Murder case- body cut into pieces: ಪತ್ನಿಯ ಪ್ರಿಯಕರನ ಕೊಲೆ: ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಕಾಲೋನಿಯಲ್ಲಿ ಎಸೆದ ಪತಿ

ಹೊಸದಿಲ್ಲಿ: (Murder case- body cut into pieces) 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನೇ ಕೊಂದು ಶವವನ್ನು 15 ತುಂಡುಗಳಾಗಿ ಕತ್ತರಿಸಿ ದೇಹದ ತುಂಡುಗಳನ್ನು ಖೋಡಾ ಕಾಲೋನಿಯ ವಿವಿಧ ಪ್ರದೇಶಗಳಲ್ಲಿ ಎಸೆದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ರಾಜಸ್ಥಾನದ ಕೊಟ್‌ಪುಟ್ಲಿ ಮೂಲದ ಅಕ್ಷಯ್ ಕುಮಾರ್ ಎಂಬಾತ ಕೊಲೆಯಾದ ವ್ಯಕ್ತಿ.

ಆರೋಪಿಯನ್ನು ರಿಕ್ಷಾ ಚಾಲಕ ಮಿಲಾಲ್ ಪ್ರಜಾಪತಿ ಎಂದು ಗುರುತಿಸಲಾಗಿದ್ದು, ಅಕ್ಷಯ್‌ ಕುಮಾರ್‌ ಗೆ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಕೊಲೆಗೈದಿದ್ದಾನೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ಅಕ್ಷಯ್‌ ಕುಮಾರ್‌ ಜೊತೆಗೆ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆರೋಪಿ ಪ್ರಜಾಪತಿ ತನ್ನ ಹೆಂಡತಿಯ ಬಳಿ ಅಕ್ಷಯ್‌ ಕುಮಾರ್‌ ನನ್ನು ಮನೆಗೆ ಕರೆಯುವಂತೆ ತಿಳಿಸಿದ್ದಾನೆ. ಆಹ್ವಾನಕ್ಕೆ ಓಗೊಟ್ಟು ಕುಮಾರ್‌ ಅವರ ಮನೆಗೆ ಬಂದಿದ್ದಾನೆ. ನಂತರ ಆರೋಪಿಯ ಮಗಳಿಗೆ ಸುಟ್ಟ ಗಾಯಗಳಾಗಿದ್ದು ಪತ್ನಿಯೊಂದಿಗೆ ಮಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾನೆ.

ಇದಾದ ಬಳಿಕ ಆರೋಪಿ ಪ್ರಜಾಪತಿ ಕುಮಾರ್‌ಗೆ ಕೆಲವು ಪಾನೀಯಗಳನ್ನು ನೀಡಿದ್ದು, ತಡರಾತ್ರಿಯಲ್ಲಿ ಕುಮಾರ್‌ ನನ್ನು ಕೊಂದು ಕೊಡಲಿಯಿಂದ ದೇಹವನ್ನು ಹದಿನೈದು ಭಾಗಗಳಾಗಿ ಕತ್ತರಿಸಿದ್ದಾನೆ. ಮರುದಿನ ಮುಂಜಾನೆ 1 ಗಂಟೆಗೆ ಪ್ರಜಾಪತಿ ತನ್ನ ರಿಕ್ಷಾದಲ್ಲಿ ಮೂರು ಚೀಲಗಳಲ್ಲಿ ಕತ್ತರಿಸಿದ ದೇಹದ ತುಂಡುಗಳನ್ನು ತುಂಬಿಕೊಂಡು ಖೋಡಾ ಕಾಲೋನಿಯಲ್ಲಿ ಎಸೆದಿದ್ದಾನೆ. ನಂತರ ಆರೋಪಿಯ ಮನೆಯ ಮಾಲೀಕನಿಗೆ ವಿಷಯ ಗೊತ್ತಾಗಿದ್ದು, ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲೆ ನಡೆದಾಗ ಪ್ರಜಾಪತಿ ಅವರ ಪತ್ನಿ ತಮ್ಮ ಮಗಳೊಂದಿಗೆ ಆಸ್ಪತ್ರೆಯಲ್ಲಿದ್ದರು. ಆಕೆ ಅಪರಾಧದಲ್ಲಿ ಭಾಗಿಯಾಗಿದ್ದಾಳೆ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ಇದೀಗ ಪ್ರಜಾಪತಿ ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ಪ್ರಕರಣದ ಕುರಿತು ಮೃತ ಕುಮಾರ್‌ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಇಂದಿರಾಪುರಂ) ಸ್ವತಂತ್ರ ಕುಮಾರ್ ಸಿಂಗ್ ವರದಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Shraddha Walker murder case: 3,000 ಪುಟಗಳ ಚಾರ್ಜ್‌ಶೀಟ್‌ ಸಿದ್ದಪಡಿಸಿದ ದೆಹಲಿ ಪೊಲೀಸರು

ಇದನ್ನೂ ಓದಿ : Consumption of pesticides: ಕೀಟನಾಶಕ ಬೆರೆಸಿ ಮದ್ಯ ಸೇವನೆ : ಇಬ್ಬರ ಸಾವು

ಇದೀಗ ಆರೋಪಿ ಪ್ರಜಾಪತಿಯನ್ನು ಬಂಧಿಸಲಾಗಿದ್ದು, ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Murder case- body cut into pieces: Murder of wife’s lover: Husband cut the body into 15 pieces and threw it in the colony

Comments are closed.