Kantara Movie Review : ಕರಾವಳಿ ಸೊಗಡಿನಲ್ಲಿ ಮೂಡಿ ಬಂದ ರಿಷಬ್ ಶೆಟ್ಟಿ (Rishab Shetty) ಅಭಿನಯದ “ಕಾಂತಾರ” ಸಿನಿಮಾ ಇಂದು ರಾಜ್ಯದಾದ್ಯಂತ ತೆರೆಕಂಡಿದೆ. ಸಿನಿಮಾ ಸಿನಿಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಮೊದಲ ದಿನ ಪ್ರದರ್ಶನದಲ್ಲೇ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಆಗಿದೆ. ಸಿನಿಮಾವನ್ನು ವೀಕ್ಷಣೆ ಮಾಡಿದ ಹಲವಾರು ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾದ ಬಗ್ಗೆ ಸಿನಿಮಾ ವೀಕ್ಷಣೆ ಮಾಡಿದ ಸಿನಿಪ್ರೇಕ್ಷಕರು ಅಲ್ಟಿಮೇಟ್, ಸೂಪರ್ ಹಾಗೂ ಬೆಂಕಿ ಫಿಲ್ಮ್ ಎನ್ನುವಂತಹ ಕಮೆಂಟ್‌ಗಳನ್ನು ನೀಡಿದ್ದಾರೆ.
ಈಗಾಗಲೇ ಈ ಸಿನಿಮಾದ ಬಗ್ಗೆ ವಿಮರ್ಶಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕರಾವಳಿಯಲ್ಲಿ ಹುಟ್ಟಿ ಬೆಳೆದಿರುವ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಕರಾವಳಿಗರ ಆಚಾರ, ವಿಚಾರ, ಸಂಸ್ಕೃತಿ ಎಲ್ಲವೂ ಗೊತ್ತಿದೆ. ಹೀಗಾಗಿಯೇ ಕರಾವಳಿಗರ ವಿಷಯವನ್ನೇ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ದೈವಾರಾಧನೆಯ ಭಾಗವಾದ ಕೋಲದ ಆಚರಣೆಯನ್ನೇ ಪ್ರಮುಖವಾಗಿ ಇಟ್ಟುಕೊಂಡು ಸಂಘರ್ಷಣೆಯ ಉತ್ತಮ ಕಥೆಯನ್ನು ಬರೆದಿದ್ದಾರೆ. ರಿಷಬ್ ಶೆಟ್ಟಿ ಅವರ ಕಥೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಒಂದು ಊರಿನ ಜನ ಕಾಡಿನ ಜೊತೆ ಬೆರೆತುಕೊಂಡು ಅಲ್ಲಿನ ಸಂಪ್ರದಾಯ, ಆಚಾರ – ವಿಚಾರಗಳಿಂದ ಕಾಡಿಗೆ ತೊಂದರೆ ಆಗುತ್ತದೆ ಎಂದು ಹೇಳುವ ಫಾರೆಸ್ಟ್ ಆಫೀಸರ್. ಹಾಗೆ ಆ ಊರಿನ ಜನರ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ಕಾದು ಕುಳಿತ್ತಿರುವ ಜಮೀನ್ದಾರ. ಇವರುಗಳ ನಡುವೆ ನಡೆಯುವ ಸಂಘರ್ಷವು ಅಂತಿಮವಾಗಿ ಯಾವ ಹಂತವನ್ನು ತಲುಪುತ್ತದೆ ಎನ್ನುವುದು “ಕಾಂತರ”ದ ಚಿತ್ರಕಥೆ. ಹಾಗೆ ಈ ಸಿನಿಮಾದಲ್ಲಿ ನಂಬಿಕೆ-ಅಪನಂಬಿಕೆ, ಒಳಿತು-ಕೆಡುಕು ಹಾಗೂ ಬಡವ-ಶ್ರೀಮಂತನ ನಡುವಿನ ಘರ್ಷಣೆಯೂ ಕಾಣಬಹುದಾಗಿದೆ.
ರಿಷಬ್ ಶೆಟ್ಟಿಯವರು ಸಿನಿಮಾದಲ್ಲಿ ಶಿವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ವಿಭಿನ್ನ ವ್ಯಕ್ತಿತ್ವದ ಮೂಲಕ ರಿಷಬ್‌ರವರು ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಈ ಸಿನಿಮಾದಲ್ಲಿ ರೊಮ್ಯಾನ್ಸ್, ಕಾಮಿಡಿ ಹಾಗೂ ಫೈಟಿಂಗ್ ಎಲ್ಲಾ ಸೀನ್‌ಗಳನ್ನು ಒಳಗೊಂಡಿದೆ. ಇನ್ನೂ ಈ ಚಿತ್ರದಲ್ಲಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಕಿಶೋರ್ ಸೇರಿದಂತೆ ಬಹು ತಾರಾಗಣವಿದೆ. ಎಲ್ಲರೂ ತಮ್ಮ ಅದ್ಭುತ ನಟನೆಯಿಂದ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾವು “ಹೊಂಬಾಳೆ ಫಿಲ್ಮ್ಸ್” ರವರಿಂದ ನಿರ್ಮಾಣಗೊಂಡಿದೆ. ಅರವಿಂದ್ ಕಶ್ಯಪ್ ಉತ್ತಮ ಛಾಯಾಗ್ರಹಣದ ಮೂಲಕ ಚಿತ್ರದ ಪ್ರತಿಯೊಂದು ದೃಶ್ಯವೂ ಚೆನ್ನಾಗಿ ಮೂಡಿಬಂದಿದೆ. ಇನ್ನೂ ಅಜನೀಶ್ ಬಿ. ಲೋಕನಾಥ್ ರವರ ಹಿನ್ನಲೆ ಸಂಗೀತದಿಂದ ಚಿತ್ರದ ಎಲ್ಲಾ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ.
ಇದನ್ನೂ ಓದಿ : Ponniyin Selvan : ಸಿನಿಮಾ ರಿಲೀಸ್ ಆದ್ರೆ ದಾಳಿ ಖಚಿತ: ಪೊನ್ನಿಯಿನ್ ಸೆಲ್ವನ್ ಗೆ ಬೆದರಿಕೆ ಮೇಲ್
ಇದನ್ನೂ ಓದಿ : Deepika Padukone : ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು : ಪ್ಯಾನ್ಸ್‌ಗಳ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್
Kantara Movie Review Rishab Shetty Sapthami Kishore acting Hombale Movies