ನೀಲಾವರ ಶ್ರೀ ಮಹಿಷಮರ್ದಿನಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ಸಮರ್ಪಣೆ

ಉಡುಪಿ: (New Brahmaratha) ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರ ರಾಜ್ಯ ಹಾಗೂ ಹೊರರಾಜ್ಯದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಕ್ಷೇತ್ರ. ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡಿ, ದೇವರ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಾರೆ. ಈಗಾಗಲೇ ಪ್ರಖ್ಯಾತಿಯನ್ನು ಪಡೆದ ಶ್ರೀ ಕ್ಷೇತ್ರಕ್ಕೆ ಇನ್ನೊಂದು ಆಕರ್ಷಕ ಕೊಡುಗೆಯೊಂದು ಸಲ್ಲಲಿದ್ದು, ಅನೇಕ ವರ್ಷಗಳ ಬಳಿಕ ದೇವಸ್ಥಾನದಲ್ಲಿ ಹೊಸ ಬದಲಾವಣೆಯೊಂದಿಗೆ ನೂತನ ಬ್ರಹ್ಮರಥ ಬೃಹತ್‌ ಮೆರವಣಿಗೆಯ ಮೂಲಕ ದೇವಸ್ಥಾನದ ಪುರಪ್ರವೇಶ ಮಾಡಿದೆ.

ನೀಲಾವರ ಮಕ್ಕಿತೋಟ ಮನೆಯ ಶ್ರೀಮತಿ ಗೌರಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಮನೆಯವರು ಮತ್ತು ಕುಟುಂಬಸ್ಥರಿಂದ ನೀಲಾವರ ಶ್ರೀ ಮಹಿಷಮರ್ಧಿನಿಗೆ ಸೇವಾರೂಪವಾಗಿ ಈ ನೂತನ ಬ್ರಹ್ಮ ರಥವನ್ನು ಸಮರ್ಪಿಸಿದ್ದು, ಇಂದು ಈ ನೂತನ ಬ್ರಹ್ಮರಥವನ್ನು ಸಕಲ ಧಾರ್ಮಿಕ ವಿಧಿವಿಧಾನಗಳಿಂದ ಪುರಪ್ರವೇಶ ಮಾಡಿದೆ.

New Brahmaratha: Dedication of New Brahmaratha to Neelavar Sri Mahishamardini Kshetra

ನೀಲಾವರದ ನೂತನ ಬ್ರಹ್ಮರಥವು ಕೋಟೇಶ್ವರದ ಗೋಪಾಡಿಯ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ ಹಾಗೂ ಕೃಷ್ಣಯ್ಯ ಆಚಾರ್ಯರವರ ಶ್ರೀ ಕಾಳಿಕಾಂಬ ಶಿಲ್ಪಕಲಾದಿಂದ ಭವ್ಯ ಮೆರವಣಿಗೆ ಪ್ರಾರಂಭಗೊಂಡು ಕೋಟೇಶ್ವರ, ಆನೆಗುಡ್ಡೆ, ತೆಕ್ಕಟ್ಟೆ, ಕೋಟ, ಸಾಲಿಗ್ರಾಮ, ಬ್ರಹ್ಮಾವರ, ಕುಂಜಾಲು ಶ್ರೀ ರಾಮ ಮಂದಿರದ ಮೂಲಕವಾಗಿ ನೀಲಾವರ ಕ್ರಾಸ್‌ ಗೆ ವಾಹನಗಳ ಮೂಲಕ ತಲುಪಿದ್ದು, ನಂತರ ನೀಲಾವರ ಕ್ರಾಸ್‌ ನಿಂದ ಕಾಲ್ನಡಿಗೆ ಮೂಲಕವಾಗಿ ಭವ್ಯ ವಾಹನದೊಂದಿಗೆ ಸಂಘ ಸಂಸ್ಥೆಗಳು, ಊರ ಪರವೂರ ಭಕ್ತಾದಿಗಳು, ವಿವಿಧ ಭಜನಾ ತಂಡಗಳೊಂದಿಗೆ, ವೇಷಭೂಷಣ, ಚೆಂಡೆ ವಾದನಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ಪ್ರವೇಶ ಮಾಡಿದೆ.

