ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಎಪ್ರೀಲ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರೋದಕ್ಕೆ ರೆಡಿಯಾಗಿದ್ದು, ಖುದ್ದು ನಟ ಯಶ್ ಹಾಗೂ ಚಿತ್ರತಂಡ ದಿನಾಂಕವನ್ನು ಪ್ರಕಟಿಸಿದೆ.
ಕೆಜಿಎಫ್ ಸಿನಿಮಾ ದೇಶದ ವಿದೇಶಗಳಲ್ಲಿಯೂ ಪ್ರಖ್ಯಾತಿಯನ್ನು ಗಳಿಸಿಕೊಂಡಿತ್ತು. ಇದೇ ಕಾರಣಕ್ಕೆ ಕೆಜಿಎಫ್ ಎರಡನೇ ಅವತರಿಣಿಕೆ ಕೂಡ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಟೀಸರ್, ಟ್ರೈಲರ್, ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಬರೆದಿದೆ. ಅಷ್ಟೇ ಯಾಕೆ ಸಿನಿಮಾದ ಹಾಡುಗಳು ದಾಖಲೆಯ ಮೊತ್ತಕ್ಕೆ ಬಿಕರಿಯಾಗಿವೆ. ಅದ್ರಲ್ಲೂ ಕೆಜಿಎಫ್ ಸಿನಿಮಾದ ನೋಡಿದ್ದ ಅಭಿಮಾನಿಗಳು ಇದೀಗ 2ನೇ ಭಾಗವನ್ನು ನೋಡಲು ಕಾತುರರಾಗಿದ್ದಾರೆ.
ಈಗಾಗಲೇ ಹಲವು ದಿನಾಂಕಗಳಂದು ಸಿನಿಮಾ ಬಿಡುಗಡೆಯಾಗುತ್ತೆ ಅಂತಾ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಕೊನೆಗೂ ಕೆಜಿಎಫ್ ತಂಡ ಗುಡ್ನ್ಯೂಸ್ ಕೊಟ್ಟಿದೆ. ಎಪ್ರೀಲ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರೋದು ಖಚಿತವಾಗಿದೆ. ಇಂದಿನ ಅನಿಶ್ಚಿತತೆಗಳು ನಮ್ಮ ಸಂಕಲ್ಪವನ್ನು ವಿಳಂಬಗೊಳಿಸುತ್ತವೆ. ಆದರೆ ನಾವು ಈ ಮೊದಲೇ ಭರವಸೆ ನೀಡಿದಂತೆ 2022 ರ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ಸಂಜಯ್ ದತ್, ರವೀನಾ ಟೆಂಡನ್ ಸೇರಿದಂತೆ ಸಾಕಷ್ಟು ನಟ, ನಟಿಯರು ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರವಿ ಬಸ್ರೂರು ಮ್ಯೂಸಿಕ್ ಮೋಡಿ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.