Kantara Box Office Collection: ಕಾಂತಾರ ಸಿನಿಮಾವು ಸ್ಯಾಂಡಲ್ವುಡ್ನ ಕೀರ್ತಿಯನ್ನು ಇನ್ನೊಂದು ಹಂತಕ್ಕೆ ಏರಿಸಿದೆ. ಕೆಜಿಎಫ್ 2 ಸಿನಿಮಾದ ಬಳಿಕ ಸಿನಿಮಾ ಪ್ರಿಯರಿಗೆ ಚಂದನವನದ ಹೆಸರನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿತ್ತು. ಇದೀಗ ಕಾಂತಾರ ಸಿನಿಮಾದ ಬಳಿಕ ಸ್ಯಾಂಡಲ್ವುಡ್ನ ಸಿನಿಮಾಗಳ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗುವಂತಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ಅಡಿಯಲ್ಲಿ ವಿಜಯ್ ಕಿರಂಗದೂರು ನಿರ್ಮಿಸಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಆ್ಯಕ್ಷನ್ -ಥ್ರಿಲ್ಲರ್ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಕಂಬಳ ಗದ್ದೆಯ ಚಾಂಪಿಯನ್ ಆಗಿ ಹಾಗೂ ಭೂತಕೊಲ ಕಟ್ಟುವ ಕುಟುಂಬದ ಪುತ್ರನಾಗಿ ನಟಿಸಿದ್ದಾರೆ. ತಮ್ಮ ಊರನ್ನು ಉಳಿಸಿಕೊಳ್ಳಲು ಮೊದಲು ಅರಣ್ಯಾಧಿಕಾರಿ ವಿರೋಧವನ್ನು ಕಟ್ಟಿಕೊಳ್ಳುವ ಶಿವ(ರಿಷಭ್) ಬಳಿಕ ಊರಿನ ಮುಖಂಡನನ್ನೇ ಎದುರಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್ ಕುಮಾರ್, ಅಚ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂತಾರ- ಒಂದು ದಂತಕತೆಯೆಂದ ರಿಷಭ್ ಶೆಟ್ಟಿಯವರ ಈ ಸಿನಿಮಾ ಇದೀಗ ಕರ್ನಾಟಕದಲ್ಲಿ ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯಲದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾ ಕಲೆಕ್ಷನ್ನ್ನು ಕರ್ನಾಟಕದಲ್ಲಿ ಹಿಂದಿಕ್ಕುವ ಮೂಲಕ ಕಾಂತಾರ ತನ್ನ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿದೆ.
ಕಾಂತಾರ ಸಿನಿಮಾವು ಕರ್ನಾಟಕದಲ್ಲಿ ಇಲ್ಲಿಯವರೆಗೆ ಸರಿ ಸುಮಾರು 111 ಕೋಟಿ ರೂಪಾಯಿಗಳನ್ನು ಗಳಿಸಿದೆ.ಕಾಂತಾರ ತೆರೆಕಂಡು ನಾಲ್ಕನೇ ವಾರಾಂತ್ಯದಲ್ಲಿ 14 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಕೆಜಿಎಫ್ 2 ಸಿನಿಮಾ ತನ್ನ ನಾಲ್ಕನೇ ವಾರದಲ್ಲಿ ಗಳಿಸಿದ ಕಲೆಕ್ಷನ್ನ ದುಪ್ಪಟ್ಟು ಹಣವಾಗಿದೆ. ವೀಕೆಂಡ್ ಹಾಗೂ ದೀಪಾವಳಿ ಹಬ್ಬ ಒಟ್ಟೊಟ್ಟಾಗಿ ಬಂದ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ನಾಲ್ಕನೇ ವಾರದಲ್ಲಿಯೂ ದಾಖಲೆಯ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸಿನಲ್ಲಿ ಈ ಸಿನಿಮಾ ಒಟ್ಟು 170 ಕೋಟಿ ರೂಪಾಯಿಗಳನ್ನು ತಲುಪಿದೆ. ನಾಲ್ಕನೇ ವಾರದ ಅಂತ್ಯದ ವೇಳೆಗೆ ಕಾಂತಾರ ಸಿನಿಮಾ 200 ಕೋಟಿ ರೂಪಾಯಿಗಳನ್ನು ಗಳಿಸುವ ಸಾಧ್ಯತೆಯಿದೆ.
ಈ ಎಲ್ಲದರ ನಡುವೆ ಕಾಂತಾರ ಸಿನಿಮಾ ವಿದೇಶದಲ್ಲಿ 18 ಕೋಟಿ ರೂಪಾಯಿಗಳನ್ನು ಗಳಿಸಿದೆ. ವಿಶ್ವಾದ್ಯಂತ 188 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಯಶ್ ಅಭಿನಯದ ಕೆಜಿಎಫ್ ಸಿನಿಮಾವನ್ನು ಹಿಂದಿಕ್ಕಿ ಸಾರ್ವಕಾಲಿಕ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ಗಳಿಸಿದೆ.
ವಿಶ್ವಾದ್ಯಂತ ತಮ್ಮ ಸಿನಿಮಾಗೆ ಸಿಗುತ್ತಿರುವ ವ್ಯಾಪಕ ಬೆಂಬಲದ ಕುರಿತು ಮಾತನಾಡಿದ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ, ಭಾರತದ ಜನತೆ ಭಾವುಕ ಜೀವಿಗಳಾಗಿದ್ದಾರೆ. ಅವರು ನಮ್ಮ ಸಂಸ್ಕೃತಿಯಲ್ಲಿ ಬೇರೂರಿರುವ ಕತೆಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದಾರೆ .
ಇದನ್ನು ಓದಿ : World’s dirtiest man: ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94ನೇ ವಯಸ್ಸಿಗೆ ನಿಧನ
ಇದನ್ನೂ ಓದಿ : Covid-19 Could Accelerate Ageing:ಕೋವಿಡ್ 19ನಿಂದಾಗಿ ಮನುಷ್ಯರಲ್ಲಿ ವಯಸ್ಸಾಗುವಿಕೆ ವೇಗ ಹೆಚ್ಚಾಗಿದೆ : ಅಧ್ಯಯನ
Kantara Box Office Collection: Rishabh Shetty’s Magnum Opus Surpasses Yash’s KGF in Karnataka