ಬೀಗರೂಟಕ್ಕೆ ಬನ್ನಿ ಹರಸಿ : ಮಂಡ್ಯ ಜನರಿಗೆ ಅಭಿಷೇಕ್‌ ಅಂಬರೀಷ್ -‌ ಅವಿವಾ ಬಿದ್ದಪ್ಪ ಆಹ್ವಾನ

Abhishek Ambareesh Aviva Bidappa : ಮಂಡ್ಯದ ಗಂಡು ಅಂಬರೀಶ್ ಹಾಗೂ ಮಂಡ್ಯಕ್ಕೆ ಇನ್ನಿಲ್ಲದ ನಂಟಿದೆ. ಅಂಬಿ ನಿಧನದ ಬಳಿಕವೂ ಸುಮಲತಾ ಮಂಡ್ಯದೊಂದಿಗೆ ಬೆಸೆದುಕೊಂಡಿದ್ದು, ಈಗ ತಮ್ಮ ಪುತ್ರನ ವಿವಾಹದ ಬೀಗರೂಟವನ್ನು ಮಂಡ್ಯದಲ್ಲಿ ನಡೆಸೋ ಮೂಲಕ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಹಾಕಿಸಲು ಮುಂದಾಗಿದ್ದಾರೆ. ಮಾತ್ರವಲ್ಲ ಸ್ವತಃ ಅಭಿ-ಅವಿವಾ ದಂಪತಿ ಹಾಗೂ ಸಂಸದೆ ಸುಮಲತಾ ಖುದ್ದು ಕೈಮುಗಿದು ಬೀಗರೂಟಕ್ಕೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

ಮಂಡ್ಯದೊಂದಿಗೆ ಭಾವನಾತ್ಮಕ ನಂಟು, ಸಂಬಂಧ ಹೊಂದಿರೋ ಸುಮಲತಾ ಸ್ವತಃ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಕೂಡ ಹೌದು. ಮಗನ ವಿವಾಹವನ್ನು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆಸಿದ್ದರೂ , ಮಂಡ್ಯದ ಜನರನ್ನು ಮರೆತಿಲ್ಲ. ಹೀಗಾಗಿ ಮಂಡ್ಯದ ಗೆಜ್ಜಲಗೆರೆಯಲ್ಲಿ ಬೃಹತ್ ಬೀಗರೂಟ ಏರ್ಪಡಿಸಲಾಗಿದೆ. ಈ ಬೀಗರೂಟಕ್ಕೆ ನಟ ಅಭಿಷೇಕ್ ಪತ್ನಿ ಅವಿವಾ ಜೊತೆ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಗೆಜ್ಜಲಗೆರೆ ಬೀಗರೂಟಕ್ಕೆ ಬನ್ನಿ ಹರಸಿ ಎಂದು ನವ ದಂಪತಿ ಮನವಿ ಮಾಡಿದ್ದಾರೆ.

ಇನ್ನೂ ಪುತ್ರನ ವಿವಾಹ ಮಹೋತ್ಸವದ ಬಳಿಕ ನಡೆಯುತ್ತಿರೋ ಬೀಗರೂಟಕ್ಕೆ ಕೈಮುಗಿದು ಸುಮಲತಾ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಸಮಯದ ಅಭಾವದಿಂದ ಯಾರನ್ನೂ ವೈಯಕ್ತಿಕವಾಗಿ ಆಹ್ವಾನಿಸಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರೂ ಇದನ್ನು ತಮ್ಮ ಮನೆಯ ಕಾರ್ಯಕ್ರಮ ಎಂದುಕೊಂಡು ಬಂದು ಅಭಿಷೇಕ್ ಮತ್ತು ಅವಿವಾರನ್ನು ಹರಸಿ ಹಾರೈಸುವಂತೆ ಸುಮಲತಾ ಮನವಿ ಮಾಡಿದ್ದಾರೆ. ಮಂಡ್ಯದ ಗೆಜ್ಜಲಗೆರೆಯಲ್ಲಿ ಅದ್ದೂರಿ ಬಾಡೂಟಕ್ಕೆ ಸಿದ್ಧತೆ ನಡೆದಿದ್ದು, ಒಟ್ಟು 15 ಎಕರೆ ಪ್ರದೇಶದಲ್ಲಿ ಬೀಗರ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಡೂಟಕ್ಕೆ 50 ರಿಂದ 70 ಸಾವಿರ ಜನ ಬರುವ ನೀರಿಕ್ಷೆ ಇದ್ದು, ಶುಕ್ರವಾರ ಮುಂಜಾನೆ 11 ಗಂಟೆಯಿಂದಲೇ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕೇವಲ ನಾನ್ ವೆಜ್ ಮಾತ್ರವಲ್ಲದೆ ವೆಜ್ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ವಧು-ವರರಿಗೆ ಶುಭಕೋರಲು ಕೂಡ ಅವಕಾಶ ಕಲ್ಪಿಸಲಾಗಿದೆ. ಬೀಗರ ಊಟಕ್ಕೆ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ ಮಟನ್,2 ತರದ ಚಿಕನ್, ಗೀ ರೈಸ್, ಅನ್ನ ತಿಳಿ ಸಾರು, ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ, ನಂದಿನಿ ಐಸ್ ಕ್ರೀಂ ನೀಡಲಾಗುತ್ತದೆ. ಬೀಗರೂಟಕ್ಕಾಗಿ 7 ಟನ್ ಮಟನ್ ಹಾಗೂ 7 ರಿಂದ 10 ಟನ್ ಚಿಕನ್ ಸಿದ್ಧಪಡಿಸಲಾಗಿದೆ. ಈಗಾಗಲೇ ಅಂಬರೀಶ್ ಕುಟುಂಬದ ಆಪ್ತ ರಾಕ್ ಲೈನ್ ವೆಂಕಟೇಶ್ ಮದುವೆ ಬೀಗರೂಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Actress Ramya : ಆರೆಂಜ್‌ ಕಲರ್‌ ಸೀರೆಯಲ್ಲಿ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡ ಮೋಹಕತಾರೆ ರಮ್ಯಾ

ಇದನ್ನೂ ಓದಿ : Shilpa Shetty’s photos : 48 ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಹಾಟ್ ಪೋಟೋ : ಪಡ್ಡೆ ಹೈಕಳ ನಿದ್ದೆಗೆಡಿಸಿದ ಬಾಲಿವುಡ್ ಬ್ಯೂಟಿ

Abhishek Ambareesh Aviva Bidappa Beegaruta Today in Mandya

Comments are closed.