ಭಾನುವಾರ, ಏಪ್ರಿಲ್ 27, 2025
HomeCinemakgf-2 star yash : ಯಶ್​ ಮುಂದಿನ ಸಿನಿಮಾ ಕುರಿತಂತೆ ಹೊರಬಿತ್ತು ಬಹು ಮುಖ್ಯ ಮಾಹಿತಿ

kgf-2 star yash : ಯಶ್​ ಮುಂದಿನ ಸಿನಿಮಾ ಕುರಿತಂತೆ ಹೊರಬಿತ್ತು ಬಹು ಮುಖ್ಯ ಮಾಹಿತಿ

- Advertisement -

kgf-2 star yash : ಕೆಜಿಎಫ್​ 2 ಸಿನಿಮಾದ ಮೂಲಕ ನಟ ಯಶ್​​ ಯಶಸ್ಸಿನ ಉತ್ತುಂಗವನ್ನೇರಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕಿಚ್ಚು ಹೆಚ್ಚಿಸಿದ ಈ ಸಿನಿಮಾ ಕೇವಲ ಯಶ್​ಗೆ ಹೆಸರು ತಂದುಕೊಟ್ಟಿದ್ದು ಮಾತ್ರವಲ್ಲದೇ ಸ್ಯಾಂಡಲ್​ವುಡ್​ನ್ನು ಇಡಿ ವಿಶ್ವವೇ ತಿರುಗಿ ನೋಡುವಂತೆ ಮಾಡಿತ್ತು. ಬರೋಬ್ಬರಿ 1300 ಕೋಟಿ ಸಿನಿಮಾ ಕಲೆಕ್ಷನ್​ ಮಾಡುವ ಮೂಲಕ ಕೆಜಿಎಫ್​ 2 ಸಿನಿಮಾದ ಸ್ಯಾಂಡಲ್​ವುಡ್​​ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.


ಕೆಜಿಎಫ್​ 2 ಸಿನಿಮಾದ ಬಳಿಕ ಯಶ್​ ಯಾವ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಪ್ರಶ್ನೆ ಇದೀಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಕಾಡುತ್ತಿದೆ. ಒಂದು ಸಿನಿಮಾ ಇಷ್ಟೊಂದು ಮಟ್ಟಿಗೆ ಯಶಸ್ಸು ಸಾಧಿಸಿದ ಬಳಿಕ ಆ ನಟನ ಮುಂದಿನ ಹೆಜ್ಜೆಗಳು ಕೂಡ ಅಷ್ಟೇ ಜಾಗರೂಕತೆಯಿಂದ ಕೂಡಿರಬೇಕು. ಹೀಗಾಗಿ ಯಶ್​ ಮುಂದಿನ ಸಿನಿಮಾ ಅವರ ಸಿನಿಮಾ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರೋದಂತೂ ಸತ್ಯ . ಈ ಎಲ್ಲಾ ಲೆಕ್ಕಾಚಾರಗಳ ನಡುವೆಯೇ ಸೋಶಿಯಲ್​ ಮೀಡಿಯಾದಲ್ಲಿ ಆರಂಭವಾಗಿದ್ದೇ #Yash19 ಎಂಬ ಟ್ರೆಂಡ್​.


ಹೌದು..! ರಾಕಿಂಗ್​ ಸ್ಟಾರ್​ ಯಶ್​ರ ಮುಂದಿನ ಸಿನಿಮಾ ಯಾವುದು ಎಂಬುದರ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಆರಂಭವಾಗಿದ್ದ ಟ್ರೆಂಡ್​ #Yash19 . ರಾಕಿಭಾಯ್​​ 19ನೇ ಸಿನಿಮಾ ಯಾವುದು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ, ದಿಲ್​ ರಾಜು ಜೊತೆಯಲ್ಲಿ ಮುಂದಿನ ಸಿನಿಮಾ ಮಾಡ್ತಾರೆ ಯಶ್​ ಎಂದು ಕೆಲವರು ಹೇಳ್ತಿದ್ರೆ ಇನ್ನೂ ಕೆಲವರು ಯಶ್​ ಮುಂದಿನ ಸಿನಿಮಾಗೆ ಶಂಕರ್​ ನಿರ್ದೇಶನ ಮಾಡ್ತಾರೆ ಎಂದು ಹೇಳ್ತಿದ್ದಾರೆ. ಇಷ್ಟು ಸಾಲದು ಅಂತಾ ಇನ್ನೂ ಕೆಲವರು ಮುಂದಿನ ಐದು ವರ್ಷಗಳಿಗೆ ಆಗುವಷ್ಟು ಸಿನಿಮಾ ಯಶ್​ ಕೈಯಲ್ಲಿದೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ #Yash19 ಟ್ರೆಂಡ್​​ನಲ್ಲಿರುವ ವದಂತಿಗಳೆಲ್ಲವೂ ಸುಳ್ಳು ಎಂಬ ವಿಚಾರ ಇದೀಗ ಉನ್ನತ ಮೂಲಗಳಿಂದ ತಿಳಿದು ಬಂದಿದೆ.


ತೆಲುಗಿನ ಖ್ಯಾತ ನಿರ್ಮಾಪಕ ದಿಲ್​ ರಾಜು ಯಶ್​ ಕೇಳಿದಷ್ಟು ಸಂಭಾವನೆ ಕೊಡಲು ನಾನು ರೆಡಿ ಎಂದು ಹೇಳಿರುವುದು ಕೂಡ ಸುದ್ದಿಯಾಗ್ತಿದ್ದು ಮುಂದಿನ ಬಾರಿ ಯಶ್​ ದಿಲ್​ ರಾಜು ಜೊತೆಯಲ್ಲೇ ಸಿನಿಮಾ ಮಾಡ್ತಾರೆ ಎಂದೂ ಸಹ ಹೇಳಲಾಗ್ತಿದೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಯಶ್​ ಕೆಜಿಎಫ್​ 2 ಸಿನಿಮಾಗೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಹಾಗಾದರೆ ಮುಂದಿನ ಸಿನಿಮಾಗೆ ಯಶ್​ 100 ಕೋಟಿ ಸಂಭಾವನೆ ಪಡೆಯಬಹುದೇ ಎಂಬೆಲ್ಲ ಪ್ರಶ್ನೆಗಳು ಸಹ ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಹರಿದಾಡ್ತಿದೆ.

ಇದನ್ನು ಓದಿ : Unidentified body found ಒತ್ತಿನೆಣೆಯಲ್ಲಿ ಅಪರಿಚಿತ ಶವ ಪತ್ತೆ : ಆತಂಕದಲ್ಲಿ ಸ್ಥಳೀಯ ನಿವಾಸಿಗಳು

ಇದನ್ನೂ ಓದಿ : KGF Yash New Getup : ಹೊಸ ಸಿನಿಮಾಗೆ ಹೊಸ ಗೆಟಪ್ : 15 ಕೆಜಿ ತೂಕ ಇಳಿಸಲು ನಟ ಯಶ್ ಸರ್ಕಸ್

kgf-2 star yash to not announce his next amid huge buzz by fans on yash19

RELATED ARTICLES

Most Popular