ಸೋಮವಾರ, ಏಪ್ರಿಲ್ 28, 2025
HomeCinemaPuneeth Karnataka Rathna :ಪುನೀತ್‌ ರಾಜ್‌ ಕುಮಾರ್‌ಗೆ ಕರ್ನಾಟಕ ರತ್ನ : ಸಿಎಂ ಬಸವರಾಜ್‌ ಬೊಮ್ಮಾಯಿ...

Puneeth Karnataka Rathna :ಪುನೀತ್‌ ರಾಜ್‌ ಕುಮಾರ್‌ಗೆ ಕರ್ನಾಟಕ ರತ್ನ : ಸಿಎಂ ಬಸವರಾಜ್‌ ಬೊಮ್ಮಾಯಿ ಘೋಷಣೆ

- Advertisement -

ಬೆಂಗಳೂರು : ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ರಾಜ್‌ ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ ಕುಮಾರ್‌ ಅವರಂತೆಯೇ ಅವರ ಅಂತಿಮ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಅಲ್ಲದೇ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುನೀತ್‌ ನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬಸವರಾಜ್‌ ಬೊಮ್ಮಾಯಿ ಅವರು, ಪುನೀತ್‌ ರಾಜ್‌ ಕುಮಾರ್‌ ಕುರಿತು ಕರ್ನಾಟಕದ ಜನತೆಯಿಂದ ಸಾಕಷ್ಟು ಮನವಿಗಳು ಬರುತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಮುತ್ತುರಾಜನ ಮಗ, ಯುವರತ್ನನಿಗೆ ಕರ್ನಾಟಕ ರತ್ನ ನೀಡಲು ನನಗೆ ಹೆಮ್ಮೆಯಿದೆ. ಸೂರ್ಯ ಚಂದ್ರ ಇರುವವರೆಗೆ ಪುನೀತ್‌ ರಾಜ್‌ ಕುಮಾರ್‌ ಚಿರಸ್ಥಾಯಿಯಾಗಿ ಇರುತ್ತಾರೆ. ರಾಜ್‌ ಕುಟುಂಬ ನಮ್ಮ ಹೃದಯದಲ್ಲಿ ಇರುತ್ತಾರೆ ಎಂದಿದ್ದಾರೆ ಬಸವರಾಜ್‌ ಬೊಮ್ಮಾಯಿ.

ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇವೆ ಅಂತಾ ಅಂದುಕೊಂಡಿರಲಿಲ್ಲ. ಯುವ ನಟ, ಬಹಳ ದೊಡ್ಡ ಬದುಕು ಅವನ ಮುಂದೆ ಇತ್ತು. ಸಾಧನೆಯ ಪರ್ವತವನ್ನು ಏರುವಂತೆ ಎಲ್ಲಾ ಚಲ ಮತ್ತು ಬಲ ಇದ್ದಂತಹ, ಆ ಯುವ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮೀಯ, ಅವನನ್ನು ಬಾಲ್ಯದಿಂದಲೇ ನಾನು ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆಯನ್ನು ಹೊಂದಿದಂತವರು. ಕರ್ನಾಟಕದ ಇತಿಹಾಸದಲ್ಲಿ ಬಾಲ ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಪುನೀತ್‌ ರಾಜ್‌ ಕುಮಾರ್.‌ ನಾನು ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಅವರ ತಂದೆ ಕರುನಾಡ ಕಂಡ ಶ್ರೇಷ್ಠ ನಟ ರಾಜ್‌ ಕುಮಾರ್ ಅವರ ಜೊತೆಗೆ ನಟನೆ ಮಾಡುವಾಗ, ಹಿರಿಯ ನಟರ ನಡುವೆ ಆ ನಟನೆಯ, ಆ ಪಾತ್ರದ ಅನುಗುಣವಾಗಿ ಸಂಬಂಧ ಬಿಟ್ಟು ರಾಜ್‌ ಕುಮಾರ್‌ ಅವರೊಂದಿಗೆ ಅದ್ಬುತವಾಗಿ ನಟಿಸುತ್ತಿದ್ದರು. ಅಷ್ಟ ಸಣ್ಣ ವಯಸ್ಸಿನಲ್ಲಿಯೇ ಅಮೋಘ ಸಾಧನೆಯನ್ನುಮಾಡಿದ್ದರು ಎಂದು ಅಪ್ಪು ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ : Puneeth Rajkumar : ಸಾವಿನಲ್ಲೂ ಪುನೀತ್ ಅಜರಾಮರ : ಇದಕ್ಕೆ ಸಾಕ್ಷಿ ಬೊಂಬೆ ಹೇಳುತೈತೆ ಸಾಂಗ್

ಇದನ್ನೂ ಓದಿ : ಸಾವಿನಲ್ಲೂ ಪುನೀತ್ ಅಜರಾಮರ : ಇದಕ್ಕೆ ಸಾಕ್ಷಿ ಬೊಂಬೆ ಹೇಳುತೈತೆ ಸಾಂಗ್

(CM Basavaraj Bommai Announces Karnataka Ratna for Puneet Raj Kumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular