Samsung Galaxy F13: ಕೇವಲ 11,999ರೂ ಗೆ ಸಿಗಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F-13

ದೆಹಲಿ( Delhi) : ಇತ್ತೀಚಿನ ದಿನಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy)ಹೊಸ ಹೊಸ ಆವೃತ್ತಿಯ ಹಾಗೂ ಪಿಚ್ಚರ್ ಇರುವ  ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಹೊಸ ರೂಪದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F (Galaxy F13)ಸರಣಿಯನ್ನು ಲಾಂಚ್‌ ಮಾಡಿದೆ. ಭಾರತದಲ್ಲಿ ಆವೃತ್ತಿಯ ಗ್ಯಾಲಕ್ಸಿ-13 ಮೊಬೈಲ್‌ ಅನ್ನು ಬಿಡುಗಡೆಗೊಳಿಸಿದೆ. ಎರಡು ವಿನ್ಯಾಸದ ಮೊಬೈಲ್‌ ಪೋನ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸದ್ಯ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಮೊಬೈಲ್‌ಗಳು 4GB+64 GB ಹೊಂದಿರುವ F13ಗೆ 11,999 ರೂ. ಹಾಗೂ 4GB + 128GB ಸೌಲಭ್ಯ ಹೊಂದಿರುವ ಮೊಬೈಲ್‌ 12,999 ರೂ. ಗಳಿಗೆ ಲಭ್ಯವಾಗಲಿದೆ. ಜೂನ್ 29ರಿಂದ ಮೂರು ಬಣ್ಣಗಳ ಮೊಬೈಲ್‌ ಪೋನ್‌ ಗ್ರಾಹಕರಿಗೆ ಲಭ್ಯವಾಗಲಿದೆ. ಹೊಸ ಗ್ಯಾಲಕ್ಸಿ ಎಫ್ 13 ಅನ್ನು ಬಿಡುಗಡೆ ಮಾಡಲು ನಾವು ಸಂತೋಷಪಡುತ್ತೇವೆ. ಗ್ರಾಹಕರಿಗೆ ಒಳ್ಳೆಯ ಅನುಭವ ಸಿಗಲಿ ಎಂಬ ಉದ್ದೇಶದಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ HD+ ಡಿಸ್ಪ್ಲೇ ಫೋನಿನಲ್ಲಿ ವಿನ್ಯಾಸಗೊಳಿಸಿದೆ ಹಾಗೂ ಡೇಟಾ ಸ್ವಿಚಿಂಗ್ ಅನ್ನು ಒಳಗೊಂಡಿದೆ ಎಂದು ಸ್ಯಾಮ್‌ಸಂಗ್ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಆದಿತ್ಯ ಬಬ್ಬರ್ ತಿಳಿಸಿದ್ದಾರೆ.

Samsung Galaxy F13 ಏನಿದರ ವಿಶೇಷತೆ ?

ಸ್ಮಾರ್ಟ್ಫೋನ್ 6.6-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ, ಇದು 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಅಲ್ಟ್ರಾ-ವೈಡ್ ಕ್ಯಾಮೆರಾವು 123-ಡಿಗ್ರಿ ಫೀಲ್ಡ್ ಆಫ್ ವ್ಯೂನೊಂದಿಗೆ ಶಾಟ್‌ಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಗ್ಯಾಲಕ್ಸಿ ಎಫ್ 13 ನೊಂದಿಗೆ ಬೆರಗುಗೊಳಿಸುವ ಪೋಟ್ರೇಟ್ ಶಾಟ್‌ಗಳನ್ನು ಶೂಟ್ ಮಾಡಲು ಡೆಪ್ತ್ ಕ್ಯಾಮೆರಾ ಸಹಾಯ ಮಾಡುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಸ್ಮಾರ್ಟ್ಫೋನ್ 8MP ಮುಂಭಾಗದ ಕ್ಯಾಮೆರಾವನ್ನು ನೀಡುತ್ತದೆ. ಇದರಲ್ಲಿ ಪವರ್ ಉಳಿತಾಯ ಮತ್ತು AI ಪವರ್ ಮ್ಯಾನೇಜ್‌ಮೆಂಟ್ ಪಿಚ್ಚರ್ ಹೊಂದಿದೆ ನೀವು ಹೆಚ್ಚಾಗಿ ಬಳಸದೇ ಇರುವ ಅಪ್ಲಿಕೇಶನ್ ಮೂರು ದಿನಗಳ ಕಾಲ ನೋಡಲು ಇರಿಸುತ್ತದೆ . ನಿಮ್ಮ ಡೇಟಾವನ್ನು ಉಳಿಸಲು ಸಹಕಾರಿಯಾಗಲಿದೆ.

ಇದನ್ನೂ ಓದಿ : Mark Zuckerberg : ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಣ ಗಳಿಸುವ ಹೊಸ ದಾರಿ ಹೇಳಿದ ಮಾರ್ಕ್‌ ಜುಕರ್‌ಬರ್ಗ್‌!!

ಇದನ್ನೂ ಓದಿ :Top 5 Bikes : ಭಾರತದ ಟಾಪ್‌ 5 ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳಿವು!

Samsung Galaxy F13 launched in India 

Comments are closed.