ಸೋಮವಾರ, ಏಪ್ರಿಲ್ 28, 2025
HomeCinemaSara Annaiah Bikini Photoshoot : ಬಿಕನಿ ಅವತಾರದಲ್ಲಿ ಮಿಂಚಿದ ಕನ್ನಡತಿ ನಟಿ ಸಾರಾ ಅಣ್ಣಯ್ಯ

Sara Annaiah Bikini Photoshoot : ಬಿಕನಿ ಅವತಾರದಲ್ಲಿ ಮಿಂಚಿದ ಕನ್ನಡತಿ ನಟಿ ಸಾರಾ ಅಣ್ಣಯ್ಯ

- Advertisement -

ಬಾಲಿವುಡ್ ನಟಿಯರು ಬೋಲ್ಡಾಗಿ ಪೋಟೋಗೆ ಪೋಸ್ ಕೊಡೋದು ಕಾಮನ್. ಆದರೆ ಇಲ್ಲಿ ಕನ್ನಡದ ಕಿರುತೆರೆಯ ನಟಿಮಣಿಯೇ ಬಾಲಿವುಡ್ ನಟಿಯರನ್ನು ಮೀರಿಸುವಂತೆ ಬಿಕನಿಯಲ್ಲಿ ಪೋಸ್ ನೀಡಿ ಮಿಂಚಿದ್ದಾರೆ. ನಾವ್ಯಾರ ಬಗ್ಗೆ ಮಾತಾಡ್ತಾ ಇದ್ದೀವಿ ಅನ್ನೋ ಕುತೂಹಲನಾ? ನಾವು ಮಾತಾಡ್ತಾ ಇರೋದು ಮತ್ಯಾರ ಬಗ್ಗೆಯೂ ಅಲ್ಲ ಕನ್ನಡದ ವರೂಧಿನಿ ಅಲಿಯಾಸ್ ಸಾರಾ ಅಣ್ಣಯ್ಯ (Sara Annaiah Bikini Photoshoot) ಬಗ್ಗೆ.

ಕನ್ನಡ ಕಿರುತೆರೆಯಲ್ಲಿ ಕನ್ನಡತಿ ಸೀರಿಯಲ್ ಸಖತ್ ಸದ್ದು ಮಾಡ್ತಿದೆ. ಈ ಸೀರಿಯಲ್ ನ ಅತಿ ಪ್ರಮುಖ ಪಾತ್ರ ವರೂಧಿನಿ. ಸೀರಿಯಲ್ ನಲ್ಲೂ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಪಾತ್ರದಲ್ಲಿ ಮಿಂಚೋ ವರೂಧಿನಿ ನಿಜ ಜೀವನದಲ್ಲೂ ಕೂಡ ಅಷ್ಟೇ ಬೋಲ್ಡಾಗಿ ಪೋಸ್ ನೀಡುತ್ತಾರೆ. ಮೈಸೂರಿನ ಹುಣಸೂರು ಮೂಲದ ಸಾರಾ ಅಣ್ಣಯ್ಯ ಅಪ್ಪಟ ಕನ್ನಡದ ಹುಡುಗಿ. ಆದರೆ ಸದಾ ಸ್ವಿಮ್ಮಿಂಗ್, ಮಾಡೆಲಿಂಗ್, ಟ್ರಿಪ್ ಅಂತೆಲ್ಲ ಲೈಫ್ ಎಂಜಾಯ್ ಮಾಡೋ ಹುಡುಗಿ ಹಾಟ್ ಹಾಟ್ ಆಗಿ ಪೋಸ್ ಕೊಡೋದರಲ್ಲಿ ಬಾಲಿವುಡ್ ನಟಿಯರನ್ನು ಮೀರಿಸ್ತಾರೆ.

ಮೊನ್ನೆ ಮೊನ್ನೆಯಷ್ಟೇ ಸಾರಾ ಅಣ್ಣಯ್ಯ ಬಿಕನಿಯಲ್ಲಿ ಪೋಸ್ ನೀಡಿದ್ದಲ್ಲದೇ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ. ದಟ್ಟ ಹಸಿರಿನ ನಡುವೆ ಇರೋ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಾರಾ ಅಣ್ಣಯ್ಯ ಸಖತ್ ಬೋಲ್ಡಾಗಿ ನೀಲಿ ಬಿಕನಿಯಲ್ಲಿ ತಮ್ಮ ಸೌಂದರ್ಯ ತೆರೆದಿಟ್ಟಿದ್ದಾರೆ.

ತಮಿಳು ಕಿರುತೆರೆಯಿಂದ ಕೆರಿಯರ್ ಆರಂಭಿಸಿದ ಸಾರಾ ಅಣ್ಣಯ್ಯ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಲೇ ಬೇಕೆಂಬ ಹಟದಿಂದ ಕನ್ನಡ ಕಿರುತೆರೆಯಲ್ಲಿ ನಟನೆಗೆ ಬಂದಿದ್ದು ಸದ್ಯ ನೆಗೆಟಿವ್ ಶೇಡ್ ಇರೋ ವರೂಧಿನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮಾತ್ರವಲ್ಲ ಕನ್ನಡತಿ ಸೀರಿಯಲ್ ನಲ್ಲಿ ಭುವಿ ಹಾಗೂ ಹರ್ಷನ ಮದುವೆ ನಿಲ್ಲಿಸೋಕೆ ಸರ್ಕಸ್ ಮಾಡ್ತಿದ್ದಾರೆ.

ಇನ್ನೂ ಸಾರಾ ಅಣ್ಣಯ್ಯ ಶೇರ್ ಮಾಡಿರೋ ಈ ಬೋಲ್ಡ್ ಪೋಟೋಗೆ ಸಖತ್ ಲೈಕ್ಸ್ ಹರಿದು ಬಂದಿದ್ದು, ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ. ಇನ್ನು ಹಲವರು ಸಾರಾ ಅಣ್ಣಯ್ಯ ಇಷ್ಟು ಬೋಲ್ಡ್ ಅವತಾರ ಬೇಕಾ ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಿಮ್ಮ ಮೈಮೇಲೆ ಬಟ್ಟೆ ನಿಲ್ಲೋದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಷ್ಟೇ ಸ್ಟ್ರಾಂಗ್ ಆಗಿ ಉತ್ತರ ನೀಡಿರೋ ಸಾರಾ ಅಣ್ಣಯ್ಯ ನನ್ನ ಬಟ್ಟೆ ಬಗ್ಗೆ ತಲೆಕೆಡಿಸಿಕೊಳ್ಳೋ ಬದಲು ನಿಮ್ಮ ನಿಮ್ಮ ಕೆಲಸ ನೋಡಿ ಎಂದು ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ : Book My Show ಆ್ಯಪ್ ಗೆ ಬಿತ್ತು ಬ್ರೇಕ್ : ಟಿಕೇಟ್ ಬುಕ್ಕಿಂಗ್ ಬರಲಿದೆ ಗೌರ್ಮೆಂಟ್ ಆ್ಯಪ್

ಇದನ್ನೂ ಓದಿ : Rashmika Mandanna Controversy : ನಾಯಿಗೂ ಫ್ಲೈಟ್ ಟಿಕೇಟ್ ಬುಕ್ ಮಾಡಿ : ರಶ್ಮಿಕಾ ಸುತ್ತ ಹೊಸತೊಂದು ವಿವಾದ

Kannadathi Serial Actress Sara Annaiah Bikini Photoshoot

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular