ್ದಾರೆ.


ಇದಾದ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ತಿಂಗಳ ಏಳರಿಂದ ರಾಹುಲ್​ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇಂತಹ ಐತಿಹಾಸಿಕ ಪಾದಯಾತ್ರೆಯನ್ನು ಯಾವ ಪಕ್ಷವೂ ಮಾಡಿಲ್ಲ. ಒಮ್ಮೆಲೆ 152 ದಿನಗಳಿಗೂ ಹೆಚ್ಚು ಕಾಲ 3570 ಕಿಲೋ ಮೀಟರ್​​ ನಡೆಯುವುದು ಸುಲಭವಂತೂ ಅಲ್ಲ. ಆದರೆ ದೇಶದ ಹಿತದೃಷ್ಟಿಯಿಂದ ರಾಹುಲ್​ ಗಾಂಧಿ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ನಾವೆಲ್ಲರೂ ಅವರ ಈ ನಿರ್ಧಾರಕ್ಕೆ ಕೈ ಜೋಡಿಸಬೇಕು.


ಕರ್ನಾಟಕದಲ್ಲಿ 22 ದಿನಗಳ ಕಾಲ ಹಾಗೂ ಮಂಡ್ಯದಲ್ಲಿ ಮೂರು ದಿನಗಳ ಕಾಲ ಪಾದಯಾತ್ರೆ ಇರಲಿದೆ. ಅಕ್ಟೋಬರ್​ 3,6 ಹಾಗೂ 7ರಂದು ಮಂಡ್ಯದಲ್ಲಿ ಪಾದಯಾತ್ರೆ ಇರಲಿದೆ. ಈ ಪಾದಯಾತ್ರೆಯಲ್ಲಿ ಮಂಡ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.


ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪಾದಯಾತ್ರೆಯಾಗಿದೆ. ವಕೀಲರು, ರೈತರು, ಕಾರ್ಮಿಕರು ಹಾಗೂ ಸಂಘ ಸಂಸ್ಥೆಗಳು ಭಾಗಿಯಾಗಲಿವೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದಮೇಲೆ ಧರ್ಮದ ರಾಜಕಾರಣ ಹೆಚ್ಚಾಗಿದೆ. ಸಂವಿಧಾನದಲ್ಲಿ ಧರ್ಮ ರಾಜಕಾರಣ ಮಾಡಬಾರದು. ಎಲ್ಲಾ ಜನಾಂಗ, ಧರ್ಮದವರು ಇರುವ ದೇಶ ನಮ್ಮದು.ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು.ಆದರೆ ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಬಿಜೆಪಿ ಬಿಡುತ್ತಿಲ್ಲ . ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ಗಣೇಶೋತ್ಸವದಲ್ಲಿ ಗೋಡ್ಸೆ ಭಾವಚಿತ್ರವನ್ನು ಹಾಕಿಕೊಳ್ತಾರೆ. ಇವರ ಕೋಮುವಾದ ಇಲ್ಲಿವರೆಗೆ ಹೋಗಿದೆ. ಇದನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡೋದಿಲ್ಲ ಎಂದು ಗುಡುಗಿದರು.

ಇದನ್ನು ಓದಿ : Super Sub Rules in Domestic Cricket: ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?

ಇದನ್ನೂ ಓದಿ : K.S. Eshwarappa:ಆರೋಪ ಮುಕ್ತನಾಗುತ್ತಿದ್ದಂತೆಯೇ ಸಚಿವ ಸ್ಥಾನ ಮರಳಿ ಕೊಡ್ತೀನಿ ಅಂದಿದ್ರು : ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ

Religion politics has increased in the country since Modi became PM: Former CM Siddaramaiah

Comments are closed.