ಸದ್ಯ ಭಾರತದ ಚಿತ್ರಮಂದಿರದಲ್ಲಿ ಚರ್ಚೆಯಾಗ್ತಿರೋ ಹಾಗೂ ಕುತೂಹಲ ಮೂಡಿಸಿರೋ ಏಕೈಕ ಸಿನಿಮಾ ಕೆಜಿಎಫ್-2 (KGF 2). ಸಿನಿಮಾ ರಿಲೀಸ್ ಗೆ ಸಿದ್ಧವಾಗ್ತಿರುವಂತೆಯೇ ಸಿನಿಮಾದ ಒಂದೊಂದೇ ಅಸಲಿ ಕತೆಗಳು ಪ್ರೇಕ್ಷಕರ ಎದುರು ಬರ್ತಿವೆ. ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ವೇಳೆಯೇ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂಜಯ್ ದತ್ ಶೂಟಿಂಗ್ ವೇಳೆ ಎದುರಿಸಿದ ಸ್ಥಿತಿ ಏನು ? ಫೈಟ್ ಮಾಡೋ ಸ್ಥಿತಿಯಲ್ಲಿದ್ದರಾ? ಅಧೀರಾ (Adheera) ಇದೆಲ್ಲದರ ಬಗ್ಗೆ ಇಂಟ್ರಸ್ಟಿಂಗ್ ಸಂಗತಿ ಇಲ್ಲಿದೆ ಓದಿ.

ಹೌದು, ಕೆಜಿಎಫ್ ಹಾಗೂ ಕೆಜಿಎಫ್-2 ಎರಡೂ ಸಿನಿಮಾದಲ್ಲಿ ಯಶ್ ರಷ್ಟೇ ಕುತೂಹಲ ಸೃಷ್ಟಿಸಿದ ಪಾತ್ರ ಅಧೀರಾ. ಇಂತಹದೊಂದು ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರನ್ನು ಸೆಳೆದ ಸಂಜಯ್ ದತ್, ಕೆಜಿಎಫ್-2 ಜೊತೆಗಿನ ಪಯಣ ಸುಲಭವಾಗಿರಲಿಲ್ಲ. ಇನ್ನೇನು ಸಿನಿಮಾ ಬಿಡುಗಡೆಗೆ ದಿನಗಣನೆ ನಡೆದಿರುವಾಗ ಹಾಗೂ ಪ್ರಮೋಶನ್ ಸಂಭ್ರಮದಲ್ಲಿರುವಾಗ ಸಂಜಯ್ ದತ್ ಶೂಟಿಂಗ್ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಕೆಜಿಎಫ್-2 ಶೂಟಿಂಗ್ ವೇಳೆ ನನ್ನ ಪಾತ್ರ ಚಾಲೆಂಜಿಂಗ್ ಆಗಿತ್ತು. ನನಗೆ ಕೊಟ್ಟ ಕಾಸ್ಟ್ಯೂಮ್ 20 ಕೆಜಿಯಷ್ಟಿತ್ತು. ಅದನ್ನು ಹಾಕಿಕೊಂಡು ಶೂಟಿಂಗ್ ಮಾಡೋದು ಕಷ್ಟವಾಗುತ್ತಿತ್ತು. ಅದರಲ್ಲೂ ನನಗೆ ಕೊಟ್ಟ ಆಯುಧಗಳೂ ಕೂಡ ತೂಕದಿಂದ ಕೂಡಿದ್ದವು. ಹೀಗಾಗಿ ಶೂಟಿಂಗ್ ಸುಲಭವಾಗಿರಲಿಲ್ಲ ಎಂದು ಸಂಜಯ್ ದತ್ ಹೇಳಿದ್ದಾರೆ.

ಅದರಲ್ಲೂ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಮತ್ತಷ್ಟು ಭಾರದ ಕಾಸ್ಟ್ಯೂಮ್ ಹಾಕಿದ್ದೇವು. ಅದರಲ್ಲೂ ನಾನು ಹಾಗೂ ಯಶ್ ಇಷ್ಟೇ ಭಾರದ ಕಾಸ್ಟ್ಯೂಮ್ ಹಾಕಿಕೊಂಡು ಮರಳು ಹಾಗೂ ಧೂಳಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಸಾಕಷ್ಟು ಕಷ್ಟವಿತ್ತು. ಆದರೂ ನಾವು ಪ್ರೀತಿ ಹಾಗೂ ಖುಷಿಯಿಂದ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಂಜಯ್ ದತ್ ಮಾಹಿತಿ ಹಂಚಿಕೊಂಡಿದ್ದಾರೆ

ತಮ್ಮ ನಟನೆಯ ಬಗ್ಗೆ ಮಾತನಾಡಿದ ಸಂಜಯ್ ದತ್ ನಾನು ಕಲಾವಿದ. ಕಲಾವಿದನಾಗಿಯೇ ಸಾಯುತ್ತೇನೆ. 45 ವರ್ಷದಿಂದ ಸಿನಿಮಾ ರಂಗದಲ್ಲಿದ್ದೇನೆ. ಈ ಪಾತ್ರ ನನಗೆ ತುಂಬ ಸಮಾಧಾನ ಹಾಗೂ ಖುಷಿ ತಂದಿದೆ ಎಂದಿದ್ದಾರೆ. ಕೆಜಿಎಫ್-2 ಶೂಟಿಂಗ್ ವೇಳೆಯೇ ಸಂಜಯ್ ದತ್ ಗೆ ಕ್ಯಾನ್ಸರ್ ಇರೋದು ಪತ್ತೆಯಾಗಿತ್ತು. ಈ ಕಾರಣಕ್ಕಾಗಿ ಕೆಲ ಕಾಲ ಸಂಜಯ್ ದತ್ ಶೂಟಿಂಗ್ ನಿಂದ ದೂರ ಉಳಿದು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದೇ ಕಾರಣಕ್ಕೆ ಚಿತ್ರತಂಡ ಸಂಜಯ್ ದತ್ ಫೈಟ್ ಸೀನ್ ಗಳಿಗೆ ಸಿನಿಮಾ ತಂಡ ಡ್ಯೂಪ್ ಬಳಸಲು ನಿರ್ಧರಿಸಿತ್ತು. ಆದರೆ ಇದಕ್ಕೆ ಸಂಜಯ್ ದತ್ ನಿರಾಕರಿಸಿ ತಾವೇ ಫೈಟ್ ಮಾಡಿದ್ದರು. ಅಷ್ಟಕ್ಕೂ ಕೆಜಿಎಫ್ ಟ್ರೈಲರ್ ರಿಲೀಸ್ ಈವೆಂಟ್ ಹೇಗಿತ್ತು ಅನ್ನೋದನ್ನು ನೋಡಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.
ಇದನ್ನೂ ಓದಿ : KGF Chapter 2 : ಮಹಿಳೆಯರಿಗೆ ಬಿಗ್ ಸಪ್ರೈಸ್ ಕೊಟ್ಟ ಕೆಜಿಎಫ್
ಇದನ್ನೂ ಓದಿ : ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಹೇಳಿದ್ದೇನು ಗೊತ್ತಾ ?
KGF 2 Movie Adheera costume for 20kg says Sanjay Dutt