ಕೆಜಿಎಫ್ ಹಿಂದಿ ಡಬ್ಬಿಂಗ್ ನಲ್ಲಿ ಗಲೀ ಗಲೀ ಎಂದು ಕುಣಿದಿದ್ದ ನಟಿ ಮೌನಿ ರಾಯ್ (KGF Actress Mouni Roy) ಹಳದಿ ಹಚ್ಚಿಕೊಂಡು ಹಸೆಮಣೆ ಏರಿದ್ದಾರೆ. ಗೋವಾದ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ಮೌನಿ ರಾಯ್ ಕಲ್ಯಾಣೋತ್ಸವ ನಡೆದಿದೆ. ಈ ಅದ್ದೂರಿ ಮದುವೆಯಲ್ಲಿ ಮೌನಿ ತಮ್ಮ ಬಹುಕಾಲದ ಗೆಳೆಯ ಹಾಗೂ ಉದ್ಯಮಿ ಸೂರಜ್ ನಂಬಿಯಾರ ಕೈಹಿಡಿದಿದ್ದಾರೆ. ಕರೋನಾ ನಿಯಮಗಳ ಹಿನ್ನೆಲೆಯಲ್ಲಿ ಈ ಮದುವೆಗೆ ಎರಡು ಕುಟುಂಬಸ್ಥರು ಹಾಗೂ ಕೆಲ ಆತ್ಮೀಯ ಬಂಧುಗಳು ಸ್ನೇಹಿತರು ಮಾತ್ರ ಸಾಕ್ಷಿಯಾಗಿದ್ದಾರೆ. ಅದ್ದೂರಿಯಾಗಿ ಹಳದಿ, ಮೆಹೆಂದಿ ಶಾಸ್ತ್ರಗಳ ಬಳಿಕ ಇಂದು ಮಾಂಗಲ್ಯ ಧಾರಣೆ ನಡೆದಿದೆ.

ಕೇರಳ ಮೂಲದ ಸೂರಜ್ ನಂಬಿಯಾರ್ ಹಾಗೂ ಬಂಗಾಳ ಮೂಲದ ಮೌನಿ ರಾಯ್ ರದ್ದು ಪ್ರೇಮ ವಿವಾಹ. ಹೀಗಾಗಿ ಮಧ್ಯಾಹ್ನ ಕೇರಳದ ನಂಬಿಯಾರ್ ಹಾಗೂ ಮಲೆಯಾಳಂ ಶಾಸ್ತ್ರದಂತೆ ಮದುವೆ ನಡೆದಿದೆ. ಸಂಜೆ ಮೌನಿ ರಾಯ್ ಮೂಲಕ ಬಂಗಾಳಿಯಲ್ಲಿ ಮದುಗೆ ಶಾಸ್ತ್ರ ನಡೆಯಲಿದೆ. ಕೇರಳ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಮೌನಿ ರಾಯ್ ಬಿಳಿ ಬಣ್ಣಕ್ಕೆ ಕೆಂಪು ಅಂಚಿನ ರೇಷ್ಮೆ ಧರಿಸಿದ್ದರೇ ವರ ಸೂರಜ್ ಬಿಳಿ ಪಂಚೆಯ ಮೇಲೆ ಗೋಲ್ಡನ್ ಶರ್ಟ್ ಧರಿಸಿದ್ದರು.

ಇದಕ್ಕೂ ಮುನ್ನ ಅಚ್ಚ ಹಳದಿ ಬಣ್ಣದ ದಿರಿಸಿನಲ್ಲಿ ಮೌನಿ ರಾಯ್ ತಮ್ಮ ಹಳದಿ ಶಾಸ್ತ್ರ ಮಾಡಿಕೊಂಡಿದ್ದು ಸಖತ್ತಾಗಿ ಡ್ಯಾನ್ಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಕೊರೋನಾ ನಿಯಮಗಳ ಅನ್ವಯ ಮೌನಿ ರಾಯ್ ಹೆಚ್ಚಿನ ಜನರನ್ನು ಮದುವೆಗೆ ಆಹ್ವಾನಿಸಿಲ್ಲ ಎನ್ನಲಾಗಿದೆ. ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ನಡೆಸೋ ಪ್ಲ್ಯಾನ್ ಇದೆಯಂತೆ. ಬಾಲಿವುಡ್ ಮಂದಿರಾ ಬೇಡಿ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ಮೌನಿ ರಾಯ್ ಗೆ ಶುಭಹಾರೈಸಿದ್ದಾರೆ.

ಕ್ಯೂಂ ಕೀ ಕಬಿ ಸಾಸ್ ಬೀ ಬಹುಥೀ, ನಾಗಿನ್ ಸೇರಿದಂತೆ ಹಲವು ಸೀರಿಯಲ್ ನಲ್ಲಿ ನಟಿಸಿದ ಮೌನಿ ರಾಯ್ ಗೆ ನಾಗಿನ್ ಸೀರಿಯಲ್ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸದಾ ಹಾಟ್ ಪೋಟೋಗಳಿಂದಲೇ ಫೇಮಸ್ ಆಗಿರೋ ಮೌನಿ ರಾಯ್ ಕೆಜಿಎಫ್ ಸಿನಿಮಾದ ನೃತ್ಯ ಕ್ಕಾಗಿ ಜನರ ಮನಸೆಳೆದಿದ್ದಾರೆ.
ಸದಾ ಟ್ರಿಪ್ ಹಾಗೂ ಹಾಟ್ ಪೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲ ಆಕ್ಟಿವ್ ಆಗಿರೋ ಮೌನಿರಾಯ್ ಮದುವೆಗೆ ಅಭಿಮಾನಿಗಳು ಶುಭಹಾರೈಸಿದ್ದು ಪೋಟೋ ನೋಡಿ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಅಪ್ಪುಗೆ ವಿಭಿನ್ನ ಗೌರವ ಸಲ್ಲಿಕೆ : ಜೇಮ್ಸ್ ಸಿನಿಮಾ ರಿಲೀಸ್ ವೇಳೆ ತೆರೆಗೆ ಬರಲ್ಲ ಬೇರೆ ಸಿನಿಮಾ !
ಇದನ್ನೂ ಓದಿ : ಸುದೀಪ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ : ವಿಕ್ರಾಂತ್ ರೋಣ ರಿಲೀಸ್ ಮುಂದೂಡಿಕೆ
( KGF Actress Mouni Roy and Suraj Nambiar marry as per Bengali rituals)