ನೂತನವಾಗಿ ನಿರ್ಮಾಣಗೊಂಡಿರುವ ರಥವನ್ನು ಆಧುನಿಕ ತಂತ್ರಜ್ಞಾನ ಬಳಸಿರುವ ರಥಶಿಲ್ಪಗಳಿಂದ ನಿರ್ಮಾಣ ಮಾಡಿದ್ದಾರೆ.ಈ ವರೆಗೆ ದೇವಸ್ಥಾನದಲ್ಲಿ ಬಳಸುತ್ತಿದ್ದ ರಥವು ಆಳುಪ ಅರಸರ ಕಾಲದ್ದಾಗಿದ್ದು, ಹಲವು ವರ್ಷಗಳ ಇತಿಹಾಸವನ್ನು ಹೊಂದಿದೆ.ಯಾವುದೇ ಲೋಪದೋಷಗಳಿಲ್ಲದೇ ನೂತನ ರಥವನ್ನು ನಿರ್ಮಾಣ ಮಾಡಿದ್ದು, ಕೋಟೇಶ್ವರದ ಗೋಪಾಡಿಯ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ ಹಾಗೂ ಕೃಷ್ಣಯ್ಯ ಆಚಾರ್ಯರವರ ಕೈಚಳಕದಲ್ಲಿ ಹಲವು ತಿಂಗಳುಗಳ ಕಾಲ ಶ್ರಮವಹಿಸಿ ಈ ರಥವನ್ನು ನಿರ್ಮಾಣ ಮಾಡಲಾಗಿದೆ. ಬೃಹತ್‌ ಮೆರವಣಿಗೆಯೊಂದಿಗೆ ದೇವಸ್ಥಾನದ ಪುರಪ್ರವೇಶ ಮಾಡಿದ ಈ ನೂತನ ಬ್ರಹ್ಮರಥದ ವಿಶೇಷ ರಥೋತ್ಸವ ಮುಂದಿನ ತಿಂಗಳು ಮಾರ್ಚ್‌ 13 ರಂದು ನಡೆಯಲಿದೆ. ಅದೇ ದಿನ ಶ್ರೀ ಮಹಿಷಮರ್ದಿನಿ ದೇವಿಯು ನೂತನ ರಥದ ಮೇಲೆ ಮೊದಲ ಬಾರಿಗೆ ಕುಳಿತು ಭಕ್ತರಿಗೆ ದರ್ಶನ ನೀಡಲಿದ್ದಾಳೆ. ವಿಶೇಷ ವಾಗಿ ನೂತನ ಬ್ರಹ್ಮರಥದ ರಥೋತ್ಸವ ನಡೆಯಲಿದ್ದು, ಇಂದೆಂದೂ ಕಂಡು ಕೇಳರಿಯದ ರೀತಿ ಮಹಿಷಮರ್ದಿನಿ ತಾಯಿ ನೂತನ ಬ್ರಹ್ಮರಥದಲ್ಲಿ ರಾರಾಜಿಸಲಿದ್ದಾಳೆ

https://youtu.be/hg-7E7aUvlo

ಇದನ್ನೂ ಓದಿ : Entry of the new Brahmaratha: ನೀಲಾವರದ ಮಹಿಷಮರ್ಧಿನಿ ಸನ್ನಿಧಾನಕ್ಕೆ ನೂತನ ಬ್ರಹ್ಮರಥದ ಪುರಪ್ರವೇಶ

New Brahmaratha: Dedication of New Brahmaratha to Neelavar Sri Mahishamardini Kshetra

Comments are closed.