KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್

‘ಪಾತ್ರ ಹೃದಯಕ್ಕೆ ತಟ್ಟಬೇಕಾದರೆ ಅದರ ಹಿಂದಿರುವ ಭಾವಗಳು ಬಹಳ ಮುಖ್ಯ ಅನ್ನೋದನ್ನು ಕೆಜಿಎಫ್ (KGF 2) ನಲ್ಲಿ ನೋಡ್ತೀರಿ. ನಾವೆಲ್ಲ ಸೆಟ್ ನಲ್ಲಿ ಎಂಜಾಯ್ ಮಾಡ್ಕೊಂಡು, ಕಾಲ ಕಳಕೊಂಡು ಕೆಲ್ಸ ಮಾಡಿದ್ದೇವೆ ಅಂದ್ಕೊಬೇಡಿ. ಪಾತ್ರ, ಸಂದರ್ಭಗಳ ಏನು ಬೇಡ್ತಾ ಇದ್ದವೋ ಅದನ್ನು ಬಹಳ ವೃತ್ತಿಪರವಾಗಿ ಮಾಡಿದ್ದೇವೆ’ ಅಂತ ಪಕ್ಕದಲ್ಲಿ ಸಂಜಯ್ ದತ್ ಅವರನ್ನು ಕೂಡಿಸಿಕೊಂಡು ಹೇಳಿದ್ದರು.

ಯಶ್ ನಂತರ ಸಂಜಯ್ ದತ್ ಈಗ ಮಾತನಾಡಲು ಶುರುಮಾಡಿದ್ದಾರೆ. ಸಂಜಯ್ ದತ್ ಪಾತ್ರವೇ ಇಡೀ ಚಿತ್ರದ ಹೈಲೇಟ್. ಅಧೀರ ಅನ್ನೋದು ಕೆಜಿಎಫ್ -2ನ ಖಳನಾಯಕನ ಪಾತ್ರ. ‘ಈ ಪಾತ್ರ ಒಪ್ಪಿಕೊಳ್ಳಬೇಕಾದರೆ ಸ್ವಲ್ಪ ಹಿಂದು ಮುಂದು ನೋಡಿದೆ. ಸರಿ, ಅಂತ ಒಪ್ಪಿಕೊಂಡ ಮೇಲೆ ಗೊತ್ತಾಯಿತು. ಇದು ನಾನು ಅಂದುಕೊಂಡದ್ದಕ್ಕಿಂತ ಚಾಲೆಂಜಿಂಗ್ ರೋಲ್ ಅಂಥ. ಆದರೆ, ಕಷ್ಟಏನು ಆಗಲಿಲ್ಲ ಬಿಡಿ. ನನ್ನ ಜೊತೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕರು ಪಾತ್ರವನ್ನು ಲೀಲಾಜಾಲವಾಗಿ ಮಾಡಲು ನೆರವಾದರು’ ಎಂದು ಸಂಜಯ್ ದತ್ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ : KGF Chapter 2 Vs Beast : ಕೆಜಿಎಫ್ ಚಾಪ್ಟರ್ -2 Vs ಬೀಸ್ಟ್ : ಇದರಲ್ಲಿ ಗೆಲ್ಲೋರು ಯಾರು?

ಸಂಜಯ್ ದತ್ ಸುಖಾಸುಮ್ಮನೆ ಕಷ್ಟದ ಪಾತ್ರವದು ಅಂತ ಹೇಳಿಲ್ಲ. ಪಾತ್ರಕ್ಕೆ ಬೇಕಾದ ದೇಹರ್ದಾಡ್ಯತೆ, ಪೋಷಾಕುಗಳು ಎಲ್ಲವನ್ನು ಹೊತ್ತೊಯ್ಯಲು ವಯಸ್ಸು ಸಹಕಾರ ನೀಡಬೇಕು. ಆಮೇಲೆ ಪಾತ್ರದ ಒಳಗೆ ಇಳಿಯುವುದು. ಭಾವನೆಗಳನ್ನು ಮೂಡಿಸುವುದು. ಸಂಜಯ್ ಗೆ ಕಷ್ಟ ಆಗಿದ್ದು ಇದೆ ಅಂತೆ.
‘ಸುಮಾರು 25 ಕೆ.ಜಿ ಭಾರ ಇರುವ ಯುದ್ಧ ಕವಚದಂತ ಪೋಷಾಕುಗಳನ್ನು ಧರಿಸಿಕೊಂಡು ಪ್ರತಿದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಈ ಸಂದರ್ಭದಲ್ಲಿ ನನಗೆ ಅನಾರೋಗ್ಯ ಕಾಡಿದ್ದರಿಂದ ಸ್ವಲ್ಪ ಕಷ್ಟ ಎನಿಸಿದ್ದು ಸತ್ಯ. ಆದರೆ, ನನ್ನ ನಟನಾನುಭವದ ಮೂಲಕ ಅದನ್ನು ಹೊಂದಾಣಿಕೆ ಮಾಡಿದ್ದೇನೆ. ಎಲ್ಲವೂ ಅಭಿಮಾನಿಗಳ ಹರಕೆ ಮತ್ತು ಹಾರೈಕೆ ಫಲ’ ಎಂದು ಸಂಜಯ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಜಯ್ ದತ್ ಅವರಿಗೆ ಅಧೀರ ಪಾತ್ರ ಮಾಡುವಾಗ ಅವರ ಕ್ಲಾಸಿಕ್ ಸಿನಿಮಾ ಖಳನಾಯಕ್ ಪಾತ್ರ ನೆನಪಿಗೆ ಬರುತ್ತಿತ್ತಂತೆ. ಅವರ ಪ್ರಕಾರ, ತನ್ನ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸಲು ಮಾಡುವ ಸಾಹಸಪ್ರಧಾನ ಪಾತ್ರ ಅಧೀರ. ಸಂಜಯ್ ಯಶ್ ಜೊತೆ ನಟಿಸುವಾಗ ಬಹಳ ಎಂಜಾಯ್ ಮಾಡಿದ್ದಾರೆ. ಆದರೆ, ಕೆಜಿಎಫ್-2 ಪಾನ್ ಇಂಡಿಯಾ ಸಿನಿಮಾ, ದಕ್ಷಿಣ ಭಾರತದ ಸಿನಿಮಾ ಅಂತ ಬೇರ್ಪಡಿಸುವುದ ಅವರಿಗೆ ಇಷ್ಟವಾಗಲಿಲ್ಲ. ‘ಹೀಗೆ ಯಾಕೆ ಕರೆಯಬೇಕು. ನನ್ನ ಪ್ರಕಾರ ಕೆಜಿಎಫ್-2 ಪಾನ್ ಇಂಡಿಯಾ ಸಿನಿಮಾಕ್ಕಿಂತ ಒಂದು ಕೈ ಮೇಲಿರುವ ಹಿಂದೂಸ್ತಾನಿ ಮೂವಿ’ ಎಂದು ಹೊಗಳಿದ್ದಾರೆ.

ಇದನ್ನೂ ಓದಿ : KGF 2 in Greece : ಕೆಜಿಎಫ್ 2 ಹವಾ! ಗ್ರೀಸ್ ಲ್ಲಿ ಬಿಡುಗಡೆಗೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ

(KGF 2 Don t bifurcate like KGF is pan India south Indian movie it is a Hindustan movie)

Comments are closed.