ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ದೇಶ ವಿದೇಶಗಳಲ್ಲಿ ಸಂಚಲನವನ್ನು ಮೂಡಿಸಿದ್ದು, ಅಪಾರ ಸಂಖ್ಯೆಯ ಸಿನಿಪ್ರೇಕ್ಷಕರ ಮನರಂಜಿಸಿದೆ. ಈಗಾಗಲೇ (Kantara Daiva Disguise) ಸಿನಿಮಾವು ಹಲವಾರು ದಾಖಲೆ ಬರೆದಿದೆ. ಈ ಸಿನಿಮಾದ ಕಥೆ, ಹಾಡು, ನಟನೆ ಹಾಗೂ ಸಂಭಾಷಣೆ ಪ್ರೇಕ್ಷಕರನ್ನು ಎಷ್ಟು ಮೋಡಿ ಮಾಡಿದೆ ಎಂದರೆ ಪೊಲೀಸ್ ಅಧಿಕಾರಿಯೊಬ್ಬರು ಕ್ರೀಡಾಕೂಟದಲ್ಲಿ ಪಂಜುರ್ಲಿ ದೈವದ ವೇಷದಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ಬೀದರ್ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕಾಂತಾರ ಸಿನಿಮಾದ ಪಂಜುರ್ಲಿ ದೈವದ ವೇಷವನ್ನು ಧರಿಸಿ ದೈವದಂತೆ ಕೂಗಿ ಎಲ್ಲರ ಗಮನ ಸೆಳೆದಿದ್ದಾರೆ. ದೈವದ ವೇಷಧರಿಸಿದ ಪೊಲೀಸ್ ಅಧಿಕಾರಿ ಕಲಬುರಗಿ ವಲಯದ ಐಜಿಪಿ ಮನೀಶ ಎಂದು ಗುರುತಿಸಲಾಗಿದೆ. ಪಂಜುರ್ಲಿ ದೈವದ ವೇಷದಲ್ಲಿ ಬಂದ ಪೊಲೀಸ್ ಅಧಿಕಾರಿಗೆ ನೆರೆದಿರುವವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಕಾಂತಾರ ಸಿನಿಮಾವು 2022ನೇ ಸಾಲಿನ ಬ್ಲಾಕ್ ಬಸ್ಟರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿಯೂ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನ ಗೆದ್ದಿದೆ. ಕನ್ನಡದಲ್ಲಿ ಪ್ರಾರಂಭವಾದ ಕಾಂತಾರ ಸಿನಿಮಾದ ಗೆಲುವಿನ ಓಟ ಎಲ್ಲಾ ಭಾಷೆಗಳಿಗೂ ಹಬ್ಬಿದೆ.ಕಾಂತಾರ ಸಿನಿಮಾವು ಐವತ್ತು ದಿನಗಳನ್ನು ಪೂರೈಸಿ ಯಶಸ್ಸಿಯಾಗಿ ಮುನ್ನುಗ್ಗುತ್ತಿದ್ದು, ಈವರೆಗೂ 400ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ : Hansika Motwani : ಪ್ರೀ ವೆಡ್ಡಿಂಗ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ಹನ್ಸಿಕಾ ಮೋಟ್ವಾನಿ ಜೋಡಿ
ಇದನ್ನೂ ಓದಿ : Vaishnavi Gowda Engagement: ಎಂಗೇಜ್ ಮೆಂಟ್ ಮಾಡಿಕೊಂಡ್ರಾ ನಟಿ ವೈಷ್ಣವಿ ಗೌಡ..? ವೈರಲ್ ಆದ ಫೋಟೋದ ಅಸಲಿಯತ್ತೇನು..
ಕರ್ನಾಟಕವೊಂದರಲ್ಲೇ 170 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸ್‌ಗೆ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ವಿದೇಶದಿಂದ ಬಂದ ಹಣವನ್ನು ಒಟ್ಟಾಗಿಸಿದರೆ ಸಿನಿಮಾದ ಒಟ್ಟು ಗಳಿಕೆ 400ಕೋಟಿ ರೂಪಾಯಿ ಆಗಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಈ ಪ್ರಮಾಣದಲ್ಲಿ ಗಳಿಕೆ ಮಾಡುವ ಮೂಲಕ ಎಲ್ಲಾ ಸಿನಿಮಾರಂಗದ ಘಟಾನಿಘಟಿಗಳು ಹುಬ್ಬೇರಿಸುವಂತೆ ಮಾಡಿದೆ.
Kantara Daiva Disguise : Kantara is a brilliant police personnel in the guise of a god