ಕರ್ನಾಟಕದಲ್ಲಿ ಭಾರೀ ಮಳೆಯ ಎಚ್ಚರಿಕೆ : 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಬೆಂಗಳೂರು : ನೈಋತ್ಯ ಮಾನ್ಸೂನ್ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ (Karnataka) ಹತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ( Yellow Alert ) ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ಶೀಘ್ರದಲ್ಲೇ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಎರಡು ಮೂರು ದಿನಗಳ ಕಾಲ ರಾಜ್ಯದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಲಘು ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಕರ್ನಾಟಕದ ಕೆಲವು ಭಾಗಗಳು, ಕೊಂಕಣ ಮತ್ತು ಗೋವಾದ ಕೆಲವು ಭಾಗಗಳು, ತಮಿಳುನಾಡಿ ಕೆಲವು ಭಾಗಗಳಲ್ಲಿ ಮಳೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜೂನ್ 1 ರಿಂದ ಈಶಾನ್ಯ ಭಾರತದಲ್ಲಿ ಮಳೆಯ ಚಟುವಟಿಕೆಯಲ್ಲಿ ಹೆಚ್ಚಳ ಮತ್ತು ಮುಂಬರುವ ದಿನಗಳಲ್ಲಿ ನೈರುತ್ಯ ಮಾನ್ಸೂನ್‌ನ ಪ್ರಗತಿಯನ್ನು ಭವಿಷ್ಯ ನುಡಿದಿದೆ. ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತಕ್ಕೆ ಕಡಿಮೆ ಮಟ್ಟದ ನೈಋತ್ಯ ಮಾರುತಗಳು ಜೂನ್ 02 ರಿಂದ ಬಲಗೊಳ್ಳುವ ಸಾಧ್ಯತೆಯಿದೆ. ಅದರ ಪ್ರಭಾವದಿಂದ ಈಶಾನ್ಯ ಭಾರತದ ಮೇಲೆ ಮಳೆಯ ಚಟುವಟಿಕೆಯು ಹೆಚ್ಚಾಗುವ ಸಾಧ್ಯತೆಯಿದೆ.

ನಾಳೆಯಿಂದ ಈಶಾನ್ಯ ಭಾರತದಲ್ಲಿ ಮಳೆಯ ಚಟುವಟಿಕೆಯು ಹೆಚ್ಚಾಗುವ ಸಾಧ್ಯತೆಯಿದೆ, ಜೂನ್ 1, 2022 ರಿಂದ ಅಸ್ಸಾಂ ಮತ್ತು ಮೇಘಾಲಯ ಮತ್ತು ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಜೂನ್ 2 ಮತ್ತು 4 ರ ಅವಧಿಯಲ್ಲಿ ವ್ಯಾಪಕವಾದ ಲಘು/ಮಧ್ಯಮ ಮಳೆಯ ಜೊತೆಗೆ ಅತಿ ಹೆಚ್ಚು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : kannadathi : ಈ ದಿನದಂದು ಕೊನೆಗಾಣಲಿದೆ ಕನ್ನಡತಿ ಧಾರವಾಹಿ : ಅಭಿಮಾನಿಗಳಿಗೆ ಭಾರೀ ನಿರಾಶೆ

ಇದನ್ನೂ ಓದಿ : Rohith Chakrathirtha : ಮುಂದಿನ ದಿನದಲ್ಲಿ ಬದಲಾಗಲಿದ್ಯಾ ಸಂಪೂರ್ಣ ಪಠ್ಯ : ರೋಹಿತ್ ಚಕ್ರತೀರ್ಥ ಕೊಟ್ಟ ಸುಳಿವೇನು ?

Heavy rainfall alert in Karnataka, issued yellow alert for 10 districts

Comments are closed.