CM Ibrahim :‘ಹಾಳೂರಿಗೆ ಉಳಿದೋನೇ ಗೌಡ’:ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಗ್ಗೆ ಸಿಎಂ ಇಬ್ರಾಹಿಂ ವ್ಯಂಗ್ಯ

ರಾಯಚೂರು : CM Ibrahim : ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವ ವಿಚಾರದ ಬಗ್ಗೆ ಗೇಲಿ ಮಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಳೂರಿಗೆ ಉಳಿದೋನೇ ಗೌಡ ಎಂದು ಕಾಲೆಳೆದಿದ್ದಾರೆ. ರಾಯಚೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ನಲ್ಲಿ ಈಗ ಯಾರೂ ಹಿರಿಯ ನಾಯಕರಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆಯನ್ನು ಗಣನೆಗೆ ತೆಗೆದುಕೊಳ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಪಿಎಫ್​ಐ ಮುಂದಿನ ಐದು ವರ್ಷಗಳ ಕಾಲ ಬ್ಯಾನ್ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಪಿಎಫ್​ಐಗೆ ಐದು ವರ್ಷಗಳ ಕಾಲ ಡಿವೋರ್ಸ್ ನೀಡಿದ್ದಾರೆ. ಐದು ವರ್ಷ ಆದಮೇಲೆ ಏನು ಮಾಡುತ್ತಾರೆ..? ಇವ್ರೇನು ಸರ್ಕಾರ ನಡೆಸ್ತಾರಾ..? ಪಿಎಫ್​ಐ ಮೇಲೆ ದೊಡ್ಡ ಆರೋಪ ಇದ್ದರೆ ಕಾನೂನಿನ ಅಡಿಯಲ್ಲಿ ಅವರನ್ನು ಗಲ್ಲಿಗೇರಿಸಲಿ. ಬ್ಯಾನ್​ ಮಾಡೋದಕ್ಕೆ ಕಾರಣ ಬೇರೆನೇ ಇದೆ. ಅದು ಏನೆಂದು ನಮಗೆ ತಿಳಿಸಿ ಎಂದು ಆಗ್ರಹಿಸಿದ್ದಾರೆ .

ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿತ್ತು. ಆದರೆ ಬಿಜೆಪಿಯವರಿಗೆ ಅಧಿಕಾರದ ಮದ ಏರಿದೆ. ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇತ್ತ ಇದನ್ನೆಲ್ಲ ವಿರೋಧಿಸೋಕೆ ಸರಿಯಾದ ವಿರೋಧ ಪಕ್ಷ ಕೂಡ ಇಲ್ಲ.ರಾಹುಲ್​ ಗಾಂಧಿ ಇನ್ನೂ ಎಳಸು. ಇದೇ ಕಾರಣಕ್ಕೆ ಕೆಸಿಆರ್​, ಎನ್​ಟಿಆರ್​, ಲಾಲೂ, ನಿತೀಶ್​ ಕುಮಾರ್​ ಸೇರಿ 2024ಕ್ಕೆ ಒಂದು ಪ್ಲಾನ್​ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಕ್ಕಾಗಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ದೊಡ್ಡ ಮಟ್ಟದ ಪೈಪೋಟಿ ನಡೀತಾ ಇದೆ. ಆದರೆ ನಾವು ಈ ಎರಡೂ ಪಕ್ಷಗಳಿಗಿಂತ ಭಿನ್ನವಾಗಿದ್ದೇವೆ. ಪಂಚರತ್ನ ಜಾರಿಗೆ ತರ್ತೇವೆ, ಈಗ ರಾಜ್ಯದ ಜನರ ಮುಂದೆ ಇಟ್ಟಿದ್ದೇವೆ. ಭಯ ಮುಕ್ತ ಹಾಗೂ ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸುವ ಸಂಕಲ್ಪವನ್ನು ನಾವು ಮಾಡಿದ್ದೇವೆ. ಒಂದು ವೇಳೆ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಹೋದಲ್ಲಿ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದು ಸಿಎಂ ಇಬ್ರಾಹಿಂ ವಾಗ್ದಾನ ನೀಡಿದ್ದಾರೆ.

ನಮ್ಮಲ್ಲಿ ಯಾವುದೇ ಹೈಕಮಾಂಡ್​ ಇಲ್ಲ, ಹೀಗಾಗಿ ಬಿಜೆಪಿ ಕಾಂಗ್ರೆಸ್​ನಲ್ಲಿ ತೋರಿಸುವಂತಹ ತಮಾಷೆ ನಮ್ಮಲ್ಲಿ ನಡೆಯೋದಿಲ್ಲ. ಕಾಂಗ್ರೆಸ್​ನವರು ಭಾರತ್​ ಜೋಡೋ ಯಾತ್ರೆ ಅಲ್ಲ ಮೊದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಲಿ. ಇವರಿಗೆ ಕಾಂಗ್ರೆಸ್​ ಅಧ್ಯಕ್ಷನನ್ನು ಆಯ್ಕೆ ಮಾಡೋಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ : Shobha Karandlaje:ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್​​ನಿಂದ ಆರ್​ಎಸ್​ಎಸ್​ ಬ್ಯಾನ್​ ಹೇಳಿಕೆ : ಶೋಭಾ ಕರಂದ್ಲಾಜೆ ಗುಡುಗು

ಇದನ್ನೂ ಓದಿ : CM Bommai hits back : ‘ಆರ್​ಎಸ್​ಎಸ್​ ಬ್ಯಾನ್​ ಮಾಡಿ ಎನ್ನುವವರು ಮೂರ್ಖರು’ : ಸಿಎಂ ಬೊಮ್ಮಾಯಿ ತಿರುಗೇಟು

CM Ibrahim sarcastic about contesting for Kharge AICC president post

Comments are closed.