Man Fires Multiple Rockets: ಜನರನ್ನು ಬೆದರಿಸಲೆಂದೇ ಪಟಾಕಿ ಸಿಡಿಸಿದ ಭೂಪ : ಪೊಲೀಸರಿಂದ ಕಿಡಿಗೇಡಿಗಾಗಿ ತಲಾಶ್​

ಮುಂಬೈ : Man Fires Multiple Rockets : ದೀಪಾವಳಿ ಹಬ್ಬ ಅಂದರೆ ಸಾಕು ಮೊದಲು ನೆನಪಾಗೋದೇ ಪಟಾಕಿ. ಪಟಾಕಿ ಇಲ್ಲದೇ ದೀಪಾವಳಿ ಹಬ್ಬಕ್ಕೆ ಮಜವೇ ಇಲ್ಲ ಎಂಬಂತಾಗುತ್ತೆ. ಆದರೆ ಈಗೀಗ ಪರಿಸರ ಪ್ರಿಯರು ಪರಿಸರದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಪಟಾಕಿಯ ಸಂಭ್ರಮವನ್ನು ತ್ಯಾಗ ಮಾಡುತ್ತಾರೆ. ಆದರೆ ಬಹುತೇಕರು ದೀಪಾವಳಿ ಹಬ್ಬವನ್ನು ಪಟಾಕಿ ಇಲ್ಲದೇ ಆಚರಿಸುವುದೇ ಇಲ್ಲ. ಅದೇ ರೀತಿ ದೀಪಾವಳಿ ಹಬ್ಬದಂದು ಒಂದೇ ಬಾರಿಗೆ ಹಲವಾರು ರಾಕೆಟ್​ ಪಟಾಕಿಯನ್ನು ಸಿಡಿಸಿ ಜನರಿಗೆ ಅಂಜಿಸಲು ಹೋದ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ ಘಟನೆಯು ಮಹಾರಾಷ್ಟ್ರದ ಥಾಣೆಯ ಉಲ್ಲಾಸ್​ ನಗರದಲ್ಲಿ ಸಂಭವಿಸಿದೆ. ಈತ ಒಂದೇ ಬಾರಿಗೆ ಹಲವಾರು ರಾಕೆಟ್​ ಪಟಾಕಿಯನ್ನು ಸಿಡಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.


ಘಟನೆ ಸಂಬಂಧಿ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯು ವಸತಿ ಕಟ್ಟಡಗಳ ಕಡೆಗೆ ಹಲವಾರು ರಾಕೆಟ್​ ಪಟಾಕಿಯನ್ನು ಗುರಿಯಾಗಿಸಿ ಸಿಡಿಸುವುದನ್ನು ನೋಡಬಹುದಾಗಿದೆ.


ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್​ 285( ಬೆಂಕಿ ಅಥವಾ ದಹನಕಾರಿ ವಸ್ತುಗಳ ಬಗ್ಗೆ ನಿರ್ಲಕ್ಷ್ಯ), 286( ಸ್ಫೋಟಕಗಳ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ) ಹಾಗೂ 336(ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ಥಾಣೆಯ ಪಾಲಿಕೆಯು ನೀಡಿರುವ ಮಾಹಿತಿಯ ಪ್ರಕಾರ ಥಾಣೆಯ ವಿವಿಧ ಸ್ಥಳಗಳಲ್ಲಿ ಪಟಾಕಿ ಸಿಡಿತದಿಂದಾಗಿ ಐದು ಅಗ್ನಿ ಅನಾಹುತದ ಘಟನೆಗಳು ವರದಿಯಾಗಿವೆ. ಆದರೆ ಯಾವುದೇ ಪ್ರಕರಣಗಳಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಪಾಲಿಕೆಯು ಮಾಹಿತಿಯನ್ನು ನೀಡಿದೆ.

ಇದನ್ನು ಓದಿ : Kantara Box Office Collection: ಬಾಕ್ಸಾಫೀಸ್​ ಕಲೆಕ್ಷನ್​ನಲ್ಲಿ ಕೆಜಿಎಫ್​ 2 ಸಿನಿಮಾವನ್ನೇ ಹಿಂದಿಕ್ಕಿದ ಕಾಂತಾರ

ಇದನ್ನೂ ಓದಿ : Covid-19 Could Accelerate Ageing:ಕೋವಿಡ್​ 19ನಿಂದಾಗಿ ಮನುಷ್ಯರಲ್ಲಿ ವಯಸ್ಸಾಗುವಿಕೆ ವೇಗ ಹೆಚ್ಚಾಗಿದೆ : ಅಧ್ಯಯನ

Maharashtra: Man Fires Multiple Rockets to Scare People in Thane, Booked

Comments are closed.