ಮಂಗಳೂರು ಕಡಲ ಕಿನಾರೆಯಲ್ಲಿ ಅರಳಿದ ಕಾಂತಾರ ಮರಳು ಶಿಲ್ಪ

ನಟ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕರಾವಳಿ ಸಂಸ್ಕೃತಿ, ದೈವಕೋಲ ಇವುಗಳನ್ನು ಆಧರಿಸಿ ನಿರ್ಮಿಸಿದ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪ್ರೇಕ್ಷಕರ ಗಮನ ಸೆಳೆದಿತ್ತು.ಸ್ಯಾಂಡಲ್‌ವುಡ್‌ಗೆ ಹೊಸ ಇಮೇಜ್ ಕೊಟ್ಟ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿಯ ‘ಕಾಂತಾರ’ ಕೂಡ ಒಂದು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಕೊಳ್ಳೆ ಹೊಡೆದಿತ್ತು. ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ಸಿನಿಮಂದಿರಗಳಲ್ಲಿ, ಒಟಿಟಿಯಲ್ಲಿ ಮಾತ್ರವಲ್ಲದೇ ಭಾನುವಾರ (ಜನವರಿ 15)ರಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಬರಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಮಂಗಳೂರಿನ ಕಲಾವಿದರು ಮರಳಿನಲ್ಲಿ ಕಾಂತಾರದ ಸ್ಯಾಂಡ್‌ ಆರ್ಟ್‌ (Kantara Sand Art) ರಚನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯ ‘ಕಾಂತಾರ’ ಸಿನಿಮಾಗೆ 100 ದಿನಗಳ ಸಂಭ್ರಮ. ಇದೇ ಬೆನ್ನಲ್ಲೇ ಸಂಕ್ರಾಂತಿ ಹಬ್ಬದಂದು ಕಿರುತೆರೆಯಲ್ಲೂ ಪ್ರಸಾರ ಆಗುತ್ತಿದೆ. ಸ್ಟಾರ್ ಸುವರ್ಣದಲ್ಲಿ ರಿಷಬ್ ಶೆಟ್ಟಿಯ ಕಾಂತಾರ ರಿಲೀಸ್ ಆಗುತ್ತಿದ್ದು, ಇದಕ್ಕಾಗಿ ಮಂಗಳೂರಿನ ಕಲಾವಿದರು ‘ಕಾಂತಾರ’ದ ಸ್ಯಾಂಡ್‌ ಆರ್ಟ್ ಮಾಡಿದ್ದಾರೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ‘ಕಾಂತಾರ’ ಸಾಕಷ್ಟು ಸದ್ದು ಮಾಡಿದೆ. ಇದೀಗ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರ ಆಗುತ್ತಿದೆ. ಕನ್ನಡದ ಜನಪ್ರಿಯ ಮನರಂಜನೆ ವಾಹಿನಿ ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ 6 ಗಂಟೆಗೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗುತ್ತಿದೆ.

‘ಕಾಂತಾರ’ ಇದೀಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಸ್ಯಾಂಡ್ ಆರ್ಟ್ ಕಲಾವಿದರು ಮರುಳಿನಲ್ಲಿ ಕೃತಿ ರಚಿಸಿದ್ದಾರೆ. ಮಂಗಳೂರಿನ ಕಲಾವಿದ ಹರೀಶ್ ಆಚಾರ್ಯ ಮರಳಿನಲ್ಲಿ ಶಿಲ್ಪ ಕೃತಿಯನ್ನು ರಚಿಸಿದ್ದಾರೆ. ಮಂಗಳೂರಿನ ತಣ್ಣೀರುಬಾವಿಯ ಕಡಲ ತೀರದ ಮರಳುರಾಶಿಯಲ್ಲಿ ‘ಕಾಂತಾರ’ ಕೃತಿ ಮೂಡಿಬಂದಿದೆ. ಕಿರುತೆರೆಯಲ್ಲಿ ಸಿನಿಮಾ ಪ್ರಸಾರ ಆಗುತ್ತಿರುವ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವುದರಿಂದ ಮೂಡಿದ ಈ ಕಲಾಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ : ಪ್ರೀತಿಸಿದ ಹುಡುಗನ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಜನಿ

ಇದನ್ನೂ ಓದಿ : ಕ್ರಾಂತಿ ಸಿನಿಮಾದ ನಾಲ್ಕನೇ ಹಾಡು ರಿಲೀಸ್‌ : ವೈರಲ್‌ ಆಯ್ತು ಮಾಸ್‌ ಸಾಂಗ್‌

ಇದನ್ನೂ ಓದಿ : ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆ : ಸಾಮಾಜಿಕ ಜಾಲತಾಣಗಳಲ್ಲಿ ನಟ ಅನಿರುದ್ದ ಹೀಗಂದಿದ್ಯಾಕೆ?

ಇದೇ ಮೊದಲ ಬಾರಿಗೆ ಕಿರುತೆರೆಯ ಇತಿಹಾಸದಲ್ಲಿ ಕನ್ನಡ ಸಿನಿಮಾವೊಂದು ಈ ಮಟ್ಟಿಗೆ ಪ್ರಚಾರ ಪಡೆದುಕೊಂಡಿದೆ. ಒಂದು ದಿನಪೂರ್ತಿ ಕಷ್ಟ ಪಟ್ಟು ಈ ಕಲಾಕೃತಿಯನ್ನು ರಚಿಸಲಾಗಿದೆ. ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಚಿತ್ರಣ ಮೂಡಿಬಂದಿದೆ. ಸ್ಟಾರ್ ಸುವರ್ಣದಲ್ಲಿ ‘ಕಾಂತಾರ’ ಪ್ರಸಾರವಾಗುತ್ತಿರುವುದರಿಂದ ವಾಹಿನಿಗೆ ಕಲಾವಿದರು ಬರಹದ ಮೂಲಕ ಶುಭ ಕೋರಿದ್ದಾರೆ. ದೇಶದಾದ್ಯಂತ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ’ ಸಿನಿಮಾವು ಕಿರುತೆರೆಯಲ್ಲೂ ಹೊಸ ಛಾಪು ಮೂಡಿಸಲಿ ಎಂದು ತಿಳಿಸಿದ್ದಾರೆ. ಕನ್ನಡ ಕಿರುತೆಯಲ್ಲಿ ಪ್ರಪ್ರಥಮ ಬಾರಿಗೆ ‘ಕಾಂತಾರ’ ಸಿನಿಮಾವು ಇಂದು ಸಂಜೆ 6 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Kantara Sand Art: Kantara sand sculpture blossomed on Mangalore seashore

Comments are closed.