Nikhil Sumalatha : ಅನುಕಂಪವೇ ಸುಮಲತಾ ಗೆ ಅಸ್ತ್ರ : ಮತ್ತೆ ಟಾಕ್ ಫೈಟ್ ಗೆ ನಾಂದಿಹಾಡಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಒಂದು ಕಾಲದಲ್ಲಿ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ರಾಜಕೀಯ ಈಗ ಮತ್ತೆ ಸದ್ದು ಮಾಡುತ್ತಿದ್ದು, ಎಚ್.ಡಿ.ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ನಡೆಯುತ್ತಿದ್ದ ಟಾಕ್ ಮತ್ತು ಟ್ವೀಟ್ ಗೆ ಈ ಭಾರಿ ಎಚ್ಡಿಕೆ ಪುತ್ರರತ್ನ ನಿಖಿಲ್ ಕುಮಾರ್ ಸ್ವಾಮಿ (nikhil kumaraswamy ) ಎಂಟ್ರಿಕೊಟ್ಟಿದ್ದು, ಯಾವಾಗಲೂ ಅನುಕಂಪ ಕೆಲಸಕ್ಕೆ ಬರಲ್ಲ. ಈಗಲಾದರೂ ಸುಮಲತಾ (Sumalatha Ambareesh ) ಅವರು ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಜನರ ಬಳಿ ಹೋಗಲಿ ಎಂದು ಕಿವಿ ಮಾತು ಹೇಳೋ ಮೂಲಕ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಟಾಕ್ ಫೈಟ್ ಗೆ ಮುನ್ನುಡಿ ಬರೆದಿದ್ದಾರೆ‌.

ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಂಸದರಾಗಿ ಮಂಡ್ಯ ಜಿಲ್ಲೆಗೆ ಸುಮಲತಾ ಅವರ ಕೊಡುಗೆ ಏನು? ಬೇರೆಯವರನ್ನು ದೂರುವ ಬದಲು ಅವರು ತಮ್ಮನ್ನು ತಾವು ಆತ್ಮಾವಲೋಕನ‌ ಮಾಡಿಕೊಳ್ಳಲಿ ಎಂದು ಕುಟುಕಿದ್ದಾರೆ. ಮಂಡ್ಯದ ಜೆಡಿಎಸ್ ಶಾಸಕರು ಕೆಲಸ‌ಮಾಡಿಲ್ಲ ಎಂದು ಸುಮಲತಾ ಅವರು ದೂರುತ್ತಾರೆ. ಅವರೆಲ್ಲ ಈಗಾಗಲೇ ಹಲವು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಕೆಲಸ ಮಾಡದೇ ಇದ್ದರೇ ಶಾಸಕರನ್ನು ಜನರು ಪ್ರಶ್ನಿಸುತ್ತಾರೆ. ಸುಮಲತಾ ಅವರು ಶಾಸಕರನ್ನು ಗಮನಿಸುವ ಬದಲು ಅವರಿಗೆ 2024 ರವರೆಗೆ ಅಧಿಕಾರವಿದೆ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಲಿ.

ಅದನ್ನು ಬಿಟ್ಟು ಪ್ರತಿ ಸಲವೂ ಅನುಕಂಪದ ಅಸ್ತ್ರವೇ ಬಳಕೆಗೆ ಬರೋದಿಲ್ಲ ಎಂದಿರುವ ನಿಖಿಲ್ ಕುಮಾರಸ್ವಾಮಿ ಸುಮಲತಾ ಅವರು ಅನುಕಂಪದ ಆಧಾರದ ಮೇಲೆಯೇ ಗೆದ್ದು ಬಂದಿದ್ದಾರೆ ಎಂದು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ. ಪ್ರತಿಭಾರಿಯೂ ಸುಮಲತಾ ಜಿಲ್ಲೆಗೆ ಜಗಳ ಮಾಡಲೆಂದೇ ಬರುತ್ತಾರೆ.‌ಕಾಲು ಕರೆದುಕೊಂಡು ಎಲ್ಲರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಇದು ಸರಿಯಲ್ಲ. ಮುಂದಿನ‌ಚುನಾವಣೆಯಲ್ಲಿ ಸುಮಲತಾಗೆ ಜನರೇ ಪಾಠ ಕಲಿಸುತ್ತಾರೆ ಎಂದು ನಿಖಿಲ್ ಎಚ್ಚರಿಸಿದ್ದಾರೆ.

ಕೆಲ‌ದಿನಗಳಿಂದ ಮಂಡ್ಯದ ಜೆಡಿಎಸ್ ಶಾಸಕರು ಹಾಗೂ ಪಕ್ಷೇತರ ಸಂಸದೆ ನಡುವೆ ಅಭಿವೃದ್ಧಿ ವಿಚಾರಕ್ಕೆ ಕಿತ್ತಾಟ ನಡೆದಿದೆ.‌ ಶಾಸಕರು ಮಾಡಬೇಕಿರುವ ಕೆಲಸ ಗಳನ್ನು ಸಂಸದರೇ ಮಾಡುವ ಸ್ಥಿತಿ ಇದೆ ಎಂದು ಸಂಸದೆ ಸುಮಲತಾ ಸದಾ ಆರೋಪಿಸುತ್ತಲೇ ಬಂದಿದ್ದಾರೆ. ಇದಕ್ಕೆ ಎಂಎಲ್ ಎ ಗಳಾದ ಸುರೇಶ್ ಗೌಡ, ಪುಟ್ಟರಂಗ‌ಶೆಟ್ಟಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು ಸುಮಲತಾ ಹೇಳಿಕೆಯನ್ನು ಖಂಡಿಸಿದ್ದಾರೆ. ಇದೇ ಕಾರಣಕ್ಕೆ ಮಂಡ್ಯದಲ್ಲಿ ಮತ್ತೆ ಸುಮಲತಾ ವರ್ಸಸ್ ಜೆಡಿಎಸ್ ರಾಜಕಾರಣ ರಂಗೇರಿದ್ದು ಯಾವ ಹಂತಕ್ಕೆ ತಲುಪುತ್ತೇ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಮೇಕೆದಾಟು ವಿಚಾರವಾಗಿ ತಮಿಳುನಾಡಿನ ನಿರ್ಣಯ ಖಂಡಿಸಿದ ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ, ಹೊಸ ವಿವಾದಕ್ಕೆ ನಾಂದಿ ಹಾಡಿದ ಸಿದ್ಧರಾಮಯ್ಯ

nikhil kumaraswamy vs Sumalatha Ambareesh

Comments are closed.