ಭಾನುವಾರ, ಏಪ್ರಿಲ್ 27, 2025
HomeCinemaKantara 2 movie : ನಟ ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾ : ಆಗಸ್ಟ್‌...

Kantara 2 movie : ನಟ ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾ : ಆಗಸ್ಟ್‌ 27ಕ್ಕೆ ಮೂಹೂರ್ತ ಫಿಕ್ಸ್

- Advertisement -

ಕಳೆದ ವರ್ಷ ನಟ ರಿಷಬ್‌ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾ (Kantara 2 movie) ಜಗತ್ತಿನಾದ್ಯಂತ ಮನ್ನಣೆಯನ್ನು ಪಡೆಯಿತು. ಅಷ್ಟೇ ಅಲ್ಲದೇ ಇಡೀ ಭಾರತೀಯ ಸಿನಿರಂಗ ಸ್ಯಾಂಡಲ್‌ವುಡ್‌ನತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದೆ. ಈ ಸಿನಿಮಾವು ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಭರ್ಜರಿ ಕಲೆಕ್ಷನ್‌ನ್ನು ಕಂಡಿದೆ. ಕಾಂತಾರ ಸಿನಿಮಾವನ್ನು ನೋಡಿದ ಸಿನಿಪ್ರೇಕ್ಷಕರು ಇದರ ಮುಂದುವರೆದ ಭಾಗ ಬರಬೇಕೆಂದು ಹೇಳಿದರು. ಪ್ರೇಕ್ಷಕರ ಆಸೆಯಂತೆ ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಸಿದ್ದಗೊಳಿಸುವಂತೆ ನಟ, ನಿರ್ದೇಶಕ ಹೇಳಿಕೊಂಡಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಹೊರಗಡೆ ಬಂದಿದೆ. ಅದೆನೆಂದರೆ ಆಗಸ್ಟ್‌ ತಿಂಗಳಲ್ಲಿ ಸಿನಿಮಾ ಮೂಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿ ಆಗಿದ್ದು, ಈ ವಿಷಯ ತಿಳಿದ ಅಭಿಮಾನಿಗಳು ಸಂತಸಪಟ್ಟಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾವು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಸುಮಾರು 400 ಕೋಟಿ ರೂ.ಗಳಷ್ಟು ಗಳಿಕೆ ಕಂಡಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಗೆ ದೊಡ್ಡ ಮಟ್ಟದ ಲಾಭ ತಂದು ಕೊಟ್ಟಿತು. ಹಾಗೆಯೇ ಎಲ್ಲಡೆ ಪ್ರಶಂಸೆ ಕೂಡ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ ಈ ಸಿನಿಮಾದ ಎರಡನೇ ಭಾಗವನ್ನು ಮಾಡಲು ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ಧಾರ ಮಾಡಿದ್ದರು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾದ ಮೂಹೂರ್ತವು ಆಗಸ್ಟ್‌ 27ರಂದು ನೆರವೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ತದನಂತರದ ದಿನಗಳಲ್ಲಿ ಸಿನಿತಂಡ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಲಿದೆ.

ಇದನ್ನೂ ಓದಿ : ಬೀಗರೂಟಕ್ಕೆ ಬನ್ನಿ ಹರಸಿ : ಮಂಡ್ಯ ಜನರಿಗೆ ಅಭಿಷೇಕ್‌ ಅಂಬರೀಷ್ -‌ ಅವಿವಾ ಬಿದ್ದಪ್ಪ ಆಹ್ವಾನ

ಇನ್ನು ಕಾಂತಾರ 2 ಸಿನಿಮಾಕ್ಕೆ ಮಳೆಗಾಲದ ಅವಶ್ಯಕತೆ ಇರುವುದರಿಂದ ಆಗಸ್ಟ್‌ ಯಿಂದ ಸೆಪ್ಟೆಂಬರ್‌ ತಿಂಗಳಲ್ಲಿ ಸಿನಿಮಾ ಶೂಟಿಂಗ್‌ ಮಾಡಲು ರಿಷಬ್‌ ಶೆಟ್ಟಿ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಅಚ್ಯುತ್‌ ಕುಮಾರ್‌ ಸೇರಿದಂತೆ ಬಹುತಾರಾಂಗಣದಿಂದ ಕೂಡಿತ್ತು. ಇನ್ನು ಈ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Kantara 2 movie : Actor Rishabh Shetty Kantara 2 movie : Moohurta fix for August 27

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular