ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅಭಿನಯದ “ಕಾಂತಾರ” ಸಿನಿಮಾ ಹಿಂದಿ ಡಬ್ಬಿಂಗ್ (Kantara Movie Hindi Version) ಸಿನಿಮಂದಿರಗಳಲ್ಲಿ ಶತದಿನ ಪೂರೈಸಿದೆ. ಇನ್ನು ಕೂಡ ಮುಂಬೈ, ಅಹಮದಾಬಾದ್, ದೆಹಲಿಯಲ್ಲಿ ಸಿನಿಮಾ ಇನ್ನು ಯಶಸ್ವಿಯಾಗಿ ಪ್ರದರ್ಶನವಾಗುತ್ತಲೇ ಇದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ 100 ದಿನದ ಗಡಿ ದಾಟಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಂಡಿದೆ.
ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾಕ್ಕೆ ಪರಭಾಷೆಗಳಲ್ಲೂ ಭಾರೀ ಬೇಡಿಕೆ ಶುರುವಾಯಿತು. ಈ ಸಿನಿಮಾ ನಿಧಾನವಾಗಿ ಸಿನಿಮಾವನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಅಕ್ಟೋಬರ್ 14ರಂದು ಕಾಂತಾರ ಹಿಂದಿ ವರ್ಷನ್ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಕಂಡಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ನಂತರ ಈ ಸಿನಿಮಾ 70 ಕೋಟಿ ರೂ.ಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ.
We are ecstatic to share that #Kantara in Hindi, depicting the traditional folklore, has completed 100 days. We express our deep gratitude to the audience for their unwavering support. #KantaraHindi100Days @shetty_rishab #VijayKiragandur @hombalefilms @AAFilmsIndia pic.twitter.com/z3KaRqpNyg
— Hombale Films (@hombalefilms) January 22, 2023
ರಿಷಬ್ ಶೆಟ್ಟಿ ಮೊದಲು ಕನ್ನಡದಲ್ಲಿ ಮಾತ್ರ ‘ಕಾಂತಾರ’ ಸಿನಿಮಾ ಬಿಡುಗಡೆ ಮಾಡಲು ಮನಸ್ಸು ಮಾಡಿದ್ದರು. ಕನ್ನಡದ ಕಥೆಯನ್ನು ಕನ್ನಡದಲ್ಲೇ ಎಲ್ಲರೂ ನೋಡಬೇಕು ಎನ್ನುವುದು ಅವರ ಆಸೆ ಆಗಿತ್ತು. ಆದರೆ ಅಭಿಮಾನಿಗಳ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಿದರು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಹಿಂದಿ ವರ್ಷನ್ ಬಾಕ್ಸಾಫೀಸ್‌ನಲ್ಲಿ ತುಸು ಹೆಚ್ಚೇ ಸದ್ದು ಮಾಡಿದ್ದು ಸುಳ್ಳಲ್ಲ. ಮುಂಬೈ ಬಾಂದ್ರಾದ ಜಿ7 ಮಲ್ಟಿಪ್ಲೆಕ್ಸ್, ದೆಹಲಿಯ ರೋಹಿಣಿ ಹಾಗೂ ಅಹಮದಾಬಾದ್‌ನ ಎಬಿ ಮಲ್ಟಿಪ್ಲೆಕ್ಸ್‌ನಲ್ಲಿ ‘ಕಾಂತಾರ’ ಹಿಂದಿ ವರ್ಷನ್ ಇನ್ನು ಪ್ರದರ್ಶನ ಕಾಣುತ್ತಿದೆ.
ಸಿನಿಮಾ ಬಂದು 100 ದಿನ ಕಳೆದರೂ ಓಟಿಟಿಗೆ ಬಂದರೂ ಕೂಡ ಸಿನಿಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಈ ಹಿಂದೆ ಕನ್ನಡದ ಯಾವ ಸಿನಿಮಾವೂ ಮಾಡದ ದಾಖಲೆಯನ್ನು ‘ಕಾಂತಾರ’ ಬರೆದಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಬಾಲಿವುಡ್‌ನಲ್ಲಿ ಕೆಜಿಎಫ್ ಸರಣಿ ಸಿನಿಮಾಗಳನ್ನು ವಿತರಣೆ ಮಾಡಿದ್ದ ಎಎ ಫಿಲ್ಮ್ಸ್ ಸಂಸ್ಥೆ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ದಿತ್ತು. ಕರಾವಳಿ ಭಾಷೆ, ಆಚರಣೆ, ಸಂಸ್ಕೃತಿ ಆಧರಿಸಿ ಕೊಟ್ಟಿಕೊಟ್ಟಿದ್ದ ‘ಕಾಂತಾರ’ ಸಿನಿಮಾ ಪ್ರೇಕ್ಷಕರಿಗೆ ಮನಗೆದ್ದಿತ್ತು. ಕೊನೆಯ 20 ನಿಮಿಷ ಪ್ರೇಕ್ಷಕರಿಗೆ ದೈವಿಕ ಅನುಭವ ನೀಡಿತ್ತು. ಇದಕ್ಕೂ ಮೊದಲು ಕೆಜಿಎಫ್ ಸರಣಿ ಸಿನಿಮಾಗಳು ಮಾತ್ರ ಹಿಂದಿ ಬೆಲ್ಟ್‌ನಲ್ಲಿ ಹೆಚ್ಚು ಸದ್ದು ಮಾಡಿದ್ದವು.
