Actor Darshan’s birthday : ನಟ ದರ್ಶನ್‌ ಬರ್ತಡೆಗೆ “D56” ಟೈಟಲ್ ರಿವೀಲ್ : ಜಬರ್ದಸ್ತ್ ಕಥೆಗೆ ಖಡಕ್ ಟೈಟಲ್ ಫಿಕ್ಸ್

ಸ್ಯಾಂಡಲ್‌ವುಡ್‌ ನಟ ದರ್ಶನ್ ಹುಟ್ಟುಹಬ್ಬದ (Actor Darshan’s birthday) ಸಂಭ್ರಮದಲ್ಲೇ ‘D56’ ಸಿನಿಮಾ ಟೈಟಲ್ ರಿವೀಲ್ ಆಗಿದೆ. 70ರ ದಶಕದ ಕಥೆಗೆ ತರುಣ್ ಸುಧೀರ್ ‘ಕಾಟೇರ’ (Kattera Movie ) ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ. ಲುಂಗಿ ಉಟ್ಟು, ಮಚ್ಚು ಹಿಡಿದು ‘ಕಾಟೇರ’ ಆಗಿ ದರ್ಶನ್ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.

ಬಹಳ ದಿನಗಳಿಂದ ‘D56’ ಸಿನಿಮಾ ಟೈಟಲ್ ಬಗ್ಗೆ ಚರ್ಚೆ ನಡೀತಿತ್ತು. ಕೆಲವರು ‘ಕಾಟೇರ’ ಅಂತ ಈ ಮೊದಲೇ ಊಹಿಸಿದ್ದರು. ಆದರೆ ಅದು ಬಿಟ್ಟು ಬೇರೆ ಟೈಟಲ್ ಫೈನಲ್ ಆಗುತ್ತಾ ಎನ್ನುವ ಅನುಮಾನ ಇತ್ತು. ಆದರೆ ಅದೇ ಟೈಟಲ್‌ಗೆ ಸಿನಿತಂಡ ಈಗ ಅಧಿಕೃತವಾಗಿ ಘೋಷಿಸಿದೆ. ಇದೀಗ ‘ಕಾಟೇರ’ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಟ ದರ್ಶನ್ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ‘D56’ ಟೈಟಲ್ ಅನೌನ್ಸ್ ಆಗಿದೆ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸುಧಾಕರ್ ಸಿನಿಮಾಟೋಗ್ರಫಿ ಸಿನಿಮಾಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ‘ಕಾಟೇರ’ ಸಿನಿಮಾಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಮಾಸ್ತಿ ಸಂಭಾಷಣೆ ಸಿನಿಮಾಕ್ಕಿದೆ. ಮೋಷನ್ ಪೋಸ್ಟರ್‌ನಲ್ಲಿ ‘ಪ್ರತಿ ಮಚ್ಚು ಎರಡು ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ’ ಎನ್ನುವ ಡೈಲಾಗ್ ಅಭಿಮಾನಿಗಳಿಗೆ ಸಖತ್‌ ಕಿಕ್ ಕೊಡುತ್ತಿದೆ. ಇದು 1974ರಲ್ಲಿ ‘ಕಾಟೇರ’ ಕಥೆ ನಡೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ : ನಟ ದರ್ಶನ್ ಮನೆ ಮುಂದೆ ಫ್ಯಾನ್ಸ್ : ಒಂದು ದಿನ ಮುನ್ನವೇ ಡಿ ಬಾಸ್‌ ಹುಟ್ಟು ಹಬ್ಬ ಸಂಭ್ರಮ!

ಇದನ್ನೂ ಓದಿ : Martin Movie Teaser : ನಟ ಧ್ರುವ ಸರ್ಜಾ, ಎಪಿ ಅರ್ಜುನ್ ಕಾಂಬಿನೇಶನ್‌ನ ‘ಮಾರ್ಟಿನ್’ ಟೀಸರ್ ಡೇಟ್‌ ಫಿಕ್ಸ್‌

ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಇದೆ : ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

‘ಕಾಟೇರ’ ಸಿನಿಮಾದಲ್ಲಿ ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. ‘ರಾಬರ್ಟ್’ ಸಿನಿಮಾದಲ್ಲಿ ನಟ ದರ್ಶನ್ ಬಹಳ ವಿಭಿನ್ನವಾಗಿ ತೋರಿಸಿ ಗೆದ್ದಿದ್ದ ತರುಣ್ ಮತ್ತೊಮ್ಮೆ ಅದೇ ಪ್ರಯತ್ನ ಮಾಡುತ್ತಿದ್ದಾರೆ. ‘ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ’ ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ತನ್ನ ಊರಿನ ಜನರಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗುತ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

Kattera Movie : “D56” Title Revealed For Actor Darshan’s Birthday: Khadak Title Fix For Jabardasth Story

Comments are closed.