ಭಾನುವಾರ, ಏಪ್ರಿಲ್ 27, 2025
HomeCinemaKGF 2 trailer New Record : ದಾಖಲೆಗಳನ್ನು ಭೇಟೆಯಾಡಿದ ರಣಬೇಟೆಗಾರ : 17 ಮಿಲಿಯಮ್ಸ್...

KGF 2 trailer New Record : ದಾಖಲೆಗಳನ್ನು ಭೇಟೆಯಾಡಿದ ರಣಬೇಟೆಗಾರ : 17 ಮಿಲಿಯಮ್ಸ್ ವೀವ್ಸ್ ಪಡೆದ ಕೆಜಿಎಫ್-2 ಟ್ರೇಲರ್

- Advertisement -

ನೀರಿಕ್ಷೆಯಂತೆ ಭಾರತದ ಸಿನಿ ಇತಿಹಾಸದಲ್ಲಿ ಹೊಸ ಶಕೆ ಬರೆಯುವಂತೆ ಕೆಜಿಎಫ್-2 ಟ್ರೇಲರ್ (KGF 2 trailer) ಸಾಗುತ್ತಿದೆ. ರಿಲೀಸ್ ಗೂ ಮುನ್ನವೇ ಹಳೆಯ ದಾಖಲೆ ಗಳನ್ನು ಮುರಿಯುವ ವಿಶ್ವಾಸ ಮೂಡಿಸಿದ್ದ ಈ ಸಿನಿಮಾ ತನ್ನ ನೀರಿಕ್ಷೆಯನ್ನು ಹುಸಿ ಮಾಡಿಲ್ಲ. ಟ್ರೇಲರ್ ಬಿಡುಗಡೆ ವೇಳೆಯೇ ಲಕ್ಷಾಂತರ ಜನರ ವೀಕ್ಷಣೆಗೆ ಸಿಕ್ಕಿದ್ದ ಟ್ರೇಲರ್ ಈಗ ರಿಲೀಸ್ ಆದ 24 ಗಂಟೆಯಲ್ಲೇ ಎಲ್ಲ ಹಳೆಯ ದಾಖಲೆಗಳನ್ನು ಹಿಂದಿಕ್ಕಿ ಮುಂದಕ್ಕೆ ಸಾಗಿದೆ.

KGF 2 trailer New Record views 17 millions

ರವಿವಾರ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಹುನೀರಿಕ್ಷಿತ ಕೆಜಿ ಎಫ್-2 (KGF 2 trailer ) ಸಿನಿಮಾದ ಟ್ರೇಲರ್ ತೆರೆ ಕಂಡಿತು. ಕನ್ನಡದಲ್ಲಿ ಶಿವರಾಜ್ ಕುಮಾರ್ ಹಾಗೂ ಇತರ ಭಾಷೆಗಳಲ್ಲಿ ಬೇರೆ ಬೇರೆ ಸೆಲೆಬ್ರೆಟಿಗಳು ಟ್ರೇಲರ್ ಲಾಂಚ್ ಮಾಡಿದ್ರು. ಟ್ರೇಲರ್ ಲಾಂಚ್ ಆದ ಬಳಿಕ ತನ್ನ ನಾಗಾಲೋಟ ಮುಂದುವರೆಸಿದ್ದು, ಮಧ್ಯಾಹ್ನ ಅಂದ್ರೇ ಸೋಮವಾರ ಮಧ್ಯಾಹ್ನದ ವೇಳೆಗೆ ಕೆಜಿಎಫ್-2 ಕನ್ನಡ ಟ್ರೇಲರ್ ಬರೋಬ್ಬರಿ 1.7 ಕೋಟಿ ಅಂದ್ರೇ 17 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

KGF 2 trailer New Record views 17 millions

ಏಪ್ರಿಲ್​ 14ರಂದು ಐದು ಭಾಷೆಗಳಲ್ಲಿ ಕೆಜಿಎಫ್​ 2 (KGF 2 trailer ) ಸಿನಿಮಾ ತೆರೆಗೆ ಬರುತ್ತಿದ್ದು, ಇದಕ್ಕಾಗಿ ಈಗ ಅಭಿಮಾನಿಗಳು ದಿನಗಣನೆ ಆರಂಭಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟ್ರೇಲರ್​ ಈಗಾಗಲೇ ತೆರೆಕಂಡಿದ್ದು, ಸೋಷಿಯಲ್ ಮೀಡಿಯಾದಲ್ಲೂ ಧೂಳೆಬ್ಬಿಸು ತ್ತಿದೆ. ಹಿಂದಿಯಲ್ಲಿ ಅತಿ ಹೆಚ್ಚು ಅಂದರೆ, 3.3 (33 ಮಿಲಿಯನ್​) ಕೋಟಿ ವೀವ್ಸ್​ ಆಗಿದೆ. ತಮಿಳಿನಲ್ಲಿ 1 ಕೋಟಿ (10 ಮಿಲಿಯನ್​), ತೆಲುಗಿನಲ್ಲಿ 1.2 ಕೋಟಿ (12 ಮಿಲಿಯನ್​) ವೀಕ್ಷಣೆ ಕಂಡಿದೆ. ಮಲಯಾಳಂನಲ್ಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

KGF 2 trailer New Record views 17 millions

ಮಲಯಾಳಂನಲ್ಲಿ ಈ ಸಿನಿಮಾದ ಟ್ರೇಲರ್​ 58 ಲಕ್ಷ ಬಾರಿ ವೀಕ್ಷಣೆ ಕಂಡಿದ್ದು, ಮಾಳವಿಕಾ ಓಫನಿಂಗ್ ಡೈಲಾಗ್, ‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’, ‘ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣಹದ್ದು ಗಳನ್ನು ಕೇಳು’ ಎಂಬಿತ್ಯಾದಿ ಡೈಲಾಗ್​ಗಳು ಹಾಗೂ ಯಶ್ ಖಡಕ್ ಲುಕ್, ಹಾರಿಬಲ್ ಫೈಟ್ ಟ್ರೇಲರ್ ನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಕೆಜಿಎಫ್-2 ಸಿನಿಮಾದ (KGF 2 trailer ) ಈ ಟ್ರೇಲರ್ ಈಗಾಗಲೇ ತೆರೆಕಂಡ ಕೆಜಿಎಫ್, ಬಾಹುಬಲಿ, ಸಾಹೋ ಸೇರಿದಂತೆ ಹಲವು ಬಿಗ್ ಬಜೆಟ್ ಮೂವಿಗಳ ಎಲ್ಲ ದಾಖಲೆ ಬರೆದು ಮುನ್ನುಗ್ಗುವ ಭರವಸೆ ಮೂಡಿಸಿದೆ.

ಇದನ್ನೂ ಓದಿ : ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ‌ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ಕೆಜಿಎಫ್-2 ಟ್ರೇಲರ್ ರಿಲೀಸ್‌ : ರಾಕಿ ಬಾಯ್ ಲುಕ್ ಗೆ ಫ್ಯಾನ್ಸ್ ಫಿದಾ

KGF 2 trailer New Record views 17 millions

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular