ಅಂದು ಪ್ರೀತ್ಸೋದು ತಪ್ಪಾ ಸಿನಿಮಾ ಮೂಲಕ ಬಾಲಿವುಡ್ ನಟ ಶಿಲ್ಪಾ ಶೆಟ್ಟಿ (Shilpa Shetty) ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಜೋಗಿ ಸಿನಿಮಾ ಖ್ಯಾತಿಯ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘ಕೆಡಿ’ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್ ನಟ ಸಂಜಯ್ ದತ್ತ್ ನಟಿಸಲಿದ್ದಾರೆ ಎನ್ನುವುದು ಸಿನಿತಂಡ ಖಚಿತಪಡಿಸಿದ್ದಾರೆ. ಈ ಸಿನಿಮಾದ ಸ್ಟಾರ್‌ಕಾಸ್ಟ್‌ನಿಂದಲೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದು, ಇನ್ನು ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎನ್ನುವುದರ ಬಗ್ಗೆ ಕೂಡ ಕುತೂಹಲ ಹುಟ್ಟಿಸಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಟಿ ಶಿಲ್ಪಾ ಶೆಟ್ಟಿಯನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವರೊಂದಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ ಶಿಲ್ಪಾ ಶೆಟ್ಟಿ ನಂತರ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಆಟೋ ಶಂಕರ್ ಸಿನಿಮಾದಲ್ಲಿ ಕೊನೆದಾಗಿ ನಟಿಸಿದ್ದಾರೆ. ಇದೀಗ 17 ವರ್ಷಗಳ ನಂತರ ಮತ್ತೆ ಶಿಲ್ಪಾ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ. ನಟಿ ಶಿಲ್ಪಾ ಶೆಟ್ಟಿ ಬಹಳ ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡುವ ಸುಳಿವು ಸಿಕ್ಕಿದೆ.
‘ಕೆಡಿ’ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಈ ಸಿನಿಮಾ 60 ರಿಂದ 70ರ ದಶಕದ ಕಥಾಹಂದರವನ್ನು ಹೇಳಲಾಗುತ್ತದೆ ಎಂದು ಸಿನಿತಂಡ ಹೇಳಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಸಿನಿತಂಡ ಸಾಕಷ್ಟು ಶ್ರಮ ವಹಿಸುತ್ತಿದೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಕೆಡಿ’ ಸಿನಿಮಾವು ಟೈಟಲ್ ಟೀಸರ್‌ನಿಂದಲೇ ಹೊಸ ಸಂಚಲನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಸಿನಿಮಾವನ್ನು ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಸಜ್ಜು ನಡೆದಿದೆ. ಅದಕ್ಕಾಗಿ ನಿರ್ದೇಶಕ ಪ್ರೇಮ್ ಬಾಲಿವುಡ್ ಕಲಾವಿದರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ತ್ ಕೆಜಿಎಫ್ 2 ಸಿನಿಮಾದಲ್ಲಿ ಅಧೀರ ಆಗಿ ಅಬ್ಬಸಿದ್ದು, ಇದೀಗ ನಟಿಸುತ್ತಿರುವ 2ನೇ ಕನ್ನಡ ಸಿನಿಮಾವಾಗಿದೆ.
ಇದನ್ನೂ ಓದಿ : ಉರ್ಫಿ ಜಾವೇದ್ ರೀತಿ ಕಾಣಿಸಿಕೊಂಡ ಕಿರಿಕ್ ಬೆಡಗಿ : ಫೋಟೋ ಆಯ್ತು ಸಖತ್ ವೈರಲ್
ಇದನ್ನೂ ಓದಿ : ಜೋಶ್ ಅಪ್ಲಿಕೇಶನ್ ಚಾಲೆಂಜ್ ಸ್ವೀಕರಿಸಿ : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೀಟ್ ಮಾಡಿ
ಇದನ್ನೂ ಓದಿ : ಚೊಚ್ಚಲ ಸಿನಿಮಾ ನ್ಯಾನ್ಸಿ ರಾಣಿ ಬಿಡುಗಡೆಗೂ ಮೊದಲು ಮಲಯಾಳಂ ನಿರ್ದೇಶಕ ವಿಧಿವಶ
ನಿರ್ದೇಶಕ ಪ್ರೇಮ್ ತಮ್ಮ ಸಿನಿಮಾಕ್ಕಾಗಿ ಮೊದಲಿನಿಂದಲೂ ಪರಭಾಷಾ ಕಲಾವಿದರನ್ನು ಕರೆದು ತರುವುದು ಸಾಮಾನ್ಯವಾಗಿದೆ. ಈ ಹಿಂದೆ ಸಿನಿಮಾದ ಐಟಂ ಸಾಂಗ್‌ಗಾಗಿ ಬಾಲಿವುಡ್ ಸಿನಿತಾರೆಯರನ್ನು ಕರೆ ತಂದಿದ್ದಾರೆ. ಈ ಬಾರಿ ಶಿಲ್ಪಾ ಶೆಟ್ಟಿಯನ್ನು ಕರೆ ತಂದಿದ್ದು, ಯಾವುದಕ್ಕಾಗಿ ಎಂದು ಕಾದು ನೋಡಬೇಕಿದೆ. ನಟ ಧ್ರುವ ಸರ್ಜಾ ಅಭಿನಯದ 7ನೇ ಸಿನಿಮಾ ‘ಕೆಡಿ’ ಆಗಿದೆ. ಈ ಸಿನಿಮಾದ ಪಾತ್ರಕ್ಕಾಗಿ ನಟ 18 ಕೆಜಿ ತೂಕ ಇಳಿಸಿದ್ದಾರೆ. ಈಗಾಗಲೇ ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾ ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದ ಚುನಾವಣೆ ನಂತರ ಈ ಸಿನಿಮಾ ತೆರೆಗಪ್ಪಳಿಸಿಲಿದೆ. ಇನ್ನು ಕೆಡಿ ಸಿನಿಮಾ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ ರಿಲೀಸ್ ಆಗುವ ಸಾಧ್ಯತೆಯಿದೆ.
KD Movie Coming back to Sandalwood Shilpa Shetty: Do you know for which movie?