ಆದರೆ ‘ಕಾಂತಾರ’ ಎಲ್ಲರ ನಿರೀಕ್ಷೆ ಮೀರಿ ಮ್ಯಾಜಿಕ್ ಮಾಡಿದೆ. ರಿಷಬ್ ಶೆಟ್ಟಿ ಯಾರು ಎಂದು ಗೊತ್ತಿಲ್ಲದವರು ಈಗ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಕೇವಲ ಹದಿಮೂರು ಕೋಟಿ ಬಜೆಟ್ ಸಿನಿಮಾ 400 ಕೋಟಿ ಕಲೆಕ್ಷನ್ ಮಾಡುವುದು ಎಂದರೆ ತಮಾಷೆ ಮಾತಲ್ಲ. ರಿಷಬ್ ಶೆಟ್ಟಿ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ. ಬರೀ ಹೀರೊ ಆದರೆ ಸಾಕು ಎಂದುಕೊಂಡು ಸಿನಿರಂಗಕ್ಕೆ ಬಂದಿದ್ದ ರಿಷಬ್ ಶೆಟ್ಟಿ ಈಗ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಇದೀಗ ‘ಕಾಂತಾರ- 2’ ಸಿನಿಮಾ ಕಥೆ ಬರೆಯಲು ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದಿಯೇ ಸಿನಿತಂಡ ಪಂಜುರ್ಲಿ ದೈವದ ಹರಕೆ ತೀರಿಸಿ, ಸೀಕ್ವೆಲ್ ಮಾಡಲು ಅನುಮತಿ ಕೇಳಿತ್ತು. ಒಂದಷ್ಟು ಸಲಹೆಗಳನ್ನು ನೀಡಿ ದೈವ ಅಸ್ತು ಎಂದಿದೆ. ‘ಕಾಂತಾರ- 2’ ಕೂಡ ಹಿಂದಿ ಡಬ್ ಆಗಿ ತೆರೆಗಪ್ಪಳಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ : ಜಾಗ್ವಾರ್ ನಟನಿಗೆ ಹುಟ್ಟುಹಬ್ಬದ ಸಂಭ್ರಮ : ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಿಖಿಲ್
ಇದನ್ನೂ ಓದಿ : ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ವಿವಾಹ : ಅತಿಥಿಗಳಿಗೆ ಮೊಬೈಲ್ ಬಳಕೆ ನಿಷೇಧ ?
ಇದನ್ನೂ ಓದಿ : ದರ್ಶನ್ ಅಭಿಮಾನಿಗಳಿಂದ ಕಟೌಟ್ ನಿರ್ಮಾಣ : ದಾಖಲೆ ಸೃಷ್ಟಿಸಿದ ಕ್ರಾಂತಿ ಸಿನಿಮಾ
“ಕಾಂತಾರ- 2” ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಮಾಹಿತಿ ನೀಡಿದ್ದಾರೆ. ಈಗಾಗಲೇ ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಕಥೆ ಬರೆಯುತ್ತಿದ್ದಾರೆ. ಈ ಬಾರಿ ಕಥೆಯನ್ನು ಮುಂದುವರೆಸುವ ಬದಲು ಹಿಂದಿನ ಕಥೆಯನ್ನು ಹೇಳಲು ತೀರ್ಮಾನಿಸಿದ್ದಾರೆ. ಅಂದರೆ ಕಾಡು ಬೆಟ್ಟು ಶಿವನ ತಂದೆಯ ಕಥೆಯನ್ನು ಹೇಳುತ್ತಾರಂತೆ. ಮಳೆಗಾಲದಲ್ಲಿ ಚಿತ್ರೀಕರಣ ನಡೆಸಬೇಕಿರುವುದರಿಂದ ಜೂನ್‌ನಲ್ಲಿ ಸಿನಿಮಾ ಶುರುವಾಗಲಿದೆ. ಈ ಬಾರಿ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಅದಕ್ಕಾಗಿ ರಿಷಬ್ ಶೆಟ್ಟಿ ಮತ್ತು ಸಿನಿತಂಡ ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.
Kantara Movie Hindi Version : “Kantara” movie completed 100 days at the Hindi box office.