ಪುನೀತ್ ರಾಜ್ ಕುಮಾರ್ (Puneeth )ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಎಂದುಕೊಂಡಿದ್ದವರಿಗೆ ಅವರು ಬರಿ ನಟ ಮಾತ್ರವಲ್ಲ ರಿಯಲ್ ಲೈಫ್ ಹೀರೋ ಎಂದು ಅರಿವಾಗಿದ್ದೇ ಅಪ್ಪು ನಿಧನದ ಬಳಿಕ. ಬಗೆ ದಷ್ಟು ಪುನೀತ್ ಸತ್ಕಾರ್ಯಗಳು ಬಯಲಾಗುತ್ತಲೇ ಇದ್ದು, ಸಮಾಧಿಗೆ ಭೇಟಿ ನೀಡಿದ್ದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ( DK Ravi) ತಾಯಿ ಅಪರೂಪದ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.
ಡಿ.ಕೆ.ರವಿ ಈ ನಾಡು ಕಂಡ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಆದರೆ ಅದ್ಯಾವುದೋ ಒತ್ತಡಕ್ಕೆ ಬಲಿಯಾದ ಡಿ.ಕೆ.ರವಿ ಆತ್ಮಹತ್ಯೆಗೆ ಶರಣಾಗಿದ್ದು ಬಳಿಕ ಅವರ ಕೇಸ್ ಸಿಬಿಐಗೆ ಹಸ್ತಾಂತರವಾಗಿದ್ದು ಸಿಬಿಐ ಕೂಡ ಅವರದ್ದು ಕೊಲೆಯಲ್ಲ ಆತ್ಮಹತ್ಯೆ ಎಂದು ಷರಾ ಬರೆದಿದೆ. ಇದೆಲ್ಲವೂ ಈಗ ಇತಿಹಾಸ. ಆದರೆ ಇದ್ದಷ್ಟು ದಿನ ಡಿ.ಕೆ.ರವಿ ಹುಲಿಯಂತೆ ಬದುಕಿ, ದಕ್ಷತೆಯಿಂದಲೇ ಹೆಸರು ಗಳಿಸಿದ್ದರು. ಇಂಥ ಕೋಲಾರದ ಹೆಮ್ಮೆಯ ಅಧಿಕಾರಿ ಜೊತೆ ನಟ ಪುನೀತ್ ರಾಜ್ ಕುಮಾರ್ ಅನೋನ್ಯ ಬಂಧ ಹೊಂದಿದ್ದರಂತೆ.
ಈ ಬಗ್ಗೆ ಪುನೀತ್ ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದ ಡಿ.ಕೆ.ರವಿ ತಾಯಿ ಗೌರಮ್ಮ ಹಲವು ವಿಚಾರ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಡಿ.ಕೆ.ರವಿ ನಿಧನದ ಬಳಿಕ ಗೌರಮ್ಮ ಹಾಗೂ ಅವರ ಪತಿಯನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಭೇಟಿ ಮಾಡಿದ್ದರಂತೆ. ಅಷ್ಟೇ ಅಲ್ಲ 50 ಸಾವಿರ ರೂಪಾಯಿ ಚೆಕ್ ಕೂಡ ನೀಡಿದ್ದರಂತೆ.
ಡಿ.ಕೆ.ರವಿ ನಿಧನ ಕ್ಕೆ ಸಂತಾಪ ವ್ಯಕ್ತಪಡಿಸಿದ್ದ ಪುನೀತ್ ರಾಜ್ ಕುಮಾರ್, ನೊಂದು ಕೊಳ್ಳಬೇಡಿ. ನಾವು ನಿಮ್ಮನ್ನು ತಂದೆ ತಾಯಿಯಂತೆ ನೋಡುತ್ತೇವೆ. ಏನೇ ಕಷ್ಟ ಇದ್ದರೂ ನಮ್ಮ ಬಳಿ ಹೇಳಿಕೊಳ್ಳಿ. ನಾನು ನಿಮ್ಮ ಜೊತೆಗಿದ್ದೇನೆ ಎಂದು ಸಮಾಧಾನಿಸಿದ್ದರಂತೆ. ಅಷ್ಟೇ ಅಲ್ಲ ಡಿ.ಕೆ.ರವಿ ಬದುಕಿದ್ದಾಗಲೂ ಪುನೀತ್ ಮತ್ತು ಡಿ.ಕೆ.ರವಿ ನಡುವೆ ಉತ್ತಮವಾದ ಸ್ನೇಹವಿತ್ತಂತೆ. ಪುನೀತ್ ರಾಜ್ ಕುಮಾರ್ ಪ್ರಥ್ವಿ ಸಿನಿಮಾದಲ್ಲಿ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸಿದ್ದರು.
ಈ ಸಿನಿಮಾಗೂ ಮುನ್ನ ಕೋಲಾರದಲ್ಲಿದ್ದ ಡಿ.ಕೆ.ರವಿಯನ್ನು ಭೇಟಿ ಮಾಡಿದ್ದ ಪುನೀತ್ ರಾಜ್ ಕುಮಾರ್ ಅವರ ಬಳಿ ಜಿಲ್ಲಾಧಿಕಾರಿ ಪಾತ್ರ ನಿರ್ವಹಣೆ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರಂತೆ. ಈ ವಿಚಾರವನ್ನು ಸ್ವತಃ ಡಿ.ಕೆ.ರವಿ ತಮ್ಮ ತಾಯಿ ಬಳಿ ಹೇಳಿಕೊಂಡಿದ್ದಲ್ಲದೇ ಪುನೀತ್ ಸರಳತೆಯನ್ನು ಕೊಂಡಾಡಿದ್ದರಂತೆ. ಪುನೀತ್ ನಿಧನದ ವೇಳೆ ಅನಾರೋಗ್ಯಕ್ಕಿಡಾಗಿದ್ದ ಡಿ.ಕೆ.ರವಿ ತಾಯಿ ಗೌರಮ್ಮ ಚೇತರಿಸಿಕೊಂಡ ಬಳಿಕ ಪುನೀತ್ ಸಮಾಧಿಗೆ ಭೇಟಿ ನೀಡಿದ್ದು ಮಾಧ್ಯಮಗಳ ಬಳಿ ಪುನೀತ್ ಸಹಾಯ ನೀಡಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ : ತಂದೆಯ ಪಕ್ಕ ಪುತ್ರ ಅಮರ: ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ
ಇದನ್ನೂ ಓದಿ : ನನಸಾಗಲಿದೆ ಪುನೀತ್ ಕನಸು : ಅಶ್ವಿನಿ ಮಹತ್ವದ ಘೋಷಣೆ
( Puneeth Raj Kumar helps DK Ravi family’s help )