Kareena Kapoors : ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ಒಂದಿಲ್ಲೊಂದು ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಎರಡು ಗಂಡು ಮಕ್ಕಳ ತಾಯಿಯಾಗಿರುವ ನಟಿ ಕರೀನಾ ಕಪೂರ್ ಮೂರನೇ ಬಾರಿಗೆ ಗರ್ಭಧರಿಸಿದ್ದಾರಾ ಎಂಬ ವದಂತಿಯು ಬಿ ಟೌನ್ನಲ್ಲಿ ಹರಿದಾಡ್ತಿದೆ. ಈ ವಿಚಾರವಾಗಿ ಇನ್ಸ್ಟಾಗ್ರಾಂನಲ್ಲಿ ಸಖತ್ ಫನ್ನಿಯಾಗಿ ಸ್ಪಷ್ಟನೆ ನೀಡಿರುವ ನಟಿ ಕರೀನಾ ಕಪೂರ್ ಸೈಫ್ ಅಲಿ ಖಾನ್ ಈಗಾಗಲೇ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಪತಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ವೆಕೇಷನ್ನಲ್ಲಿರುವ ನಟಿ ಕರೀನಾ ಕಪೂರ್ರ ಫೋಟೋವೊಂದು ವೈರಲ್ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕರೀನಾ ಗರ್ಭಿಣಿಯಾಗಿದ್ದಾರಾ ಎಂಬ ಚರ್ಚೆಯೊಂದು ಆರಂಭವಾಗಿತ್ತು. ಕರೀನಾ ಹೊಟ್ಟೆ ದೊಡ್ಡದಾಗಿ ಕಾಣುತ್ತಿದ್ದರಿಂದ ಇಂತಹದ್ದೊಂದು ಅನುಮಾನ ಎಲ್ಲರಲ್ಲೂ ಮೂಡಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ ಕರೀನಾ ಕಪೂರ್ ವೆಕೇಷನ್ನಲ್ಲಿ ತಾನು ತಿಂದ ಎಲ್ಲಾ ಪಾಸ್ತಾ ಹಾಗೂ ವೈನ್ನಿಂದಾಗಿ ಈ ರೀತಿ ಹೊಟ್ಟೆ ಬಂದಿದೆ ಎಂದು ಹೇಳಿದ್ದಾರೆ.
ಇದು ಪಾಸ್ತಾ ಹಾಗೂ ವೈನ್ ಗೆಳೆಯರೇ.. ಶಾಂತರಾಗಿ..ನಾನು ಗರ್ಭಿಣಿಯಲ್ಲ. ಸೈಫ್ ಈಗಾಗಲೇ ದೇಶದ ಜನಸಂಖ್ಯೆಗೆ ಹೆಚ್ಚಿನ ಕೊಡುಗೆಯನ್ನೇ ನೀಡಿದ್ದಾರೆ. ಎಂಜಾಯ್ ಎಂದು ಕರೀನಾ ಕಪೂರ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಕರೀನಾ ಸೈಫ್ ಅಲಿ ಖಾನ್ ಪ್ರತಿ ದಶಕದಲ್ಲಿ ಒಂದೊಂದು ಮಗುವಿಗೆ ತಂದೆಯಾಗಿದ್ದಾರೆ ಎಂದು ತಮಾಷೆ ಮಾಡಿದ್ದರು. ಇಪತ್ತು, ಮೂವತ್ತು, ನಲವತ್ತು ಹಾಗೂ ಈಗ ಐವತ್ತರ ವಯಸ್ಸಿನಲ್ಲಿಯೂ ಅವರು ತಂದೆಯಾಗಿದ್ದಾರೆ. ಹೀಗಾಗಿ ಅರವತ್ತನೇ ದಶಕದಲ್ಲಿ ಇದು ಸಾಧ್ಯವಿಲ್ಲ ಎಂದು ನಾನು ಈಗಾಗಲೇ ಸೈಫ್ಗೆ ಹೇಳಿದ್ದೇನೆ ಎಂದು ಗೇಲಿ ಮಾಡಿದ್ದರು.
ತಮ್ಮ ಪುತ್ರರಾದ ತೈಮೂರ್ ಹಾಗೂ ಜೇಹ್ ಜೊತೆಯಲ್ಲಿ ಸಧ್ಯ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ದಂಪತಿ ಯುರೋಪ್ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಯುರೋಪ್ಗೂ ಮುನ್ನ ಅವರು ಲಂಡನ್ನಲ್ಲಿ ಜಾಲಿ ಮಾಡಿದ್ದರು. ತಮ್ಮ ವೆಕೇಷನ್ ಬಗ್ಗೆ ಕರೀನಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ಸ್ ನೀಡುತ್ತಲೇ ಇದ್ದಾರೆ.
ವೃತ್ತಿ ಜೀವನದ ವಿಚಾರವಾಗಿ ಮಾತನಾಡುವುದಾದರೆ ಕರೀನಾ ಕಪೂರ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು ಫಾರಸ್ಟ್ ಗಂಪ್ ಸಿನಿಮಾದ ರಿ ಮೇಕ್ ಆಗಿದೆ.
ಇದನ್ನು ಓದಿ : Sunil Shetty Praises Hardik Pandya : ಕಂಬ್ಯಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯನನ್ನು ಹೊಗಳಿದ ಕೆ.ಎಲ್ ರಾಹುಲ್ ಭಾವೀ ಮಾವ
ಇದನ್ನೂ ಓದಿ : kambala srinivasa gowda : ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್ ದೂರು
Kareena Kapoors hilarious clap back at pregnancy rumors