ಸೋಮವಾರ, ಏಪ್ರಿಲ್ 28, 2025
HomeCinemaVeteran Actor Lohitashwa Passed Away : ಹಿರಿಯ ನಟ ಲೋಹಿತಾಶ್ವ ವಿಧಿವಶ

Veteran Actor Lohitashwa Passed Away : ಹಿರಿಯ ನಟ ಲೋಹಿತಾಶ್ವ ವಿಧಿವಶ

- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟ ಲೋಹಿತಾಶ್ವ (Veteran Actor Lohitashwa) ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 2.45 ಕ್ಕೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಳೆದ ಹಲವು ಸಮಯಗಳಿಂದಲೂ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ತುಮಕೂರಿನ ತೊಂಡಗೆರೆಯಲ್ಲಿ ಅಗಸ್ಟ್ 5 1942ರಂದು ಜನಿಸಿದ ಲೋಹಿತಾಶ್ವ ಕನ್ನಡದಲ್ಲಿ ಸುಮಾರು 500 ಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ನಾಟಕ, ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರನಾಗ್ ನಟನೆಯ ಮಾಲ್ಗುಡಿ ಡೇಸ್, ಗೃಹಭಂಗ, ನಾಟ್ಯರಾಣಿ ಶಾಂತಲಾ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಸದ್ಯ ಆಸ್ಪತ್ರೆಯಲ್ಲಿಯೇ ಲೋಹಿತಾಶ್ವ ಅವರ ಪಾರ್ಥವ ಶರೀರವನ್ನು ಇರಿಸಲಾಗಿದೆ. ಸಂಜೆ 7.30 ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಾಳೆ ಸಂಜೆ ತುಮಕೂರು ಬಳಿಯ ತೊಂಡೆಗೆರೆ ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯಕ್ರೀಯೆ ನಡೆಸಲಾಗುವುದು ಎಂದು ಹಿರಿಯ ನಟ ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಮಾಹಿತಿ ನೀಡಿದ್ದಾರೆ.

Veteran Actor Lohitashwa : ಲೋಹಿತಾಶ್ವ ಅವರು ನಟನೆಯ ಸಿನಿಮಾಗಳು

ಸಾರಥಿ (2011), ಅಭಿಮನ್ಯು (1990), ಆಪದ್ಬಾಂಧವ (1987), A. K. 47 (1999), ಅತಿರಥ ಮಹಾರಥ (1987), ಅವತಾರ ಪುರುಷ (1988), ಬಂದಾ ಮುಕ್ತಾ (1987), ಬೇಟೆ (1986), ಬೇಡಿ (1987), C. B. I. ಶಿವ (1991), ಚದುರಂಗ (1988), ಚಂದು (2002), ಚಕ್ರವರ್ತಿ (1990), ಚಾಣಕ್ಯ (1984), ಚಿನ್ನಾ (1994), ದಾದಾ (1988), ಡಿಸೆಂಬರ್ 31 (1986), ದೇವಾ (1987), ನಾಟಕ (2012), ಎಲ್ಲರಂತಲ್ಲ ನನ್ನ ಗಂಡ (1997), ಏಕಲವ್ಯ (1990), ತುರ್ತು ಪರಿಸ್ಥಿತಿ (1995), ಗಜೇಂದ್ರ (1984), ಗಲಿಗೆಯ್, ಗೀತಾ (1996), ಹಲೋ ಡ್ಯಾಡಿ (1988), ಹೊಸ ನೀರು (1985), ಹುಲಿಯಾ (1996), ಇಂದಿನ ರಾಮಾಯಣ (1984), ಇಂದ್ರಜಿತ್ (1989), ಜಯಸಿಂಹ (1987), ಕಡನಾ (1991), ಕಾಡಿನ ರಾಜ (1985),ಕಾವೇರಿ ನಗರ (2013), ಕಲಾವಿದ (1997), ಕೋನಾ ಎಡೈತೆ (1995), ಲಾಕಪ್ ಡೆತ್ (1994), ಮಾರ್ಜಾಲ (1986),ಮಿಡಿದ ಹೃದಯಗಳು (1993), ಮೂರು ಜನ್ಮ (1984), ಮುನಿಯನ ಮದರಿ (1981), ಮೈಸೂರು ಜಾಣ (1992), ಮಿ. ರಾಜ (1987), ನವಭಾರತ (1988), ನೀ ಬರೆದ ಕಾದಂಬರಿ (1985), ನವದೆಹಲಿ (1988), ಒಲವಿನ ಆಸರೆ (1988), ಒಲವು ಮೂಡಿದಗ (1984), ಒಂದು ಊರಿನ ಕಥೆ (1978), ಒಂಥರಾ ಬಣ್ಣಗಳು (2018), ಪೊಲೀಸ್ ಲಾಕಪ್ (1992), ಪ್ರತಾಪ್ (1990), ಪ್ರೀತಿ ವಾತ್ಸಲ್ಯ (1984), ರೆಡಿಮೇಡ್ ಗಂಡ (1991), ರಣಚಂಡಿ (1991), ಸಾಂಗ್ಲಿಯಾನ (1988), ಎಸ್.ಪಿ. ಸಾಂಗ್ಲಿಯಾನ ಭಾಗ-2 (1990), ಸಾಹಸ ವೀರ (1988), ಸಮಯದ ಗೊಂಬೆ (1984), ಸಂಭವಾಮಿ ಯುಗೇ ಯುಗೇ (1988), ಸಂಗ್ರಾಮ (1987), ಸಾರಥಿ (2011), ಸವ್ಯಸಾಚಿ (1995), ಶಾಂತಿ ನಿವಾಸ (1997),ಶಿವರಾಜ್ (1991), ಸಿಂಹದ ಗುರಿ (1998), ಸಿಂಹಾಸನ (1983), ಸ್ನೇಹಲೋಕ (1999), ಸುಂದರಕಾಂಡ (1991), ತುಂಬಿದ ಮನೆ (1995),ಟೈಮ್ ಬಾಂಬ್ ವಿಶ್ವ (1999) ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ : Anushka Shetty: ಬರ್ತ್‍ಡೇ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ..

ಇದನ್ನೂ ಓದಿ : Meghna flew abroad : ರಾಯನ್ ಬಿಟ್ಟು ಮತ್ತೆ ವಿದೇಶಕ್ಕೆ ಹಾರಿದ ಮೇಘನಾ: ಇಷ್ಟಕ್ಕೂ ಚಿರು ಪತ್ನಿ ಹೋಗಿದ್ದೆಲ್ಲಿಗೆ ಗೊತ್ತಾ ?

Kannada Veteran Actor Lohitashwa Passed Away Sagar Hospital Bangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular