Honda : ಗುಡ್‌ ನ್ಯೂಸ್‌; ಈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಿದ ಹೊಂಡಾ

ಜಪಾನಿನ (Japan) ಆಟೋಮೊಬೈಲ್‌ ಕಂಪನಿಯಾದ ಹೊಂಡಾ (Honda) ಕಾರು ಖರೀದಿಸುವವರಿಗೆ ಒಂದು ಗುಡ್‌ ನ್ಯೂಸ್‌ ನೀಡಿದೆ. ಅದು ಸಿಟಿ, ಅಮೇಜ್‌, WR-V, ಜಾಝ್‌ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌ (Discount) ಘೋಷಿಸಿದೆ. ನೆವೆಂಬರ್‌ 2022 ನಲ್ಲಿ ಕಾರು ಖರೀದಿಸಿಬಕೆಂದು ಕೊಂಡವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ವರದಿಯ ಪ್ರಕಾರ ಕಂಪನಿಯು ಭಾರತದ ಗ್ರಾಹಕರಿಗೆ ಇಯರ್‌–ಎಂಡ್‌ ಬೆನಿಫಿಟ್‌ ನೀಡುವ ಸಲುವಾಗಿ 63,000 ರೂ. ವರೆಗಿನ ರಿಯಾಯಿತಿ ನೀಡಿದೆ. ಈ ರಿಯಾಯಿತಿಯು ತಿಂಗಳ ಕೊನೆಯ ಕೆಲಸದ ದಿನದವರೆಗೆ ಮಾನ್ಯವಾಗಿರುತ್ತದೆ ಎನ್ನುವುದು ಗಮನಾರ್ಹ ಅಂಶವಾಗಿದೆ.

ಆದ್ದರಿಂದ ಒಂದು ವೇಳೆ ನೀವು ಹೊಂಡಾ ಕಾರುಗಳನ್ನು ಖರೀದಿಸುವ ಯೋಜನೆಯಿದ್ದರೆ ಈ ಅವಕಾಶದ ಲಾಭ ಪಡೆದುಕೊಳ್ಳಬಹುದು. ಡಿಸ್ಕೌಂಟ್‌ನ ಅಡಿಯಲ್ಲಿ ಸೆಡಾನ್‌, ಸಬ್‌ಕ್ಯಾಂಪಾಕ್ಟ್‌ SUV ಮಾದರಿಯ ಕಾರುಗಳಿವೆ. ಹಾಗಾದರೆ ಯಾವ ಕಾರಿಗೆ ಎಷ್ಟು ಡಿಸ್ಕೌಂಟ್‌ ನೀಡಿದೆ, ಇಲ್ಲಿದೆ ಓದಿ.

 1. WR-V
  ಇಂಧನ ಸಾಮರ್ಥ್ಯದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡದುಕೊಂಡ ಹೊಂಡಾ WR-V ಭಾರಿ ರಿಯಾಯಿತಿ ನೀಡಿದೆ. ಇದು 30,000 ರೂ.ಗಳ ವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ. ಹಳೆಯ ಕಾರುಗಳ 10,000 ರೂ. ಗಳ ರಿಯಾಯಿತಿ ನೀಡಿದೆ. ಇನ್ನು ಎಕ್ಸ್‌ಚೇಂಜ್‌ ಆಫರ್‌ ನಡಿಯಲ್ಲಿ 7,000 ರೂ.ನೀಡಿದೆ. ಕಂಪನಿಯು 5,000 ರೂ. ಮೌಲ್ಯದ ಕಾರ್ಪೊರೇಟ್‌ ರಿಯಾಯಿತಿ ಮತ್ತು ಲಾಯಲ್ಟಿಯನ್ನು ಸಹ ಈ ಕಾರುಗಳಿಗೆ ಒದಗಿಸಿದೆ.
 1. ಹೊಂಡಾ ಸಿಟಿ :
  ನಾಲ್ಕನೇ ತಲೆಮಾರಿನ ಪ್ರೀಮಿಯಂ ಸೆಡಾನ್‌ ಕಾರಾದ ಹೊಂಡಾ ಸಿಟಿ ಖರೀದುದಾರರಿಗೆ 5,000 ರೂ. ಗಳ ಲಾಯಲ್ಟಿ ಬೋನಸ್‌ ನೀಡಿದೆ. ಇತ್ತೀಚಿನ ಹೈಬ್ರಿಡ್‌ ಎಂಜಿನ್‌ ರೂಪಾಂತರಗಳಿಗೆ ಯಾವುದೇ ರಿಯಾಯಿತಿಗಳಲ್ಲ.
 2. ಜಾಝ್‌ :
  ಹ್ಯಾಚ್‌ಬ್ಯಾಕ್‌ ಕಾರಾದ ಹೊಂಡಾ ಜಾಝ್‌ ಬೋನಸ್‌ ಸೇರಿದಂತೆ ಎಕ್ಸ್‌ಚೇಂಜ್‌ ದರದಲ್ಲಿ 17,000 ರೂ. ಗಳ ವರೆಗೆ ರಿಯಾಯಿತಿ ನೀಡಿದೆ. ಉಳಿದ ಕಾರುಗಳಂತೆಯೇ ಇದೂ ಸಹ ಕಾರ್ಪೊರೇಟ್ ರಿಯಾಯಿತಿಗಳು 3,000 ರೂ. ಗಳನ್ನು ಮತ್ತು 5,000 ರೂಗಳ ಲಾಯಲ್ಟಿ ಬೋನಸ್‌ಗಳನ್ನು ಖರೀದುದಾರರಿಗೆ ನೀಡುತ್ತದೆ.
 3. ಹೊಂಡಾ ಅಮೇಜ್‌ :
  ಇದು ಹೊಂಡಾ ಕಾರುಗಳ ಪಟ್ಟಿಯಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಸೆಡಾನ್‌ ಕಾರ್‌ ಆಗಿದೆ. ಈ ಕಾರು ಖರೀದಿಸುವವರು 10,000 ರೂ. ಗಳ ವರೆಗಿನ ನಗದು ರಿಯಾಯಿತಿ ಪಡೆಯಬಹುದಾಗಿದೆ. ಇದರ ಜೊತೆಗೆ 5,000 ರೂ. ಗಳ ಲಾಯಲ್ಟಿ ಬೋನಸ್‌ ಮತ್ತು 3,000 ರೂ. ಗಳ ಕಾರ್ಪೊರೇಟ್‌ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Mukesh Ambani : ‘ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ’ ಖರೀದಿಸಲು ಮುಂದಾದ ರಿಲಯನ್ಸ್‌

ಇದನ್ನೂ ಓದಿ: Amazon Prime Video Mobile Plan: ಅಮೆಜಾನ್‌ ಪ್ರೈಮ್‌ ವೀಡಿಯೋದಿಂದ 599 ರೂ.ಗಳ ಹೊಸ ಪ್ಲಾನ್‌ ಲಾಂಚ್‌..

(Honda offers massive discounts on city, amaze, WRV and Jazz)

Comments are closed.