kannadathi : ಕಲರ್ಸ್ ಕನ್ನಡದ ಟಾಪ್ ಧಾರವಾಹಿಗಳು ಅಂದರೆ ಅಲ್ಲಿ ಕೇಳಿ ಬರುವ ಹೆಸರುಗಳಲ್ಲಿ ಕನ್ನಡತಿ ಕೂಡ ಒಂದು. ಕನ್ನಡತಿ ಧಾರವಾಹಿಯು ವಿಶೇಷ ಕಾರಣಕ್ಕಾಗಿ ಅಭಿಮಾನಿಗಳನ್ನು ತನ್ನತ್ತ ಸಂಪಾದಿಸಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ರಂಜನಿ ರಾಘವನ್ ಸ್ಫುಟವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದರೆ. ಈ ಧಾರವಾಹಿಯಲ್ಲಿ ಕೊನೆಯಲ್ಲಿ ಬರುವ ಸರಿಗನ್ನಡಂ ಗೆಲ್ಲೆಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಈ ಧಾರವಾಹಿಯಲ್ಲಿ ಮಲೆನಾಡಿನ ಹಸಿರುಪೇಟೆಯ ನಿವಾಸಿಯಾಗಿರುವ ಭುವಿ ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುತ್ತಾರೆ. ಇದೀಗ ಹರ್ಷ ಇರುವ ಕಂಪನಿಯಲ್ಲಿಯೇ ಭುವಿ ಕೆಲಸ ಮಾಡ್ತಿರ್ತಾರೆ.
ಸಧ್ಯ ಧಾರವಾಹಿಯಲ್ಲಿ ಹರ್ಷ ಹಾಗೂ ಭುವಿ ನಿಶ್ಚಿತಾರ್ಥವಾಗಿದ್ದು ಸದ್ಯದಲ್ಲೇ ಮದುವೆ ಕಾರ್ಯಕ್ರಮ ನಡೆಯಲಿದೆ. ಹರ್ಷ ಪಾತ್ರದಲ್ಲಿ ಕಿರಣ್ ರಾಜ್ ಅತ್ಯಂತ ಅಮೋಘವಾಗಿ ನಟಿಸುತ್ತಿದ್ದು ಇಬ್ಬರ ಕಾಂಬಿನೇಷನ್ ಪ್ರೇಕ್ಷಕರ ಪಾಲಿಗೆ ಫೇವರಿಟ್ ಎನಿಸಿದೆ. ಆದರೆ ಈ ಧಾರವಾಹಿ ತಂಡವು ಅಭಿಮಾನಿಗಳಿಗೆ ಬೇಸರ ಎನಿಸುವ ಸುದ್ದಿಯನ್ನು ಹೊರ ಹಾಕಲಿದೆ. ಅದೇನೆಂದರೆ ಈ ಧಾರವಾಹಿಯು ಇನ್ನೇನು ಕೆಲವೇ ದಿನಗಳಲ್ಲಿ ಕೊನೆ ಕಾಣಲಿದೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ.
ಕನ್ನಡತಿ ಧಾರವಾಹಿಯ ಒಂದು ವಿಶೇಷತೆ ಅಚ್ಛ ಕನ್ನಡವಾಗಿದ್ದರೆ ಮತ್ತೊಂದು ಈ ಧಾರವಾಹಿಯಲ್ಲಿ ಯಾವುದೇ ಕತೆಯನ್ನು ಎಳೆಯುವುದಿಲ್ಲ. ಇದೇ ಕಾರಣಕ್ಕೆ ಹರ್ಷ ಹಾಗೂ ಭುವಿಯ ಮದುವೆಯ ಮೂಲಕ ಈ ಸೀರಿಯಲ್ನ್ನು ಅಂತ್ಯಗೊಳಿಸಲು ಕನ್ನಡತಿ ತಂಡವು ನಿರ್ಧರಿಸಿದೆ ಎನ್ನಲಾಗಿದೆ. ಸಾನಿಯಾ ಬಣ್ಣವನ್ನು ಎಲ್ಲರಿಗೂ ಬಯಲು ಮಾಡಿ ಬಳಿಕ ಸುಂದರ ಎಪಿಸೋಡ್ನೊಂದಿಗೆ ಸೀರಿಯಲ್ನ್ನು ಎಂಡ್ ಮಾಡಬೇಕೆಂದು ಧಾರವಾಹಿ ತಂಡವು ನಿರ್ಧರಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಈ ಧಾರವಾಹಿಯಲ್ಲಿ ಕೊನೆಕಾಣಲಿದೆ ಎನ್ನಲಾಗಿದೆ .
ಇದನ್ನು ಓದಿ : Glucose Mixed With Red Medicine : ರಕ್ತದ ಬದಲು ರೋಗಿಯ ದೇಹಕ್ಕೆ ಗ್ಲುಕೋಸ್ ಹಾಕಿದ ಆಸ್ಪತ್ರೆ ಸಿಬ್ಬಂದಿ
ಇದನ್ನೂ ಓದಿ : Kannadathi serial : ಕನ್ನಡತಿ ಧಾರವಾಹಿಯ ಬಿಂದು ಪಾತ್ರದಲ್ಲಿ ನಟಿಸುತ್ತಿರುವ ನಟಿಯ ರಿಯಲ್ ಲೈಫ್ ಕಹಾನಿ ಹೀಗಿದೆ
kannadathi serial new updates