Puneeth Day : ಅಪ್ಪು ದಿನಾಚರಣೆ ಘೋಷಣೆ ಮಾಡಿ : ಸಿಎಂ ಬೊಮ್ಮಾಯಿಗೆ ಇಂದ್ರಜಿತ್‌ ಮನವಿ

ಬೆಂಗಳೂರು : ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಕೇವಲ ಸಿನಿಮಾ ನಟನಾಗಿ ಮಾತ್ರವಲ್ಲ ಸಮಾಜ ಸೇವೆಗೆ ಅವರು ಕೊಟ್ಟ ಸೇವೆ ಸ್ಮರಣೀಯ. ಹೀಗಾಗಿ ರಾಜ್ಯದಲ್ಲಿ ಅಪ್ಪು ದಿನಾಚರಣೆಯನ್ನು (Puneeth Day) ಆರಂಭಿಸುವ ಮೂಲಕ ಯುವ ಜನತೆಗೆ ಮುಖ್ಯಮಂತ್ರಿಗಳ ನಿಧಿಯಿಂದ ಸ್ಕಾಲರ್‌ಶಿಪ್‌ ನೀಡುವ ಕಾರ್ಯವನ್ನು ಮಾಡಬೇಕು ಈ ಮೂಲಕ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಗೌರವ ಸಲ್ಲಿಸಬೇಕು ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಮನವಿ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ನಗರಿಯಲ್ಲಿ ನಡೆಯುತ್ತಿರುವ ಪುನೀತ್‌ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಅವರು ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಹಲವರ ಕಣ್ಣು ತೆರೆಯಿಸಿದೆ. ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಏನೂ ಬೇಡ. ಅವರು ಎಲ್ಲವನ್ನೂ ಜನರಿಗೆ ಕೊಟ್ಟಿದ್ದಾರೆ. ಆದರೆ ಅವರ ಕಾರ್ಯವನ್ನು ಸದಾ ನೆನಪಿನಲ್ಲಿಡುವ ಸಲುವಾಗಿ ಅಪ್ಪು ದಿನಾಚರಣೆ ಘೋಷಣೆಯಾಗಬೇಕು ಎಂದಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾದ ದಿನದಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಅಪಾರವಾದ ಗೌರವವನ್ನು ಸಲ್ಲಿಸಿದ್ದಾರೆ. ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಕೂಡ, ಎಲ್ಲವೂ ಶಾಂತಿಯುತವಾಗಿಯೇ ನಡೆದಿದೆ. ಇದೀಗ ಮುಖ್ಯಮಂತ್ರಿ ನಿಧಿಯಿಂದ ಅಪ್ಪು ದಿನಾಚರಣೆಗೆ ನಿಧಿಯನ್ನು ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Puneeth Eye : ಸಾವಿನಲ್ಲೂ ಸಾರ್ಥಕತೆ : 10 ಅಂಧರ ಬಾಳಿಗೆ ಬೆಳಕಾಗಲಿದೆ ಅಪ್ಪು ಕಣ್ಣು

ಇದನ್ನೂ ಓದಿ : ಸಾವಿನಲ್ಲೂ ಪುನೀತ್ ಅಜರಾಮರ : ಇದಕ್ಕೆ ಸಾಕ್ಷಿ ಬೊಂಬೆ ಹೇಳುತೈತೆ ಸಾಂಗ್

(Indrajit Lankesh appeals to CM Bommai to announce Puneeth Day )

Comments are closed.